ಬೆಂಗಳೂರು : ನೀವು ಏನು ಕೇಳಬೇಡಿ ನಾನೇ ಎಲ್ಲಾ ಹೇಳ್ತೀನಿ. ನಾನು ಹೇಳಿದ್ದು ಪೂರ್ತಿ ತೋರಿಸಿ. ನಾನು ಏನನ್ನು ನಾಚಿಕೆ ಮಾಡಿಕೊಂಡಿಲ್ಲ.. ಇವರು ಯಾಕೆ ಸಂಧಾನಕ್ಕೆ ಹೋದ್ರು, ಯಾಕೆ ಹೋಗಬೇಕಿತ್ತು ಎಂದು ಐಪಿಎಸ್ ಅಧಿಕಾರಿ ಡಿ.ರೂಪ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರು ವಿರುದ್ಧ ಗುಡುಗಿದ್ದಾರೆ. 
 
ಈ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರಕ್ರಿಯೆ ನೀಡಿದ ಡಿ.ರೂಪ, ನಾನು ಯಾರ ಜೊತೆಗು ಸಂಧಾನಕ್ಕೆ ಹೋಗಿಲ್ಲ, ಇದೇ ಮೊದಲು ಐಎಎಸ್ ಅಧಿಕಾರಿ ಈ ರೀತಿ ಮಾಡಿರೋದು. ನಾನು ಎಲ್ಲಾ ವಿಚಾರ ಹೇಳಿದ್ದೀನಿ. ನಾನು ಅವರಿಗೆ ತುಂಬಾ ಹೆಲ್ಪ್  ಮಾಡಿಕೊಟ್ಟಿದ್ದೀವಿ. ಡಿ.ಕೆ ರವಿಯವರ ವಿಚಾರದಲ್ಲಿಯು ಸಹ ನಾನು ಮಾತನಾಡಿದ್ದೆ. ಅವರು ಅವತ್ತೆ ಕಟ್ ಮಾಡಬೇಕಿತ್ತು. ಅವರು ಅವತ್ತೇ ಎಡವಿದ್ರು, ಅವತ್ತು ಹೇಳಿದ್ದೆ ಇವತ್ತು ಹೇಳಿದ್ದೀನಿ ಎಂದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : D Roopa Vs Rohini Sindhuri: ಡಿಕೆ ರವಿ ಹೆಸರು ಉಲ್ಲೇಖಿಸಿ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಆರೋಪಗಳ ಸುರಿಮಳೆ


ಮಾದ್ಯಮದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಪಿಕ್ಸ್ ಗಳನ್ನು ಈಗ ಯಾಕೆ ಹಾಕಿದ್ದೀರ ಅಂತ ಕೇಳಬೇಡಿ. ನಾನು ಅದನ್ನು ಸರ್ಕಾರಕ್ಕೆ ಕೊಡ್ತೀನಿ. ಇಂತಹ ಪಿಕ್ಸ್ ಗಳನ್ನು ಓರ್ವ ಐಎಎಸ್ ಅಧಿಕಾರಿ ಪುರುಷ ಅಧಿಕಾರಿಗೆ ಕಳಿಸುತ್ತಾರೆ ಅಂದರೆ ಏನು ಅರ್ಥ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ನಾವು ಕೊಡುತ್ತೇನೆ. ಅದು ಸಹ ತನಿಖೆ ಆಗಲಿ. ಸರ್ವಿಸ್ ಕಂಡಕ್ಟ್ ಆ್ಯಕ್ಟ್ ಇರತ್ತೆ. ಈ ವಿಚಾರದಲ್ಲಿ ಪರ್ಸನಲ್ ಏನು ಇಲ್ಲ. ಫೋಟೋ ಒನ್ ಟು ಒನ್ ಕಳಿಸಿದ್ತಾರೆ ಅಂದ್ರೆ ಏನು ಅರ್ಥ? ಇದರ ಮೊಟೀವ್ ಏನು? ಅದಕ್ಕೆ‌ ಎಂಎಲ್ಎ ಬಳಿಯಲ್ಲಿ ಸಂಧಾನಕ್ಕೆ ಹೋದ್ರ. ಏನನ್ನು ಮುಚ್ಚಿಡ್ತಾಯಿದ್ದಾರೆ ಇವರು? ನನಗೆ ಗೊತ್ತಾಯ್ತು ಈಗ ಹೀಗಾಗಿ ನಾನು ಈಗ ಕೊಟ್ಟಿದ್ದೀನಿ ಎಂದು ಹೇಳಿದ್ದಾರೆ. 


ಇದನ್ನೂ ಓದಿ : ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಖಾಸಗಿ ಫೋಟೋ ವೈರಲ್‌..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.