US Market Down: ಮಂಗಳವಾರ ಅಮೇರಿಕಾದಲ್ಲಿ ಇತ್ತೀಚಿನ ಹಣದುಬ್ಬರದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಬಳಿಕ ಅಲ್ಲಿನ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಗಮನಿಸಲಾಗಿದೆ. ಇದು ವಿಶ್ವದ ಅತ್ಯಂತ ಶ್ರೀಮಂತ ಬಿಲಿಯನೇರ್ ಗಳ ಸಂಪತ್ತಿನಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿದೆ. ಹೊಸ ಹಣದುಬ್ಬರದ ಅಂಕಿ-ಅಂಶಗಳು ವಾಲ್ ಸ್ಟ್ರೀಟ್ ಗೆ ಭಾರಿ ಹೊಡೆತವನ್ನು ನೀಡಿವೆ. 

COMMERCIAL BREAK
SCROLL TO CONTINUE READING

ಜೆಫ್ ಬೆಜೋಸ್ ಆಸ್ತಿಯಲ್ಲಿ 80 ಸಾವಿರ ಕೋಟಿ ರೂ.ಗಳ ನಷ್ಟ
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಜೆಫ್ ಬೆಜೋಸ್ ಅವರ ಆಸ್ತಿ ಒಂದೇ ದಿನದಲ್ಲಿ 9.8 ಬಿಲಿಯನ್ ಡಾಲರ್ ಗಳಷ್ಟು (ಸುಮಾರು 80,000 ಕೋಟಿ ರೂ.) ಕಡಿಮೆಯಾಗಿದೆ. ಈ ಅವಧಿಯಲ್ಲಿ, ಜೆಫ್ ಬೆಜೋಸ್ ಅವರ ಆಸ್ತಿಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಇದರ ನಂತರ, ಎಲೋನ್ ಮಸ್ಕ್ ಅವರ ಆಸ್ತಿಯಲ್ಲಿಯೂ ಕೂಡ 8.4 ಬಿಲಿಯನ್ ಡಾಲರ್ ಗಳಷ್ಟು (70 ಸಾವಿರ ಕೋಟಿ ರೂ.) ಕುಸಿದಿದೆ.


ಇದನ್ನೂ ಓದಿ-Gold Price Today :ಇಂದಿನ ಚಿನ್ನ ಬೆಳ್ಳಿ ದರ ತಿಳಿಯಿರಿ


ಮತ್ತೆ ಯಾರಿಗೆ ಎಷ್ಟು ನಷ್ಟ?
ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಾರ್ಕ್ ಜುಕರ್‌ಬರ್ಗ್, ಲ್ಯಾರಿ ಪೇಜ್, ಸೆರ್ಗೆ ಬ್ರಿನ್ ಮತ್ತು ಸ್ಟೀವ್ ಬಾಲ್ಮರ್ ಅವರ ನಿವ್ವಳ ಆಸ್ತಿ ಮೌಲ್ಯವು  4 ಬಿಲಿಯನ್ ಡಾಲರ್ ಗಳಿಗಿಂತ ಹೆಚ್ಚು ಕುಸಿದಿದೆ, ಆದರೆ ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಕ್ರಮವಾಗಿ 3.4 ಬಿಲಿಯನ್ ಡಾಲರ್ ಮತ್ತು 2.8 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. 


ಇದನ್ನೂ ಓದಿ-Arecanut Price: ರಾಜ್ಯದ ಯಾವ್ಯಾವ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ?


ಒಟ್ಟು 1300 ಅಂಕಗಳಿಂದ ಕುಸಿದ ಅಮೆರಿಕಾದ ಷೇರು ಮಾರುಕಟ್ಟೆ
ಅಮೇರಿಕಾದಲ್ಲಿರುವ ಮಾರುಕಟ್ಟೆಗಳ ಕುಸಿತದ ನಂತರ, ಡೌ ಜೋನ್ಸ್ ಸುಮಾರು 1300 ಅಂಕಗಳನ್ನು ಕಳೆದುಕೊಂಡಿದೆ ಮತ್ತು ಎಸ್ & ಪಿ ಕೂಡ 500 ಅಂಕಗಳ ಕುಸಿತವನ್ನು ಕಂಡಿದೆ. ಆಗಸ್ಟ್ ತಿಂಗಳಲ್ಲಿ ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ.8.3 ರಷ್ಟಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಇದಲ್ಲದೇ ಅಮೇರಿಕಾ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳು ಮತ್ತು ಇಂಧನ ಬೆಲೆಗಳಲ್ಲಿ ದೊಡ್ಡ ಏರಿಳಿತ ಸಂಭವಿಸಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.