ನವದೆಹಲಿ: IRCTC Booking Update- ಇನ್ನು ಮುಂದೆ ನೀವು ರೈಲ್ವೆ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ನೀವು ರೈಲಿನಲ್ಲಿ ಪ್ರಯಾಣಿಸಲು  ಒಂದು ಐಆರ್‌ಸಿಟಿಸಿ ಖಾತೆಯಿಂದ ಒಂದು ತಿಂಗಳಲ್ಲಿ 6 ಟಿಕೆಟ್‌ಗಳನ್ನುಕಾಯ್ದಿರಿಸಬಹುದು, ಇದಕ್ಕಿಂತ ಹೆಚ್ಚಿನ ಟಿಕೆಟ್‌ಗಳನ್ನು ಕಾಯ್ದಿರಿಸಲು ನೀವು ನಿಮ್ಮ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಕೇವಲ ಒಂದೇ ಒಂದು ಟಿಕೆಟ್ ಕಾಯ್ದಿರಿಸಲು ಕೂಡ ನಿಮ್ಮ ಆಧಾರ್ ವಿವರಗಳನ್ನು ಕೇಳಬಹುದು.


COMMERCIAL BREAK
SCROLL TO CONTINUE READING

ಐಆರ್‌ಸಿಟಿಸಿಯಿಂದ ಟಿಕೆಟ್ ಕಾಯ್ದಿರಿಸುವ ಹೊಸ ವ್ಯವಸ್ಥೆ:
ಮುಂದಿನ ಬಾರಿ ನೀವು ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಲು ಹೋದಾಗ, ಐಆರ್‌ಸಿಟಿಸಿ ನಿಮ್ಮನ್ನು ಪ್ಯಾನ್ (PAN), ಆಧಾರ್ (Aadhaar) ಮಾಡಬೇಕು. ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ರೈಲು ಟಿಕೆಟ್ ಕಾಯ್ದಿರಿಸಲು, ನೀವು ಲಾಗಿನ್ ಆಗುವಾಗ ನೀವು ಆಧಾರ್, ಪ್ಯಾನ್ ಅಥವಾ ಪಾಸ್‌ಪೋರ್ಟ್ ಸಂಖ್ಯೆಯನ್ನು ನಮೂದಿಸಬೇಕಾಗಬಹುದು.


ಇದನ್ನೂ ಓದಿ-  Indian Railways, IRCTC: ಪ್ರಯಾಣಿಕರು ಈಗ ಈ 44 ರೈಲುಗಳಲ್ಲಿ ರಿಸರ್ವೇಶನ್ ಇಲ್ಲದೆಯೇ ಪ್ರಯಾಣಿಸಬಹುದು


ರೈಲ್ವೆ ಟಿಕೆಟ್ ಅನ್ನು ಪ್ಯಾನ್, ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುವುದು:
ಐಆರ್‌ಸಿಟಿಸಿಯೊಂದಿಗೆ ಗುರುತಿನ ದಾಖಲೆಗಳನ್ನು ಜೋಡಿಸುವ ಯೋಜನೆಯಲ್ಲಿ ರೈಲ್ವೆ ಕಾರ್ಯನಿರ್ವಹಿಸುತ್ತಿದೆ ಎಂದು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಮಹಾನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ. ಈ ಮೊದಲು ವಂಚನೆಯ ವಿರುದ್ಧದ ಕ್ರಮವು ಮಾನವ ಬುದ್ಧಿಮತ್ತೆಯನ್ನು ಆಧರಿಸಿದೆ, ಆದರೆ ಇದರ ಪರಿಣಾಮವು ಸಾಕಾಗುವುದಿಲ್ಲ ಎಂದು ಅವರು ಹೇಳಿದರು. ಇದಕ್ಕಾಗಿಯೇ ನಾವು ಪ್ರಯಾಣಿಕರು ರೈಲ್ವೆ  ಟಿಕೆಟ್‌ಗಾಗಿ (Train Ticket) ಲಾಗಿನ್ ಆಗುವಾಗ ಅವರನ್ನು ಪ್ಯಾನ್, ಆಧಾರ್ ಅಥವಾ ಇತರ ಗುರುತಿನ ದಾಖಲೆಗಳೊಂದಿಗೆ ಲಿಂಕ್ ಮಾಡಲು ನಿರ್ಧರಿಸಿದ್ದೇವೆ. ಇದರೊಂದಿಗೆ ನಾವು ಟಿಕೆಟ್ ಕಾಯ್ದಿರಿಸುವ ವಂಚನೆಯನ್ನು ನಿಲ್ಲಿಸಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.


'ಸಿಸ್ಟಮ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ':
ನಾವು ಮೊದಲು ನೆಟ್‌ವರ್ಕ್ ರಚಿಸಬೇಕಾಗಿದೆ. ಈ ಸಂಬಂಧ ಆಧಾರ್ ಪ್ರಾಧಿಕಾರದೊಂದಿಗಿನ ನಮ್ಮ ಕೆಲಸ ಬಹುತೇಕ ಮುಗಿದಿದೆ. ಇಡೀ ವ್ಯವಸ್ಥೆಯು ಕೆಲಸ ಮಾಡಲು ಸಿದ್ಧವಾದ ತಕ್ಷಣ ಅದನ್ನು ಕಾರ್ಯಗತಗೊಳಿಸಿದ ನಂತರ ನಾವು ಅದನ್ನು ಬಳಸಲು ಪ್ರಾರಂಭಿಸುತ್ತೇವೆ  ಎಂದು ಅರುಣ್ ಕುಮಾರ್ ಹೇಳಿದರು. 2019 ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಟೌಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ, ಅಂದಿನಿಂದ 14,257 ಟೌಟ್‌ಗಳನ್ನು ಬಂಧಿಸಲಾಗಿದೆ. ಈವರೆಗೆ 28.34 ಕೋಟಿ ಮೌಲ್ಯದ ನಕಲಿ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರುಣ್ ಕುಮಾರ್ ಮಾಹಿತಿ ನೀಡಿದರು.


ಇದನ್ನೂ ಓದಿ- Indian Railways/IRCTC Rules: ರೈಲು ಟಿಕೆಟ್ ಕಳೆದು ಹೋದರೆ ಏನು ಮಾಡಬೇಕು? ಅದಕ್ಕೆ ಸಂಬಂಧಿಸಿದ ರೈಲ್ವೆ ನಿಯಮ ಏನೆಂದು ತಿಳಿಯಿರಿ


ರೈಲ್ವೆ ಟಿಕೆಟ್ ವಂಚನೆ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಗಳ ಬಗ್ಗೆ ದೂರು ನೀಡಲು ರೈಲ್ ಸುರಕ್ಷಾ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದು ಎಂದು ಅರುಣ್ ಕುಮಾರ್ ಹೇಳಿದರು. ಇದಲ್ಲದೆ ದೇಶಾದ್ಯಂತ 6049 ನಿಲ್ದಾಣಗಳು ಮತ್ತು ಎಲ್ಲಾ ಪ್ರಯಾಣಿಕ ರೈಲು ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆಯೂ ಇದೆ ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.