ದುಬಾರಿ ಪೆಟ್ರೋಲ್ ನಿಂದ ಶೀಘ್ರವೇ ಪರಿಹಾರ ಸಿಗಲಿದೆ, ಅಗ್ಗದ ಇಂಧನ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್
IOCL M15 Petrol : ದಿನದಿಂದ ದಿನಕ್ಕೆ ಗಗನ ಮುಖಿಯಗುತ್ತಿರುವ ಪೆಟ್ರೋಲ್ ಬೆಲೆಯಿಂದ ತತ್ತರಿಸಿ ಹೋಗಿರುವ ಶ್ರೀಸಾಮಾನ್ಯರಿಗೆ ಪರಿಹಾರ ನೀಡಲು ಇಂಡಿಯನ್ ಆಯಿಲ್ ಮೆಥನಾಲ್ ಮಿಶ್ರಿತ ಪೆಟ್ರೋಲ್ `M15` ಅನ್ನು ಬಿಡುಗಡೆ ಮಾಡಿದೆ. ಇದರಿಂದ ಪೆಟ್ರೋಲ್ ಬೆಲೆಯಿಂದ ಜನರಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಆದರೆ ಈ ಪೆಟ್ರೋಲ್ ಯೋಜನೆಯನ್ನು ಪ್ರಾಯೋಗಿಕ ಪ್ರಾರಂಭಿಸಲಾಗಿದೆ.
IOCL M15 Petrol : ನಿರಂತರ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆ ಹಿನ್ನೆಲೆ ಇದೀಗ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಹೊಸ ಮಾದರಿಯ ಪೆಟ್ರೋಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಲಾಗಿರುವ ಹೊಸ ಮಾದರಿಯ ಪೆಟ್ರೋಲ್ ತೈಲ ಬೆಲೆಯನ್ನು ಇಳಿಕೆ ಮಾಡುವ ಸಾಧ್ಯತೆ ಇದೆ. ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಮೂಲಕ ಪೈಲಟ್ ಯೋಜನೆಯಾಗಿ ಶೇ. 15 ರಷ್ಟು ಮೆಥೆನಾಲ್ ಮಿಶ್ರಣವನ್ನು ಹೊಂದಿರುವ ಪೆಟ್ರೋಲ್ 'M15' ಅನ್ನು ಬಿಡುಗಡೆಮಾಡಲಾಗಿದೆ.
ಗಗನಮುಖಿಯಾಗುತ್ತಿರುವ ಇಂಧನ ಬೆಲೆಯಿಂದ ಮುಕ್ತಿ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಶನಿವಾರ 'ಎಂ 15' ಪೆಟ್ರೋಲ್ ಅನ್ನು ನೀತಿ ಆಯೋಗದ ಸದಸ್ಯ ವಿಕೆ ಸಾರಸ್ವತ್ ಮತ್ತು ಐಒಸಿ ಅಧ್ಯಕ್ಷ ಎಸ್‌ಎಂ ವೈದ್ಯ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದಾರೆ. ಮೆಥನಾಲ್ ಮಿಶ್ರಿತ ಪೆಟ್ರೋಲ್ ನಿಂದ ಏರುತ್ತಿರುವ ಇಂಧನ ಬೆಲೆಗೆ ಕಡಿವಾಣ ಬೀಳಲಿದೆ ಎಂದು ತೇಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಬೆಲೆ ಇಳಿಕೆಯಿಂದ ಜನ ಸಾಮಾನ್ಯರಿಗೆ ಸಾಕಷ್ಟು ನೆಮ್ಮದಿ ಸಿಗಲಿದೆ ಎಂಬ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ.
ಸ್ವಾವಲಂಬಿಯಾಗಲು ಹೆಜ್ಜೆ ಇಟ್ಟ ಇಂಡಿಯನ್ ಆಯಿಲ್
'ಎಂ15 ಪೆಟ್ರೋಲ್‌ನ ಪ್ರಾಯೋಗಿಕ ಬಿಡುಗಡೆಯು ಇಂಧನದ ವಿಷಯದಲ್ಲಿ ಸ್ವಾವಲಂಬಿಯಾಗಲು ಒಂದು ಪ್ರಮುಖ ಹೆಜ್ಜೆಯಾಗಿದೆ, ಇದು ಇಂಧನ ಆಮದು ಹೊರೆಯನ್ನೂ ಕಡಿಮೆ ಮಾಡುತ್ತದೆ' ಎಂದು ತೇಲಿ ಹೇಳಿದ್ದಾರೆ. ಭಾರತವನ್ನು ಇಂಧನದ ವಿಷಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಇಂಡಿಯನ್ ಆಯಿಲ್ ಈ ಉಪ್ರಕ್ರಮವನ್ನು ಆರಂಭಿಸುತ್ತಿದೆ ಎಂದು ಸಚಿವರು ತಮ್ಮ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ-ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ- ಲಕ್ಷ್ಮಣ ಸವದಿ
ಪೆಟ್ರೋಲ್ ದರ 105 ರೂ. ಪ್ರತಿ ಲೀಟರ್
ಮೆಥನಾಲ್‌ನ ಸುಲಭ ಲಭ್ಯತೆಯನ್ನು ಪರಿಗಣಿಸಿ ಟಿನ್‌ಸುಕಿಯಾವನ್ನು ಈ ಉಪಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ಇದನ್ನು ಅಸ್ಸಾಂ ಪೆಟ್ರೋಕೆಮಿಕಲ್ ಲಿಮಿಟೆಡ್ ಉತ್ಪಾದಿಸುತ್ತದೆ. ರಾಜಧಾನಿ ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್‌ಗೆ 105 ರೂ.ಗಿಂತ ಹೆಚ್ಚಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Petrol-diesel price: ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ, 13 ದಿನಗಳಲ್ಲಿ 11 ಬಾರಿ ಏರಿಕೆ
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ. ಕಂಪನಿಗಳು ಮಾರ್ಚ್ 22 ರಿಂದ ಏಪ್ರಿಲ್ 6 ರವರೆಗೆ ಲೀಟರ್ ಪೆಟ್ರೋಲ್ ಗೆ 10 ರೂ. ಏರಿಕೆ ಮಾಡಿವೆ. ಏಪ್ರಿಲ್ 6ರ ನಂತರ ಇದುವರೆಗೆ ಕಂಪನಿಗಳು ಯಾವುದೇ ರೀತಿಯ ದರ ಪರಿಷ್ಕರಣೆ ಮಾಡಿಲ್ಲ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.