IPL Media Auction: ZEE ನಿಂದ ಅಧಿಕೃತ ಹೇಳಿಕೆ ಬಿಡುಗಡೆ
IPL Media Auction: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಿನ ಐದು ವರ್ಷಗಳಿಗಾಗಿ ಐಪಿಎಲ್ ಮಾಧ್ಯಮ ಹಕ್ಕುಗಳ ಇ- ಹರಾಜು ಪ್ರಕ್ರಿಯೆಯನ್ನು ಇಂದು ಯಶಸ್ವಿಯಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
IPL Media Auction: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಿನ ಐದು ವರ್ಷಗಳಿಗಾಗಿ ಐಪಿಎಲ್ ಮಾಧ್ಯಮ ಹಕ್ಕುಗಳ ಇ- ಹರಾಜು ಪ್ರಕ್ರಿಯೆಯನ್ನು ಇಂದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮಂಗಳವಾರ ಜೂನ್ 14 ರಂದು ಈ ಮೂರು ದಿನಗಳ ಇ-ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, 2023-2027 ಸೈಕಲ್‌ಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಟ್ಟು 48,390 ಕೋಟಿ ಗಳಿಸಿದೆ.
ಇದನ್ನೂ ಓದಿ-ಇನ್ಮುಂದೆ ನೀವು ಈ ಟಿವಿ ಚಾನೆಲ್ ಮೇಲೆ IPL ವೀಕ್ಷಿಸಬಹುದು, ಗಳಿಕೆಯ ಎಲ್ಲಾ ದಾಖಲೆ ಮುರಿದ BCCI
ಈ e-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಝೀ ಸಮೂಹ, ' ಈ ಹರಾಜು ಪ್ರಕ್ರಿಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಪಾರದರ್ಶಕವಾಗಿ ನಡೆಸಿದ್ದಕ್ಕೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಝೀ ಸಮೂಹ ಅಭಿನಂದನೆ ಸಲ್ಲಿಸಲು ಬಯಸುತ್ತದೆ. ಐಪಿಎಲ್ ಮಾಧ್ಯಮ ಹಕ್ಕುಗಳ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಝೀ ಭಾಗವಹಿಸುವಿಕೆಯನ್ನು ಸಕ್ರೀಯಗೊಳಿಸುವಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಗೌರವಾನ್ವಿತ ಕಾರ್ಯದರ್ಶಿ ಶ್ರೀ ಜಯ್ ಶಾ ಮತ್ತು ಮಂಡಳಿಯ ಗೌರವಾನ್ವಿತ ಖಜಾಂಚಿಯಾಗಿರುವ ಶ್ರೀ ಅರುಣ್ ಧುಮಾಲ್ ಅವರುಗಳು ನೀಡಿರುವ ಅಚಲ ಬೆಂಬಲ ಹಾಗೂ ಅವರ ಸಮರ್ಥ ನಾಯಕತ್ವಕ್ಕೆ ನಾವು ಕೃತಜ್ಞರಾಗಿದ್ದೇವೆ; ZEEನಲ್ಲಿ ನಾವು ಮೌಲ್ಯ ಸೃಷ್ಟಿಯ ಪ್ರಿಸ್ಮ್ ಮೂಲಕ ನಮ್ಮ ಎಲ್ಲಾ ವ್ಯವಹಾರಗಳ ನಿರ್ಧಾರಗಳನ್ನು ನಮ್ಮ ಪಾಲುದಾರರ ಪರವಾಗಿ ನಾವು ಮೌಲ್ಯಮಾಪನ ನಡೆಸುತ್ತೇವೆ ಮತ್ತು ಪ್ರತಿಯೊಂದು ಕ್ರೀಡಾ ಆಸ್ತಿಯನ್ನು ಅದೇ ಪ್ರಿಸ್ಮ್ ಮೂಲಕ ಮೌಲ್ಯಮಾಪನ ಮಾಡುವುದನ್ನು ಮುಂದುವರೆಸುತ್ತೇವೆ - ಶ್ರೀ ರಾಹುಲ್ ಜೋಹ್ರಿ, ಅಧ್ಯಕ್ಷರು, ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್' ಎಂದು ಹೇಳಿದೆ.
ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜಿನಲ್ಲಿ ಬಿಸಿಸಿಐ ಶ್ರೀಮಂತ: 100 ಕೋಟಿ ದಾಟಿದ 1 ಪಂದ್ಯದ ಮೌಲ್ಯ!
ಇನ್ನುಳಿದಂತೆ ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆಯ ಕುರಿತು ಹೇಳುವುದಾದರೆ, ಈ ಹರಾಜು ಪ್ರಕ್ರಿಯೆಯಲ್ಲಿ ಡಿಸ್ನಿ ಸ್ಟಾರ್ ಟಿವಿ ಪ್ರಸಾರದ ಹಕ್ಕುಗಳನ್ನು 23,575 ಕೋಟಿ ರೂ.ಗಳಿಗೆ (ಪ್ರತಿ ಪಂದ್ಯ 57.5 ಕೋಟಿ) ತನ್ನದಾಗಿಸಿಕೊಂಡಿದೆ. ಇನ್ನೊಂದೆಡೆ ವೈಕಾಮ್ 18 ಮುಂದಿನ ಐದು ವರ್ಷಗಳ ಅವಧಿಗಾಗಿ ಈ ಪಂದ್ಯಾವಳಿಗಳ ಡಿಜಿಟಲ್ ಪ್ರಸಾರದ ಹಕ್ಕನ್ನು 23,758 ಕೋಟಿ ರೂ.ಗಳಿಗೆ (ಬಿ ಮತ್ತು ಸಿ ಪ್ಯಾಕೇಜ್ ಗಳು) ಬಾಚಿಕೊಂಡಿದೆ. ವೈಕಾಮ್ 18 ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಯುಕೆ ಪ್ರದೇಶಗಳ ಪ್ಯಾಕೇಜ್ ಡಿ ಹಕ್ಕನ್ನು ಪಡೆದುಕೊಂಡಿದ್ದರೆ, MENA ಹಾಗೂ US ಪ್ರದೇಶಗಳ ಹಕ್ಕನ್ನು ಟೈಮ್ಸ್ ಇಂಟರ್ನೆಟ್ ಪಡೆದುಕೊಂಡಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.