Fake Pan Card Alert: ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ/ ನಕಲಿಯೋ? ಈ ರೀತಿ ಚೆಕ್ ಮಾಡಿ
ಪ್ಯಾನ್ ಕಾರ್ಡ್ (Pan Card) ಮೂಲಕ, ನೀವು ಬ್ಯಾಂಕ್ ಖಾತೆ ತೆರೆಯುವುದು, ಆಸ್ತಿ ಖರೀದಿಸುವುದು ಅಥವಾ ಮಾರಾಟ ಮಾಡುವುದು, ಕಾರು ಖರೀದಿಸುವುದು ಅಥವಾ ಮಾರಾಟ ಮಾಡುವುದು, ಐಟಿಆರ್ ಸಲ್ಲಿಸುವುದು, 2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಭರಣಗಳನ್ನು ಖರೀದಿಸುವುದು ಮುಂತಾದ ಅನೇಕ ಕೆಲಸಗಳನ್ನು ಮಾಡಬಹುದು.
ನವದೆಹಲಿ: PAN Card Fake vs Original- ಇತ್ತೀಚಿನ ದಿನಗಳಲ್ಲಿ ಯಾವುದೇ ಹಣಕಾಸಿನ ವಹಿವಾಟಿಗೆ ಪ್ಯಾನ್ ಕಾರ್ಡ್ (Pan Card) ಅತ್ಯಂತ ಮುಖ್ಯ ದಾಖಲೆಯಾಗಿದೆ. ಪ್ಯಾನ್ ಕಾರ್ಡ್‌ನ ಮೂಲಕ, ನೀವು ಬ್ಯಾಂಕ್ ಖಾತೆ ತೆರೆಯಬಹುದು, ಆಸ್ತಿಯನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು, ಕಾರು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು, ಐಟಿಆರ್ ಫೈಲ್ ಮಾಡಬಹುದು, 2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಭರಣಗಳನ್ನು ಖರೀದಿಸಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ನಕಲಿ ಪ್ಯಾನ್ ಕಾರ್ಡ್‌ನ (Fake Pan Card) ಹಲವು ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಯಾವುದೇ ವಹಿವಾಟು ನಡೆಸುವ ಮೊದಲು, ನಿಮ್ಮ ಪ್ಯಾನ್ ಕಾರ್ಡ್ ನಕಲಿಯೋ? ಅಥವಾ ಅಸಲಿಯೋ? (How to check fake pan card) ಎಂದು ಪರಿಶೀಲಿಸುವುದು ಬಹಳ ಮುಖ್ಯ.
ಆದಾಯ ತೆರಿಗೆ ಇಲಾಖೆ ಪ್ಯಾನ್ ನೀಡುತ್ತದೆ :
ಹಣಕಾಸು ಮತ್ತು ಬ್ಯಾಂಕಿಂಗ್ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ (Pan Card) ಬಳಕೆ ಕಡ್ಡಾಯವಾಗಿದೆ. ಆದಾಯ ತೆರಿಗೆ ಇಲಾಖೆ 10-ಅಂಕಿಯ ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಪ್ಯಾನ್ ಕಾರ್ಡ್ ನಮ್ಮ ಗುರುತಿನ ಪ್ರಮುಖ ದಾಖಲೆಯಾಗಿದೆ.
ಇದನ್ನೂ ಓದಿ- Instant e-PAN : ಹೊಸ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ Pan ಕಾರ್ಡ್ ಗೆ ಅರ್ಜಿ ಸಲ್ಲಿಸುವಿರಾ? ಹಾಗಿದ್ರೆ ಇಲ್ಲಿದೆ ಓದಿ
ಪ್ಯಾನ್ ಕಾರ್ಡ್ ಅಸಲಿಯೇ/ನಕಲಿಯೇ ಎಂದು ನೀವು ಸುಲಭವಾಗಿ ಗುರುತಿಸಬಹುದು:-
>> ನೀವು ಮೊದಲು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಬೇಕು.
>> ಇಲ್ಲಿ ನೀವು ಬಲಭಾಗದಲ್ಲಿರುವ 'ನಿಮ್ಮ ಪ್ಯಾನ್ ವಿವರಗಳನ್ನು ಪರಿಶೀಲಿಸಿ' ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
>> ಇದರ ನಂತರ, ಬಳಕೆದಾರರು ಪ್ಯಾನ್ ಕಾರ್ಡ್ ವಿವರಗಳನ್ನು (How to check pan card details) ಭರ್ತಿ ಮಾಡಬೇಕಾಗುತ್ತದೆ.
>> ಇದರಲ್ಲಿ, ನಿಮಗೆ ಪ್ಯಾನ್ ಸಂಖ್ಯೆ, ಪ್ಯಾನ್ ಕಾರ್ಡ್ (Pan Card) ಹೊಂದಿರುವವರ ಪೂರ್ಣ ಹೆಸರು, ಅವರ ಜನ್ಮ ದಿನಾಂಕ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗುವುದು.
>> ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಭರ್ತಿ ಮಾಡಿದ ಮಾಹಿತಿಯು ನಿಮ್ಮ ಪ್ಯಾನ್ ಕಾರ್ಡ್‌ನೊಂದಿಗೆ ಹೊಂದಿಕೆಯಾಗುತ್ತದೆಯೋ ಇಲ್ಲವೋ ಎಂಬ ಸಂದೇಶವು ಪೋರ್ಟಲ್‌ನಲ್ಲಿ ಬರುತ್ತದೆ.
>> ಈ ರೀತಿಯಾಗಿ ನೀವು ಪ್ಯಾನ್ ಕಾರ್ಡ್‌ನ ನಿಖರತೆಯನ್ನು (Pan Card Original) ಸುಲಭವಾಗಿ ಪರಿಶೀಲಿಸಬಹುದು.
ಪ್ಯಾನ್ ಕಾರ್ಡ್ ಅನ್ನು ಈ ರೀತಿ ಪಡೆಯಬಹುದು:
ನೀವು ಇನ್ನೂ ಪ್ಯಾನ್ ಪಡೆಯದಿದ್ದರೆ, ಸರ್ಕಾರವು ಅದನ್ನು ನಿಮಿಷಗಳಲ್ಲಿ ಒದಗಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ. ಇದಕ್ಕಾಗಿ ನೀವು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಈ ಸೇವೆಯನ್ನು ಇನ್ನೂ ಪ್ಯಾನ್ ಪಡೆಯದ ಜನರಿಗಾಗಿ ಒದಗಿಸಲಾಗಿದೆ. ಇ ಪ್ಯಾನ್‌ಗಾಗಿ, ನಿಮ್ಮ ಆಧಾರ್ ಸಂಖ್ಯೆಯನ್ನು (Aadhaar Card Number) ನೀವು ಒದಗಿಸಬೇಕಾಗುತ್ತದೆ, ಅದರಿಂದ ಒಟಿಪಿ ಉತ್ಪತ್ತಿಯಾಗುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ಇ ಪ್ಯಾನ್ (E PAN) ಅನ್ನು ನಿಮಗೆ ನೀಡಲಾಗುತ್ತದೆ. ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅವರ ಪ್ರಕಾರ, ಇದು ಪ್ಯಾನ್ ಕಾರ್ಡ್ ಪಡೆಯಲು ಜನರಿಗೆ ತುಂಬಾ ಸುಲಭ ವಿಧಾನವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.