ಇಂಡಿಯನ್ ಆಯಿಲ್ ಕಾರ್ಪೋರೇಶನ್‌ ಲಿಮಿಟೆಡ್ (IOCL) ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಶನ್‌ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.


COMMERCIAL BREAK
SCROLL TO CONTINUE READING

ಆಸಕ್ತರು ಐಒಸಿಎಲ್‌ನ ಅಫೀಶಿಯಲ್ ವೆಬ್‌ಸೈಟ್‌ ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಡಿಸೆಂಬರ್ 12, 2020 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ. ಟೆಕ್ನಿಕಲ್ ಮತ್ತು ನಾನ್‌-ಟೆಕ್ನಿಕಲ್ ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳನ್ನು ದಕ್ಷಿಣ ಭಾರತದ ( ತಮಿಳುನಾಡು, ಪುದುಚೇರಿ, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ತೆಲಂಗಾಣ) ಹಲವು ಪ್ರದೇಶಗಳಲ್ಲಿ ನೇಮಕ ಮಾಡಲಾಗುತ್ತದೆ.


ಅಪ್ಲಿಕೇಶನ್ ಸಲ್ಲಿಕೆ ಆರಂಭ ದಿನಾಂಕ: 27-11-2020


ಅಪ್ಲಿಕೇಶನ್‌ ಸಲ್ಲಿಕೆಗೆ ಕೊನೆ ದಿನಾಂಕ: 12-12-2020


ಲಿಖಿತ ಪರೀಕ್ಷೆ ದಿನಾಂಕ: 03-01-2021


ಹುದ್ದೆಗಳ ನೇಮಕ ವಿವರ: ಇಂಡಿಯನ್ ಆಯಿಲ್ ಕಾರ್ಪೋರೇಶನ್‌ ಲಿಮಿಟೆಡ್‌ನಿಂದ ಅಧಿಸೂಚನೆ


ಹುದ್ದೆಯ ಹೆಸರು: ಅಪ್ರೆಂಟಿಸ್


ವಿದ್ಯಾರ್ಹತೆ: ಐಟಿಐ ವಿದ್ಯಾರ್ಹತೆ


ವಯೋಮಿತಿ ಅರ್ಹತೆ : ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಒಬಿಸಿ, ಎಸ್‌ಸಿ / ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.


ವೇತನ ವಿವರ:  8000 ರಿಂದ 15000 /ತಿಂಗಳಿಗೆ


ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ? ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಆಬ್ಜೆಕ್ಟಿವ್ ಟೈಪ್ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳು ಮತ್ತು ಇತರೆ ಅರ್ಹತೆಗಳ ಆಧಾರದಲ್ಲಿ ನೇಮಕಾತಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಒಟ್ಟು 65 ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.


ಅರ್ಜಿ ಸಲ್ಲಿಕೆ ಹೇಗೆ ? ಐಒಸಿಎಲ್‌ನ ಅಧಿಕೃತ ವೆಬ್‌ಸೈಟ್‌ www.iocl.com ಗೆ ಭೇಟಿ ನೀಡಿ.