ITR Filing Update: ಐಟಿಆರ್ ದಾಖಲಿಸುವ ನಿಯಮದಲ್ಲಿ ಬದಲಾವಣೆ, ಇಲ್ಲಿದೆ ವಿತ್ತ ಸಚಿವಾಲಯದ ಹೊಸ ಆದೇಶ
Income Tax Return: ಆದಾಯ ತೆರಿಗೆ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಒಂದು ವೇಳೆ ನೀವೂ ಕೂಡ ಇದುವರೆಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ ದಾಖಲಿಸದೆ ಇದ್ದಲ್ಲಿ, ಈ ಸುದ್ದಿ ನಿಮಗಾಗಿ. ಹೌದು, ಆದಾಯ ತೆರಿಗೆ ಇಲಾಖೆ ತೆರಿಗೆ ಸಲ್ಲಿರುವ ನಿಯಮದಲ್ಲಿ ಬದಲಾವಣೆ ಮಾಡಿದೆ. ಈ ಬದಲಾವಣೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ ಇಲ್ಲದೆ ಹೋದಲ್ಲಿ ನೀವು ದೊಡ್ಡ ನಷ್ಟವನ್ನೇ ಅನುಭವಿಸಬೇಕಾದೀತು.
Income Tax Return AY 2022-23: ನೀವೂ ಕೂಡ ಇದುವರೆಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ ದಾಖಲಿಸಿಲ್ಲ ಎಂದಾದರೆ, ಅದನ್ನು ತಕ್ಷಣವೇ ದಾಖಲಿಸಿ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ. ಆದರೆ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಹಲವು ವೇದಿಕೆಗಳ ಮೂಲಕ ಈ ಗಡುವನ್ನು ವಿಸ್ತರಿಸಲು ಬೇಡಿಕೆ ಇದ್ದರೂ ಕೂಡ, ಕೊನೆಯ ದಿನಾಂಕವನ್ನು ವಿಸ್ತರಿಸಲು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ, ಅಂದರೆ, ಈಗ ನೀವು ಯಾವುದೇ ಸಂದರ್ಭದಲ್ಲಿ ಜುಲೈ 31 ರ ಮೊದಲು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲೇಬೇಕಾಗಲಿದೆ.
ನೀವು ಕೂಡ ಒಂದು ವೇಳೆ ತೆರಿಗೆಯನ್ನು ಪಾವತಿಸುತ್ತಿದ್ದರೆ, ಈ ಸುದ್ದಿ ನಿಮ್ಮ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ತೆರಿಗೆ ರಿಟರ್ನ್ಸ್ ಸಲ್ಲಿಸುವ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಹೆಚ್ಚಿನ ಜನರನ್ನು ತೆರಿಗೆ ಬ್ರಾಕೆಟ್‌ಗೆ ತರಲು ಹಣಕಾಸು ಸಚಿವಾಲಯವು ಆದಾಯ ತೆರಿಗೆ ಸಲ್ಲಿಕೆ ವ್ಯಾಪ್ತಿಯನ್ನು ಹೆಚ್ಚಿಸಿದೆ.
ಆದೇಶ ಹೊರಡಿಸಿದ ಆದಾಯ ತೆರಿಗೆ ಇಲಾಖೆ
ಇತ್ತೀಚೆಗಷ್ಟೇ ಹಣಕಾಸು ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿ ಮಾಹಿತಯನ್ನು ನೀಡಿರುವುದು ಇಲ್ಲಿ ಗಮನಾರ್ಹ. ಈ ಅಧಿಸೂಚನೆಯ ಪ್ರಕಾರ, ಇದೀಗ ವಿಭಿನ್ನ ಆದಾಯ ಗುಂಪು ಮತ್ತು ಆದಾಯ ಹೊಂದಿರುವ ಜನರು ಸಹ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಹೊಸ ನಿಯಮದ ಪ್ರಕಾರ ಇದೀಗ ಆದಷ್ಟು ಹೆಚ್ಚು ಜನರನ್ನು ತೆರಿಗೆ ವ್ಯಾಪ್ತಿಗೆ ತರಬಹುದು. ಈ ಹೊಸ ನಿಯಮಗಳು ಏಪ್ರಿಲ್ 21 ರಿಂದ ಜಾರಿಗೆ ಬರಲಿವೆ.
ಇದನ್ನೂ ಓದಿ-ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಮತ್ತೊಂದು ಘೋಷಣೆ
ಹೊಸ ನಿಯಮಗಳು ಏನು ಹೇಳುತ್ತವೆ?
ಹೊಸ ನಿಯಮಗಳ ಪ್ರಕಾರ, ಯಾವುದೇ ವ್ಯವಹಾರದಲ್ಲಿ ಮಾರಾಟ, ವಹಿವಾಟು ಅಥವಾ ಆದಾಯವು 60 ಲಕ್ಷಕ್ಕಿಂತ ಹೆಚ್ಚಿದ್ದರೆ, ನಂತರ ಉದ್ಯಮಿ ರಿಟರ್ನ್ ಸಲ್ಲಿಸಬೇಕಾಗುತ್ತದೆ. ಸಂಬಳ ಪಡೆಯುವ ವ್ಯಕ್ತಿಯ ಆದಾಯವು ವರ್ಷಕ್ಕೆ 10 ಲಕ್ಷ ರೂ.ಗಿಂತ ಹೆಚ್ಚಿದ್ದರೂ, ಅವರು ಐಟಿಆರ್ ಅನ್ನು ಸಲ್ಲಿಸಬೇಕಾಗುತ್ತದೆ. ಟಿಡಿಎಸ್ ಮತ್ತು ಟಿಸಿಎಸ್ ಮೊತ್ತವು ವರ್ಷದಲ್ಲಿ 25,000 ರೂ.ಗಿಂತ ಹೆಚ್ಚಿದ್ದರೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆದಾರರಿಗೆ TDS + TCS ಮಿತಿಯನ್ನು 50,000 ರೂ.ಗಳಿಗೆ ಸೀಮಿತಗೊಳಿಸಲಾಗಿದೆ.
ಇದನ್ನೂ ಓದಿ-ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೇ ಸಚಿವರು
ಬ್ಯಾಂಕ್ ಠೇವಣಿಗಳು ಕೂಡ ಐಟಿಆರ್ ಆಕರ್ಷಿಸುತ್ತವೆ
ಹೊಸ ಅಧಿಸೂಚನೆಯ ಪ್ರಕಾರ, ಬ್ಯಾಂಕ್ ಉಳಿತಾಯ ಖಾತೆಯಲ್ಲಿ 1 ವರ್ಷದಲ್ಲಿ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇರಿಸಿದರೆ, ಅಂತಹ ಠೇವಣಿದಾರರು ತಮ್ಮ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಹೊಸ ನಿಯಮಗಳು ಏಪ್ರಿಲ್ 21 ರಿಂದ ಅನ್ವಯವಾಗುವಂತೆ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ. ಹೊಸ ಬದಲಾವಣೆಗಳಿಂದ ಆದಾಯ ತೆರಿಗೆ ಸಲ್ಲಿಕೆ ವ್ಯಾಪ್ತಿ ಹೆಚ್ಚಲಿದ್ದು, ಆದಷ್ಟು ಜನರು ತೆರಿಗೆ ವ್ಯಾಪ್ತಿಗೆ ಬರಲು ಸಾಧ್ಯವಾಗಲಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.