Car Buying Tips: ಕಾರು ಖರೀದಿಸಲು ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ
ಕಾರು ಖರೀದಿಸಲು ಯಾವುದು ಸರಿಯಾದ ಸಮಯ..? ಇದು ಪ್ರತಿಯೊಬ್ಬರ ಪ್ರಶ್ನೆಯಾಗಿರುತ್ತದೆ. ಇದಕ್ಕೆ ಸುಲಭ ಉತ್ತರ ಇಲ್ಲಿದೆ ನೋಡಿ.
ನವದೆಹಲಿ: ಕಾರು ಖರೀದಿಸುವ ನಿರ್ಧಾರ ಯಾವಾಗಲೂ ದೊಡ್ಡದಾಗಿರುತ್ತದೆ. ಕಾರು ಖರೀದಿಸಬೇಕು ಎಂದರೆ ಕನಿಷ್ಠ 4ರಿಂದ 5 ಲಕ್ಷ ರೂ. ಬೇಕಾಗುತ್ತದೆ. ಹೊಸ ಕಾರು ಇದಕ್ಕಿಂತ ಕಡಿಮೆ ಬೆಲೆಗೆ ನಿಮಗೆ ಸಿಗುವುದಿಲ್ಲ. ಹೀಗಾಗಿ ಕಾರು ಖದೀದಿಸುವ ಸಮಯದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿರುತ್ತವೆ. ಈಗ ನಾನು ಕಾರು ಖರೀದಿಸಬೇಕೆ ಅಥವಾ ಬೇಡವೇ ಅನ್ನೋ ಗೊಂದಲವಂತೂ ಬಹುತೇಕ ಎಲ್ಲರಲ್ಲಿಯೂ ಇರುತ್ತದೆ.
ಈ ಸಂದರ್ಭದಲ್ಲಿ ಕಾರು ಖರೀದಿಸುವ ಬಜೆಟ್ ನಿಮ್ಮಲ್ಲಿದ್ದರೆ ಅಥವಾ ಕಾರು ಖರೀದಿಸುವ ಆಲೋಚನೆ ನಿಮ್ಮಲ್ಲಿದ್ದರೆ ಮತ್ತು ಕಾರು ಖರೀದಿಸಲು ಇದು ಸರಿಯಾದ ಸಮಯವೇ ಅಥವಾ ಇಲ್ಲವೇ ಅನ್ನೋ ಪ್ರಶ್ನೆಯಿಂದ ನೀವು ಗೊಂದಲಕ್ಕೊಳಗಾಗಿದ್ದರೆ ಇಲ್ಲಿದೆ ಸುಲಭ ಪರಿಹಾರ. ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಮತ್ತು ಗೊಂದಲಗಳಿಗೆ ಇಂದು ನಾವು ಉತ್ತರ ನೀಡುತ್ತಿದ್ದೇವೆ.
ಇದನ್ನೂ ಓದಿ: 1 October 2022: ಅಕ್ಟೋಬರ್ 1 ರಿಂದ ಬದಲಾಗಲಿದೆ ಹಲವು ನಿಯಮಗಳು: ನಿಮ್ಮ ಜೇಬಿಗೆ ನೇರ ಪರಿಣಾಮ ಗ್ಯಾರಂಟಿ
ಕಾರಿನ ಅವಶ್ಯಕತೆ ಬಗ್ಗೆ ತಿಳಿಯಿರಿ
ಕಾರು ಖದೀದಿಸುವ ಮುನ್ನ ಅದು ನಿಮಗೆ ಎಷ್ಟು ಅವಶ್ಯಕತೆ ಇದೆ ಎಂಬುದನ್ನು ತಿಳಿಯಬೇಕು. ನಿಮಗೆ ಕಾರಿನ ಅಗತ್ಯ ಹೆಚ್ಚಿದ್ದರೆ ಈಗಲೇ ಬುಕ್ ಮಾಡಿ. ಸದ್ಯಕ್ಕೆ ನಿಮಗೆ ಕಾರಿನ ಅಗತ್ಯವಿಲ್ಲದಿದ್ದರೆ ಸ್ವಲ್ಪ ಸಮಯ ಕಾಯುವುದು ಉತ್ತಮ. ಏಕೆಂದರೆ ನೀವು ಕಾರಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಅಗತ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ ಕಾರು ಕಂಪನಿಗಳು ಆಕರ್ಷಕ ಕೊಡುಗೆಗಳನ್ನು ಘೋಷಿಸುತ್ತವೆ. ಪ್ರಸ್ತುತ ದಿನಗಳಲ್ಲಿ ಬುಕ್ ಮಾಡಿದ ಕೂಡಲೇ ಕಾರುಗಳು ನಿಮಗೆ ಸಿಗುವುದಿಲ್ಲ. ಇಂದು ಬುಕ್ ಮಾಡಿದರೂ 2 ವರ್ಷಗಳ ನಂತರ ಡೆಲಿವರಿ ನೀಡುವ ಹಲವು ಕಾರುಗಳಿವೆ. ಹೀಗಾಗಿ ನೀವು ಅವಶ್ಯಕತೆ ಗಮನದಲ್ಲಿಟ್ಟುಕೊಂಡು ಕಾರು ಖದೀದಿಸುವುದು ಸೂಕ್ತ.
ಹಬ್ಬದ ಸಮಯದಲ್ಲಿ ಖರೀದಿಸುವುದು ಉತ್ತಮ
ಹಬ್ಬದ ಸಮಯದಲ್ಲಿ ಅನೇಕ ಕಂಪನಿಗಳು ತಮ್ಮ ಕಾರುಗಳ ಮೇಲೆ ಉತ್ತಮ ಕೊಡುಗೆಗಳನ್ನು ನೀಡುತ್ತವೆ. ಇಡೀ ವರ್ಷದಲ್ಲಿ ಈ ದಿನಗಳಲ್ಲಿ ಉತ್ತಮ ಕೊಡುಗೆಗಳು ಲಭ್ಯವಿರುತ್ತವೆ. ಆದ್ದರಿಂದ ನೀವು ಈ ಸಮಯದಲ್ಲಿ ಕಾರು ಖರೀದಿಸುವುದು ಲಾಭದಾಯಕ. ಇದರಿಂದ ನೀವು ಸ್ವಲ್ಪ ಹಣ ಉಳಿತಾಯ ಮಾಡಬಹುದು.
ಇದನ್ನೂ ಓದಿ: Ration Card: ಉಚಿತ ಪಡಿತರ ಪ್ರಯೋಜನಗಳನ್ನು ಪಡೆಯಲು ಈ ಹೊಸ ನಿಯಮಗಳನ್ನು ತಪ್ಪದೇ ತಿಳಿಯಿರಿ
ಸೆಪ್ಟೆಂಬರ್ ತಿಂಗಳಿನಲ್ಲಿ ಮಾರುತಿ ತನ್ನ ಕಾರುಗಳ ಮೇಲೆ 55,000 ರೂ., ಟಾಟಾ ಮೋಟಾರ್ಸ್ 40,000 ರೂ., ಹೋಂಡಾ 27 ಸಾವಿರ ರೂ. ಮತ್ತು ಹುಂಡೈ 50 ಸಾವಿರ ರೂ.ವರೆಗೆ ಆಫರ್‌ಗಳನ್ನು ನೀಡುತ್ತಿದೆ. ಇವುಗಳು ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್‌ನಂತಹ ವಿವಿಧ ಪ್ರಯೋಜನಗಳನ್ನು ಒಳಗೊಂಡಿವೆ. ಹೀಗಾಗಿ ಹಬ್ಬದ ಸಮಯದಲ್ಲಿ ನೀವು ಕಾರು ಖರೀದಿಸುವುದರಿಂದ ಹಣ ಉಳಿಸಲು ಸಾಧ‍್ಯವಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.