Jio-Airtel-Vi-BSNLಗಿಂತಲೂ ಅಗ್ಗ!: 49 ರೂ.ಗೆ 180 ದಿನಗಳ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಸೌಲಭ್ಯ
ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಯೋಜನೆಗಳು ಸಹ ಈ ಅಗ್ಗದ ಯೋಜನೆಗೆ ಸಲಾಂ ಎಂದಿವೆ. ಈ ರಿಚಾರ್ಜ್ ಪ್ಲಾನ್‌ನಲ್ಲಿ 49 ರೂ.ಗಳಿಗೆ 180 ದಿನಗಳ ವ್ಯಾಲಿಡಿಟಿ ನಿಮಗೆ ಸಿಗುತ್ತದೆ.
ನವದೆಹಲಿ: Jio, Airtel, Vi (Vodafone Idea) ಮತ್ತು BSNL ತಮ್ಮ ಗ್ರಾಹಕರಿಗೆ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿವೆ. ಈ ಕಂಪನಿಗಳು ಕಡಿಮೆ ವೆಚ್ಚದ ಪ್ಲಾನ್‍ಗಳಿಂದ ಹಿಡಿದು ದುಬಾರಿ ರಿಚಾರ್ಜ್ ಪ್ಲಾನ್‍ಗಳ ವ್ಯಾಪ್ತಿಯನ್ನು ಹೊಂದಿವೆ. ಪ್ರಿಪೇಯ್ಡ್ ಯೋಜನೆಗೆ ಸಂಬಂಧಿಸಿದಂತೆ ಈ 4 ಕಂಪನಿಗಳ ನಡುವೆ ಸಾಕಷ್ಟು ಪೈಪೋಟಿ ಇದೆ. ಆದರೆ ನಾವು ಇಂದು ಹೇಳಲು ಹೊರಟಿರುವ ಯೋಜನೆ ಬೇರೆಯ ಟೆಲಿಕಾಂ ಕಂಪನಿಯ ಯೋಜನೆಯಾಗಿದೆ. ಇದು MTNLನ 49 ರೂ. ರಿಚಾರ್ಜ್ ಪ್ಲಾನ್. ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚು ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: UPI Payment Limit: UPI ನಿಂದ ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು?
MTNL 49 ರೂ. ಯೋಜನೆ
MTNLನ ಈ 49 ರೂ. ಪ್ಲಾನ್‌ನಲ್ಲಿ 180 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಇದರಲ್ಲಿ ಬಳಕೆದಾರರಿಗೆ 60 ಸ್ಥಳೀಯ ನಿಮಿಷಗಳು ಮತ್ತು 20 STD ನಿಮಿಷಗಳನ್ನು ನೀಡಲಾಗುತ್ತದೆ. ಕರೆ ಶುಲ್ಕಗಳ ಕುರಿತು ಹೇಳುವುದಾದರೆ, ಪ್ರತಿ ಸೆಕೆಂಡಿಗೆ ಪೈಸಾ ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಅದರಂತೆ ಸೆಕೆಂಡಿಗೆ 1 ಪೈಸಾ ದರದಲ್ಲಿ ಶುಲ್ಕವಿರುತ್ತದೆ. ಎಸ್‌ಎಂಎಸ್ ಶುಲ್ಕ ಸ್ಥಳೀಯರಿಗೆ 0.50 ಪೈಸೆ, ರಾಷ್ಟ್ರೀಯಕ್ಕೆ 1.50 ಮತ್ತು ಅಂತಾರಾಷ್ಟ್ರೀಯಕ್ಕೆ 5 ರೂ. ವಿಧಿಸಲಾಗುತ್ತದೆ.
ಇದನ್ನೂ ಓದಿ: Petrol Price Today: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ರಿಲೀಫ್! ಇಂದಿನ ದರ ತಿಳಿಯಿರಿ
ಅಗ್ಗದ ಯೋಜನೆ
MTNLನ ಈ ಯೋಜನೆಯ ಮುಂದೆ Jio, Airtel, Vi ಮತ್ತು BSNLನ ಯೋಜನೆಗಳು ಸ್ಪರ್ಧೆಯಲ್ಲಿಲ್ಲ. 4 ಟೆಲಿಕಾಂ ಕಂಪನಿಗಳು 180 ದಿನಗಳ ವ್ಯಾಲಿಡಿಟಿ ನೀಡುವ ಇಂತಹ ಅಗ್ಗದ ಯೋಜನೆ ಹೊಂದಿಲ್ಲ. ಆದರೆ ಸಂಪರ್ಕದ ವಿಷಯಕ್ಕೆ ಬಂದರೆ ಈ ನಾಲ್ಕು ಕಂಪನಿಗಳ ನೆಟ್‌ವರ್ಕ್ ಅಗಾಧವಾಗಿದೆ. ಅಲ್ಲದೇ ಶೀಘ್ರವೇ ಈ ನೆಟ್‍ವರ್ಕ್‍ಗಳಲ್ಲಿ ಬಳಕೆದಾರರಿಗೆ 5G ಸೇವೆ ಸಹ ಸಿಗಲಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಪೋರ್ಟ್ ಬದಲಿಗೆ ಹೊಸ MTNL ಸಿಮ್ ತೆಗೆದುಕೊಂಡು ಫೋನ್‌ನ ಸೆಕೆಂಡರಿ ಸ್ಲಾಟ್‌ಗೆ ಹಾಕಿ ಬಳಸಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.