ನವದೆಹಲಿ: Jeff Bezos Reclaim World Richest Title - ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಮತ್ತೊಮ್ಮೆ ವಿಶ್ವದ ಶ್ರೀಮಂತ ಉದ್ಯಮಿ ಎನಿಸಿಕೊಂಡಿದ್ದಾರೆ. ಬೆಜೋಸ್ ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಅವರನ್ನು ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಜೆಫ್ ಬೆಜೋಸ್ (Jeff Bezos) ಅವರ ಆಸ್ತಿ 19100 ಕೋಟಿ ಡಾಲರ್ ಅಥವಾ ಸುಮಾರು 14.10 ಲಕ್ಷ ಕೋಟಿ ರೂ. ಇದೆ ಮತ್ತು ಈ ಸಂದರ್ಭದಲ್ಲಿ ಅವರು ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಈ ಅವಧಿಯಲ್ಲಿ, ಟೆಸ್ಲಾ ಷೇರುಗಳ ಬೆಲೆ ಕುಸಿತದಿಂದಾಗಿ ಎಲೋನ್ ಮಸ್ಕ್ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಆದರೆ ಭಾರತದ ಮುಖೇಶ್ ಅಂಬಾನಿ ಇದೀಗ ಈ ಪಟ್ಟಿಯ  ಟಾಪ್ 10 ನಿಂದ ಹೊರಗುಳಿದಿದ್ದಾರೆ .


COMMERCIAL BREAK
SCROLL TO CONTINUE READING

ಟೆಸ್ಲಾ ಷೇರುಗಳ ಬೆಲೆ ಇಳಿಕೆಯೇ ಕಾರಣವಾಗಿದೆ
ಬ್ಲೂಮ್‌ಬರ್ಗ್ ಪ್ರಕಟಿಸಿರುವ ವರದಿಯ ಪ್ರಕಾರ, ಟೆಸ್ಲಾ ಷೇರುಗಳ ಬೆಲೆ ಮಂಗಳವಾರ ಶೇ. 2.4 ರಷ್ಟು ಕುಸಿದು796.22 ಡಾಲರ್ ಬಂದು ತಲುಪಿವೆ. ಇದು ಎಲೋನ್ ಮಸ್ಕ್ ಅವರ ಸಂಪತ್ತನ್ನು  4.58 ಬಿಲಿಯನ್ ಅಥವಾ 458 ಕೋಟಿ ಡಾಲರ್ ನಷ್ಟು ಇಳಿಕೆ ಮಾಡಿದೆ. ಇದರಿಂದ ಅವರ ಒಟ್ಟು ಸಂಪತ್ತು19000 ಕೋಟಿ ಡಾಲರ್ ಆಗಿದ್ದು,  ಅವರು ಸ್ವಲ್ಪ ಅಂತರದೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಜೆಫ್ ಬೆಜೋಸ್ (Richest Business Man) ಮೂರು ವರ್ಷಗಳ ಕಾಲ ನಿರಂತರವಾಗಿ ಪ್ರಥಮ ಸ್ಥಾನದಲ್ಲಿದ್ದರು. ಆದರೆ ಇತ್ತೀಚೆಗೆ, ಎಲೋನ್ ಮಸ್ಕ್ ಅವರನ್ನು 2 ನೇ ಸ್ಥಾನಕ್ಕೆ ತಳ್ಳಿದ್ದರು.


ಈ ವರ್ಷ ಮಸ್ಕ್ ಸಂಪತ್ತಿನಲ್ಲಿ 2050 ಕೋಟಿ ಡಾಲರ್ ಏರಿಕೆಯಾಗಿದೆ
ಈ ವರ್ಷದ ಬಗ್ಗೆ ಮಾತ್ರ ಹೇಳುವುದಾದರೆ,  ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಅವರ ಆಸ್ತಿ 2050 ಕೋಟಿ ಡಾಲರ್ ಹೆಚ್ಚಾಗಿದೆ. ಜೆಫ್ ಬೆಜೋಸ್ ಅವರ ಸಂಪತ್ತು ಕೇವಲ. 88.40 ಕೋಟಿ ಡಾಲರ್ ಹೆಚ್ಚಾಗಿದೆ. ಆದರೆ ಕಳೆದ 24 ಗಂಟೆಗಳಲ್ಲಿ, ಮಸ್ಕ್ ಅವರ ಆಸ್ತಿ  458 ಕೋಟಿ ಡಾಲರ್ ಇಳಿಕೆಯಾಗಿದೆ.  ಇದರಿಂದಾಗಿ ಅವರು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಜನವರಿ 26 ರಿಂದ ಟೆಸ್ಲಾ ಷೇರುಗಳು ಶೇಕಡಾ 10 ಕ್ಕಿಂತ ಹೆಚ್ಚು ಕುಸಿದಿವೆ. ಕೆಲವು ದೊಡ್ಡ ಘಟನೆಗಳಿಂದಾಗಿ ಈ ವರ್ಷ ಮಸ್ಕ್ ಸುದ್ದಿಯಲ್ಲಿದ್ದಾರೆ.


ಇದನ್ನೂ ಓದಿ-ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು 100 ಮಿಲಿಯನ್ ಡಾಲರ್ ಬಹುಮಾನ ಘೋಷಣೆ


ಟಾಪ್ 10 ಪಟ್ಟಿಯಿಂದ ಮುಕೇಶ್ ಅಂಬಾನಿ ಔಟ್
ಸದ್ಯ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಇದೀಗ ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಸ್ಥಾನಗಳಿಂದ (Worlds Top 10 Billionaires) ಹೊರಗುಳಿದಿದ್ದಾರೆ.  ಅಂಬಾನಿಯ (Mukesh Ambani) ಒಟ್ಟು ಆಸ್ತಿ 7970 ಕೋಟಿ ಡಾಲರ್ ಇದ್ದು, ಅವರು ಈ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದಾರೆ. ಈ ವರ್ಷದ ಬಗ್ಗೆ ಹೇಳುವುದಾದರೆ , ಅಂಬಾನಿಯ ಸಂಪತ್ತು 303 ಕೋಟಿ ಡಾಲರ್ ಹೆಚ್ಚಾಗಿದೆ. ಕಳೆದ ವರ್ಷ ಆರ್‌ಐಎಲ್ ಷೇರು ಬೆಳೆಗಳಲ್ಲಿ ಬಲವಾದ ಏರಿಕೆ ಹಾಗೂ  ಜಿಯೋದಲ್ಲಿ ಭಾರಿ ಪ್ರಮಾಣದ ಹೂಡಿಕೆಯಿಂದಾಗಿ ಮುಖೇಶ್ ಅಂಬಾನಿ ಕಳೆದ ವರ್ಷ ಶ್ರೀಮಂತರ ಪಟ್ಟಿಯಲ್ಲಿ ಅಗ್ರ 5 ಸ್ಥಾನಗಳನ್ನು ತಲುಪಿದ್ದರು. ಆದರೆ ನಂತರ, ಆರ್ಐಎಲ್ ಷೇರುಗಳ ಮೇಲೆ ಒತ್ತಡ ಕಂಡುಬಂದಿದೆ.


ಇದನ್ನೂ ಓದಿ-ವಿಶ್ವದ ನಂ.1 ಶ್ರೀಮಂತ ಸಿಇಒ ರಾಜೀನಾಮೆ ನಿರ್ಧಾರ ಏಕೆ..? Amazonನಲ್ಲಿ ಅಂತಾದ್ದೇನಾಗಿತ್ತು..?


ಟಾಪ್ 10 ರಲ್ಲಿ ಯಾರಿದ್ದಾರೆ.
1. ಜೆಫ್ ಬೆಜೋಸ್: 19,100 ಕೋಟಿ ಡಾಲರ್.
2. ಎಲೋನ್ ಮಸ್ಕ್: 19000 ಕೋಟಿ ಡಾಲರ್.
3. ಬಿಲ್ ಗೇಟ್ಸ್: 13700 ಕೋಟಿ ಡಾಲರ್.
4. ಬ್ಯಾನಾರ್ಡ್ ಅರ್ನಾಲ್ಟ್: 11600 ಕೋಟಿ ಡಾಲರ್.
5. ಮಾರ್ಕ್ ಜುಕರ್‌ಬರ್ಗ್: 10400  ಕೋಟಿ ಡಾಲರ್.
6. ಜಾಂಗ್ ಶನ್ಶನ್: 9740 ಕೋಟಿ ಡಾಲರ್.
7. ಲ್ಯಾರಿ ಪೇಜ್: 9740 ಕೋಟಿ ಡಾಲರ್.
8. ಸೆರ್ಗೆ ಬಿನ್:  9420 ಕೋಟಿ ಡಾಲರ್.
9. ವಾರೆನ್ ಬಫೆಟ್: 9320 ಕೋಟಿ ಡಾಲರ್.
10. ಸ್ಟೀವ್ ಬಾಲ್ಮರ್: 8760  ಕೋಟಿ ಡಾಲರ್. 
11. ಮುಕೇಶ್ ಅಂಬಾನಿ: 7970 ಕೋಟಿ ಡಾಲರ್.


ಇದನ್ನೂ ಓದಿ-ನೆಲಕಚ್ಚಿದ ರಿಲಯನ್ಸ್ ಷೇರು, ಮುಖೇಶ್ ಅಂಬಾನಿಗೆ 700 ಕೋಟಿ ಡಾಲರ್ ನಷ್ಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.