Best Investment Plan: ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ನೀವೇನು ಯೋಜನೆ ರೂಪಿಸಿರುವಿರಿ? ಒಂದು ವೇಳೆ ನೀವು ಯಾವುದೇ ಯೋಜನೆ ರೂಪಿಸಿಲ್ಲ ಎಂದಾದರೆ, ಇಂದು ನಾವು ನಿಮಗೆ ಸೂಪರ್ ಯೋಜನೆಯೊಂದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಈ ಯೋಜನೆಯಲ್ಲಿ ನೀವು ದಿನವೊಂದಕ್ಕೆ ಕೇವಲ ಅತ್ಯಲ್ಪ ಹೂಡಿಕೆ ಮಾಡುವ ಮೂಲಕ ಕೋಟಿ ಹಣ ಸಂಪಾದಿಸಬಹುದು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ನೀವು ಒಂದು ಕಪ್ ಕಾಫಿ ಕುಡಿಯಲು ಹೋದರೆ, ನೀವು ರೂ.20ನ್ನು ಪಾವತಿಸಬೇಕಾಗುತ್ತದೆ. ನಾವು ಹೇಳಲು ಹೊರಟಿರುವ ಈ ಹೂಡಿಕೆಯ ಬಗ್ಗೆ ನೀವು ತಜ್ಞರ ಸಲಹೆ ಕೂಡ ಪಡೆಯಬಹುದು. ಯಾವುದೇ ಹೂಡಿಕೆಯ ಯೋಜನೆಯಲ್ಲಿ ನೀವು ಎಷ್ಟು ಬೇಗ ಹೂಡಿಕೆಯನ್ನು ಆರಂಭಿಸುವಿರೋ, ನಿಮಗೆ ಅಷ್ಟೇ ಬೇಗ ಅದರ ಲಾಭ ಕೂಡ ಸಿಗುತ್ತದೆ. 


COMMERCIAL BREAK
SCROLL TO CONTINUE READING

ಸಣ್ಣ ಹೂಡಿಕೆಯಿಂದ ದೊಡ್ಡ ನಿಧಿಯನ್ನೇ ರಚಿಸಬಹುದು
ನೀವು ದಿನವೊಂದಕ್ಕೆ ಕೇವಲ ಒಂದು ಸಣ್ಣ ಹೂಡಿಕೆಯನ್ನು ಮಾಡಿ ದೊಡ್ಡ ಮೊತ್ತವನ್ನೇ ರಚಿಸಬಹುದು. ಸಣ್ಣ ಹೂಡಿಕೆಯೊಂದಿಗೆ ನೀವು ದೊಡ್ಡ ಕಾರ್ಪಸ್ ಹೇಗೆ ರಚಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇಲ್ಲಿ ನಾವು ನಿಮಗೆ ತಿಂಗಳಿಗೆ 500 ರೂಪಾಯಿಯ ಪ್ಲಾನ್ ಬಗ್ಗೆ ಹೇಳುತ್ತಿದ್ದೇವೆ. ಅಂದರೆ ದಿನಕ್ಕೆ ಸುಮಾರು 16.66 ರೂ.(17 ರೂ.) ಮಾತ್ರ ಎಂದರ್ಧ. ಪ್ರತಿದಿನ 17 ರೂಪಾಯಿ ಉಳಿಸುವುದು ದೊಡ್ಡ ವಿಷಯವಲ್ಲ.


ಪ್ರತಿ ತಿಂಗಳು 500 ರೂಪಾಯಿಗಳ SIP ಮಾಡಿ
ಆರಂಭದಲ್ಲಿ, ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ತಿಂಗಳಿಗೆ 500 ರೂಪಾಯಿಗಳ ಎಸ್‌ಐಪಿಯೊಂದಿಗೆ, ಮಿಲಿಯನೇರ್ ಆಗುವ ನಿಮ್ಮ ಕನಸು ನನಸಾಗಬಹುದು. 500 ರೂ.ಗಳಿಂದ 1 ಕೋಟಿ ರೂ.ಗಳ ನಿಧಿಯನ್ನು ಹೇಗೆ ರಚಿಸಬೇಕು ನಿಮಗೆ ತಿಳಿದಿದೆಯೇ? ಇದಕ್ಕಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ನೀವು ದಿನಕ್ಕೆ 17 ರೂಪಾಯಿ (ತಿಂಗಳಿಗೆ 500 ರೂಪಾಯಿ) ಹೂಡಿಕೆ ಮಾಡಬೇಕು. ಕಳೆದ ಕೆಲವು ವರ್ಷಗಳಲ್ಲಿ, ಮ್ಯೂಚುವಲ್ ಫಂಡ್‌ಗಳು ಶೇ.20 ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿವೆ.


ನಿಮಗೆ ಶೇ.15 ರಿಂದ ಶೇ.20 ರಷ್ಟು ಲಾಭ ಸಿಗುತ್ತದೆ!
ಪ್ರತಿ ದಿನ 17 ರೂಪಾಯಿ ಅಂದರೆ ತಿಂಗಳಿಗೆ 500 ರೂಪಾಯಿ ಹೂಡಿಕೆ ಮಾಡಬೇಕು. ಈ ಮೊತ್ತವನ್ನು 20 ವರ್ಷಗಳವರೆಗೆ ಠೇವಣಿ ಮಾಡುವ ಮೂಲಕ ನೀವು 1.2 ಲಕ್ಷ ರೂ. ಸಂಗ್ರಹಿಸಬಹುದು. 20 ವರ್ಷಗಳಲ್ಲಿ ಈ ಮೊತ್ತದ ಮೇಲೆ ನಿಮ್ಮ ವಾರ್ಷಿಕವಾಗಿ ಕೇವಲ ಶೇ.15 ರಷ್ಟು ಬಂದರೂ ಕೂಡ ನಿಮ್ಮ ನಿಧಿಯು 7 ಲಕ್ಷ 8 ಸಾವಿರಕ್ಕೆ ಹೆಚ್ಚಾಗುತ್ತದೆ. ನಾವು 20 ಪ್ರತಿಶತ ವಾರ್ಷಿಕ ಆದಾಯದ ಬಗ್ಗೆ ಮಾತನಾಡಿದರೆ, ಈ ನಿಧಿಯು 15.80 ಲಕ್ಷಕ್ಕೆ ಹೋಗುತ್ತದೆ.


ಇದನ್ನೂ ಓದಿ-7th Pay Commission: ಬಂಪರ್ ಲಾಟರಿ ಹೊಡೆದ ಸರ್ಕಾರಿ ನೌಕರರು! ಖಾತೆಗೆ ಬಂತು ಭಾರಿ ಮೊತ್ತ, ಇಲ್ಲಿದೆ ಲಿಸ್ಟ್


30 ವರ್ಷಗಳ ಹೂಡಿಕೆಯಿಂದ ನೀವು ಕೋಟ್ಯಾಧಿಪತಿಯಾಗಬಹುದು
ನೀವು 30 ವರ್ಷಗಳವರೆಗೆ ಪ್ರತಿ ತಿಂಗಳು 500 ರೂ ಹೂಡಿಕೆ ಮಾಡಿದರೆ, ಒಟ್ಟು 30 ವರ್ಷಗಳಲ್ಲಿ ನೀವು ಮಾಡಿದ ಹೂಡಿಕೆ ಒಟ್ಟು 1.8 ಲಕ್ಷ ರೂ. ಆಗುತ್ತದೆ. ಈಗ ನೀವು 30 ವರ್ಷಗಳವರೆಗೆ ಶೇ.20 ವಾರ್ಷಿಕ ಆದಾಯವನ್ನು ಪಡೆದರೆ, ನಿಮ್ಮ ನಿಧಿಯು 1.16 ಕೋಟಿಗಳಿಗೆ ತಲುಪುತ್ತದೆ. ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳಲ್ಲಿ ಕಂಪೌಂಡಿಂಗ್ ಲಾಭವನ್ನು ಪಡೆಯುತ್ತಾರೆ. ಪ್ರತಿ ತಿಂಗಳು ಹೂಡಿಕೆ ಮಾಡುವ ಸೌಲಭ್ಯ ಇದರಲ್ಲಿದೆ. ಸಣ್ಣ ಪ್ರಮಾಣದ ಹೂಡಿಕೆಯಲ್ಲಿ ನೀವು ದೊಡ್ಡ ಹಣವನ್ನು ಪಡೆಯಲು ನಿರೀಕ್ಷಿಸಬಹುದಾದ ಕಾರಣವೆ ಇದು.


ಇದನ್ನೂ ಓದಿ-ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್: CEO ಪರಾಗ್ ಅಗ್ರವಾಲ್ ಗೆ ಸಿಗಲಿದೆ 345 ಕೋಟಿ!

(ಹಕ್ಕುತ್ಯಾಗ- ಮ್ಯೂಚುವಲ್ ಫಂಡ್ ಗಳಲ್ಲಿನ ಹೂಡಿಕೆಯು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು. ವಿಷಯ ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ