Bank ATM Rules: ಜನರು ತಮ್ಮ ಜೀವಮಾನದ ಠೇವಣಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತಾರೆ ಮತ್ತು ಅಗತ್ಯವಿದ್ದಾಗ ಅದನ್ನು ಹಿಂಪಡೆಯುತ್ತಾರೆ. ಈ ಹಿಂದೆ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಬ್ಯಾಂಕ್‌ಗಳ ಸರತಿ ಸಾಲಿನಲ್ಲಿ ನಿಂತು ಬ್ಯಾಂಕ್‌ಗಳಿಂದ ಹಣ ತೆಗೆಯುತ್ತಿದ್ದರು. ಆದರೆ ಡಿಜಿಟಲ್ ಬ್ಯಾಂಕಿಂಗ್ ಮತ್ತು ಎಟಿಎಂ ಈ ಕೆಲಸವನ್ನು ತುಂಬಾ ಸುಲಭಗೊಳಿಸಿದೆ. ಈಗ ನೀವು ಯಾವುದೇ ಸಮಯದಲ್ಲಿ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಆದರೆ ಡಿಜಿಟಲ್ ಬ್ಯಾಂಕಿಂಗ್ ಆರಂಭವಾದ ನಂತರ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ.


COMMERCIAL BREAK
SCROLL TO CONTINUE READING

ಮೃತರ ಎಟಿಎಂನಿಂದ ಹಣ ತೆಗೆಯುವುದು ಕಾನೂನು ಬಾಹಿರ:
ವ್ಯಕ್ತಿ ಮೃತ ಪಟ್ಟ ನಂತರ ಅವರ ಖಾತೆಯಿಂದ ಕುಟುಂಬ ಸದಸ್ಯರು ಎಟಿಎಂ (ATM) ಮೂಲಕ ಹಣ ಡ್ರಾ ಮಾಡಿದ್ದು, ಅಕ್ರಮ ಎಸಗಿರುವುದು ಹಲವು ಬಾರಿ ಕಂಡು ಬಂದಿದೆ. ಯಾರಾದರೂ ಸತ್ತ ನಂತರ ಅವರ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ ಮಾಡುವುದು ಕಾನೂನು ಬಾಹಿರ. ನಿಯಮಗಳ ಪ್ರಕಾರ,  ಯಾರಾದರೂ ಸಾವನ್ನಪ್ಪಿದ ಬಳಿಕ ಬ್ಯಾಂಕ್‌ಗೆ ತಿಳಿಸದೆ ನಾಮಿನಿಯು ಸಹ ಖಾತೆಯಿಂದ ಹಣವನ್ನು ಹಿಂಪಡೆಯುವಂತಿಲ್ಲ. ಅಂತಹ ಪ್ರಕರಣದಲ್ಲಿ ಯಾರಾದರೂ ಸಿಕ್ಕಿಬಿದ್ದರೆ ಅವರಿಗೂ ಶಿಕ್ಷೆಯಾಗಬಹುದು. ಅದರ ಬಗ್ಗೆ ವಿವರವಾಗಿ ತಿಳಿಯೋಣ..


ಇದನ್ನೂ ಓದಿ- SIM Swapping Scam: ಈ ಅಪಾಯಕಾರಿ ಸಿಮ್ ಕಾರ್ಡ್ ಹಗರಣದ ಬಗ್ಗೆ ಎಚ್ಚರದಿಂದಿರಿ!


ಸಂಪೂರ್ಣ ಪ್ರಕ್ರಿಯೆಯನ್ನು ಅನುಸರಿಸಿದ ನಂತರವೇ ನೀವು ಹಣವನ್ನು ಹಿಂಪಡೆಯಬಹುದು:
ಕಾನೂನಿನ ಪ್ರಕಾರ, ವ್ಯಕ್ತಿಯ ಮರಣದ ನಂತರ, ಅವರ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ (Money Withdraw) ಮಾಡುವುದು ತಪ್ಪು. ವ್ಯಕ್ತಿಯ ಮರಣದ ನಂತರ ನಿಮ್ಮ ಹೆಸರಿಗೆ ಎಲ್ಲಾ ಆಸ್ತಿಗಳನ್ನು ವರ್ಗಾಯಿಸುವವರೆಗೆ ನೀವು ಅವರ ಹಣದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಇದನ್ನು ಮಾಡಲು, ಖಾತೆದಾರರು ಮರಣಹೊಂದಿದ್ದಾರೆ ಎಂದು ನೀವು ಮೊದಲು ಬ್ಯಾಂಕ್‌ಗೆ ತಿಳಿಸಬೇಕು. ಇದರ ನಂತರ ನಾಮಿನಿಯು ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಂತರವಷ್ಟೇ ಮೃತರ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಬಹುದು. ಮತ್ತೊಂದೆಡೆ, ಆ ಖಾತೆಯಲ್ಲಿ ಒಂದಕ್ಕಿಂತ ಹೆಚ್ಚು ನಾಮಿನಿಗಳಿದ್ದರೆ, ಎಲ್ಲಾ ನಾಮಿನಿಗಳು ಬ್ಯಾಂಕ್‌ಗೆ ಒಪ್ಪಿಗೆ ಪತ್ರವನ್ನು ತೋರಿಸಿ ಖಾತೆಯಿಂದ ಹಣವನ್ನು ಹಿಂಪಡೆಯಬೇಕಾಗುತ್ತದೆ.


ಇದನ್ನೂ ಓದಿ- ಮನೆಯಲ್ಲಿ ಕುಳಿತು ರೇಷನ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಹೀಗೆ ಅಪ್ಡೇಟ್ ಮಾಡಿ


ನಾಮಿನಿಯು ಬ್ಯಾಂಕ್‌ಗೆ ಹೋಗಿ ಸತ್ತವರ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಕ್ಲೈಮ್ ಮಾಡಬಹುದು ಎಂಬುದು ಗಮನಿಸಬೇಕಾದ ಸಂಗತಿ. ಇದಕ್ಕಾಗಿ ಅವರು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇದರೊಂದಿಗೆ ಮೃತರ ಪಾಸ್‌ಬುಕ್, ಖಾತೆಯ ಟಿಡಿಆರ್, ಎಟಿಎಂ, ಚೆಕ್ ಬುಕ್, ಮೃತರ ಮರಣ ಪ್ರಮಾಣಪತ್ರ ಮತ್ತು ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ನಂತಹ ಕೆಲವು ಪ್ರಮುಖ ದಾಖಲೆಗಳನ್ನು ಸಹ ಬ್ಯಾಂಕ್‌ಗೆ ಸಲ್ಲಿಸಬೇಕು. ಇದರ ನಂತರ ಬ್ಯಾಂಕ್ ಮೃತರ ಖಾತೆಯ ಹಣವನ್ನು ನಾಮಿನಿಗೆ ನೀಡುತ್ತದೆ ಮತ್ತು ಮೃತರ ಖಾತೆಯನ್ನು ಮುಚ್ಚಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.