ನವದೆಹಲಿ:  ಮುಕೇಶ್ ಅಂಬಾನಿ ನಾಯಕತ್ವದ ರಿಲಯನ್ಸ್‌ನ ಟೆಲಿಕಾಂ ಮತ್ತು ಡಿಜಿಟಲ್ ಅಂಗವಾದ ಜಿಯೋ ಭಾರತದ ಪ್ರಬಲ ಬ್ರ್ಯಾಂಡ್ ಮುಂದುವರಿದಿದೆ. ಅದರ ನಂತರದ ಸ್ಥಾನದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (ಎಲ್ಐಸಿ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂಥದ್ದು ಇದೆ. ಈ ಬಗ್ಗೆ ಇತ್ತೀಚಿನ ವರದಿ 'ಗ್ಲೋಬಲ್- 500 2024' ಎಂಬುದನ್ನು ಬ್ರ್ಯಾಂಡ್ ಫೈನಾನ್ಸ್ ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ಬ್ರ್ಯಾಂಡ್ ಫೈನಾನ್ಸ್‌ನ 2023ರ ಶ್ರೇಯಾಂಕದಲ್ಲಿಯೂ ರಿಲಯನ್ಸ್ ಜಿಯೋ ಭಾರತದ ಪ್ರಬಲ ಬ್ರ್ಯಾಂಡ್‌ಗಳಲ್ಲಿ ಅಗ್ರಸ್ಥಾನದಲ್ಲಿತ್ತು. 2024ರ ಪಟ್ಟಿಯಲ್ಲಿ ವೀಚಾಟ್, ಯೂಟ್ಯೂಬ್, ಗೂಗಲ್, ಡೆಲಾಯಿಟ್, ಕೋಕಾ ಕೋಲಾ ಮತ್ತು ನೆಟ್ ಫ್ಲಿಕ್ಸ್ ಈ ಎಲ್ಲವೂ ವಿಶ್ವದ ಪ್ರಮುಖ ಬ್ರ್ಯಾಂಡ್ ಗಳಲ್ಲಿ ಮುಂಚೂಣಿಯಲ್ಲಿ ಇದ್ದು, ಇವುಗಳ ಸಾಲಿನಲ್ಲಿ ಇರುವಂಥ ಜಿಯೋ ಹದಿನೇಳನೇ ಸ್ಥಾನದಲ್ಲಿದೆ. ಅಂದಹಾಗೆ ಜಿಯೋದ ಬ್ರ್ಯಾಂಡ್ ಸಾಮರ್ಥ್ಯ ಸೂಚ್ಯಂಕ 88.9 ಇದೆ.


ಜಾಗತಿಕ ಮಟ್ಟದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ 23ನೇ ಸ್ಥಾನದಲ್ಲಿದಲ್ಲಿದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 24ನೇ ಸ್ಥಾನದಲ್ಲಿದೆ. ಇವು ಇವೈ (EY), ಮತ್ತು ಇನ್ ಸ್ಟಾಗ್ರಾಮ್ ನಂಥ ನಂತಹ ಬ್ರ್ಯಾಂಡ್‌ಗಳಿಗಿಂತ ಮುಂದಿವೆ.


ಇದನ್ನೂ ಓದಿ: ರವಿ ಬಸ್ರೂರು ನಿರ್ದೇಶನದ ಕಡಲ್ ಸಿನಿಮಾ ಜ.೧೯ಕ್ಕೆ ಬಿಡುಗಡೆ


“ಹಾಗೆ ನೋಡಿದರೆ ದೂರಸಂಪರ್ಕ ವಲಯದಲ್ಲಿ ಜಿಯೋ ಹೊಸದಾಗಿ ಪ್ರವೇಶಿಸಿದ್ದು, ಬ್ರ್ಯಾಂಡ್ ಮೌಲ್ಯದಲ್ಲಿ ಗಮನಾರ್ಹವಾದ ಶೇ 14ರಷ್ಟು ಹೆಚ್ಚಳದೊಂದಿಗೆ 6.1 ಶತಕೋಟಿ ಯುಎಸ್ ಡಿಗೆ ತಲುಪಿ, ಪ್ರಬಲ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಜೊತೆಗೆ ಹೆಚ್ಚಿನ ಬ್ರ್ಯಾಂಡ್ ಸಾಮರ್ಥ್ಯ ಸೂಚ್ಯಂಕ ಸ್ಕೋರ್ 89.0 ಮತ್ತು ಸಂಬಂಧಿತ ಎಎಎ (AAA) ಬ್ರ್ಯಾಂಡ್ ರೇಟಿಂಗ್ ಕೂಡ ಪಡೆದಿದೆ,“ ಎಂದು ವರದಿ ಹೇಳಿದೆ.


"ಟೆಲಿಕಾಂ ಉದ್ಯಮದಲ್ಲಿ ಜಿಯೋದ ಈ ಅಮೋಘ ಏರಿಕೆಯು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದಿಂದ ಮಾಡಿರುವಂಥ ಗಣನೀಯ ಬ್ರ್ಯಾಂಡ್ ಹೂಡಿಕೆಯಿಂದ ಪ್ರಯೋಜನ ಪಡೆಯುತ್ತಿದೆ, ಇದರ ಜತೆಗೆ ಬಹಳ ವೇಗವಾಗಿ ಗ್ರಾಹಕ ನೆಲೆಯಲ್ಲಿ ಬೆಳವಣಿಗೆ ಮತ್ತು ಆದಾಯದ ಬೆಳವಣಿಗೆಯನ್ನು ನೀಡುತ್ತಿದೆ.


ಇದನ್ನೂ ಓದಿ: ಕಡೆಗಣಿಸು, ನಿರ್ಲಕ್ಷಿಸು, ನಿದ್ರಿಸು, ಮತ್ತದನ್ನೇ ಪುನರಾವರ್ತಿಸು; ಇದುವೇ ಪ್ರಧಾನಿ ಮೋದಿ ಮಂತ್ರ!


"ಬ್ರ್ಯಾಂಡ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಬ್ರ್ಯಾಂಡ್ ಸಾಮರ್ಥ್ಯದ ಸೂಚ್ಯಂಕ ಮತ್ತು ಎಎಎ ರೇಟಿಂಗ್ ಇವೆಲ್ಲ ಅದರ ಗ್ರಾಹಕ ನೆಲೆಯ ವೇಗವಾದ ಬೆಳವಣಿಗೆ, ಮಾರುಕಟ್ಟೆ ನಾವೀನ್ಯತೆ ಮತ್ತು ಪ್ರಬಲವಾದ ಬ್ರ್ಯಾಂಡ್ ಆಲೋಚನೆಯಲ್ಲಿ ಪ್ರತಿಬಿಂಬಿಸುತ್ತದೆ."


ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಮತ್ತು ತಾಜ್ ಹೊಟೇಲ್‌ಗಳಂತಹ ಕಂಪನಿಗಳೊಂದಿಗೆ ವೈವಿಧ್ಯಮಯ ಪೋರ್ಟ್ ಫೋಲಿಯೋ ಹೊಂದಿರುವ ಟಾಟಾ ಸಮೂಹವಯ "ದಕ್ಷಿಣ ಏಷ್ಯಾದ ಅತ್ಯಮೂಲ್ಯ ಬ್ರ್ಯಾಂಡ್ ಆಗಿದೆ" ಎಂದು ವರದಿ ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.