Changes From July 2023 : ಜೂನ್ ತಿಂಗಳು ಮುಗಿಯಲಿದೆ ಮತ್ತು ಮೂರು ದಿನಗಳ ನಂತರ ಜುಲೈ 1 ಬರಲಿದೆ. ಜುಲೈ ಆರಂಭದೊಂದಿಗೆ, ನಿಮಗೆ ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಬದಲಾಗುವ ಸಾಧ್ಯತೆಯಿದೆ. ಈ ಬದಲಾವಣೆಗಳ ನೇರ ಪರಿಣಾಮವು ನಿಮ್ಮ ಜೇಬಿನ ಮೇಲೆ ಉಂಟಾಗುವ ಸಾಧ್ಯತೆ ಇದೆ. ಪ್ರತಿ ತಿಂಗಳ ಮೊದಲ ದಿನಾಂಕದ ಜೊತೆಗೆ, ಈ ಬಾರಿಯೂ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಈ ಬದಲಾವಣೆಗಳ ಬಗ್ಗೆ ನೀವು ತಿಳಿದಿರಬೇಕು. ಈ ಬದಲಾವಣೆಗಳು CNG-PNG ಬೆಲೆ, LPG ಸಿಲಿಂಡರ್‌ಗಳ ದರ ಇತ್ಯಾದಿಗಳನ್ನು ಒಳಗೊಂಡಿವೆ. ಜುಲೈ 1 ರಿಂದಾಗುವ ಬದಲಾವಣೆಗಳ ಕುರಿತು ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ಎಲ್ಪಿಜಿ ಸಿಲಿಂಡರ್ ದರಗಳು
ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಏಪ್ರಿಲ್, ಮೇ ಮತ್ತು ಜೂನ್ ಮೊದಲ ದಿನಾಂಕದಂದು ಇಳಿಕೆ ಮಾಡಲಾಗಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಬಾರಿ ವಾಣಿಜ್ಯ ಜತೆಗೆ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರವೂ ಇಳಿಕೆಯಾಗುವ ನಿರೀಕ್ಷೆ ಇದೆ.


ಇದನ್ನೂ ಓದಿ-Business Laws: ವ್ಯಾಪಾರ ಕಾಯ್ದೆಗಳ ಉಲ್ಲಂಘನೆ, 26 ಸಾವಿರ ವಿಧಗಳಲ್ಲಿ ವ್ಯಾಪಾರಿಗಳನ್ನು ಜೈಲಿಗಟ್ಟಬಹುದು!


ಕ್ರೆಡಿಟ್ ಕಾರ್ಡ್ ನಿಯಮಗಳು
ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚಗಳ ಮೇಲೆ ಜುಲೈ 1, 2023 ರಿಂದ TCS ಶುಲ್ಕವನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಅಡಿಯಲ್ಲಿ, ನೀವು 7 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ವಿದೇಶ ವ್ಯವಹಾರಕ್ಕಾಗಿ ಬಳಸಿದರೆ , ನೀವು 20 ಪ್ರತಿಶತ TCS ಅನ್ನು ಪಾವತಿಸಬೇಕಾಗುತ್ತದೆ. ಶಿಕ್ಷಣ ಮತ್ತು ಔಷಧಕ್ಕೆ ಸಂಬಂಧಿಸಿದ ವೆಚ್ಚದ ಮೇಲೆ ಈ ಶುಲ್ಕವನ್ನು ಶೇಕಡಾ 5 ಕ್ಕೆ ನಿಗದಿಪಡಿಸಲಾಗಿದೆ. ವಿದೇಶದಲ್ಲಿ ಶಿಕ್ಷಣಕ್ಕಾಗಿ ಸಾಲ ಪಡೆದ ತೆರಿಗೆದಾರರು 7 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಶೇಕಡಾ 0.5 ರಷ್ಟು TCS ಶುಲ್ಕವನ್ನು ಪಾವತಿಸಬೇಕಾಗಲಿದೆ.


ಇದನ್ನೂ ಓದಿ-Note Exchange: ಕಳೆದ ಒಂದು ತಿಂಗಳಿನಲ್ಲಿ ಶೇ.72 ರಷ್ಟು 2000 ಮುಖಬೆಲೆಯ ನೋಟುಗಳು ಬ್ಯಾಂಕ್ ಸೇರಿವೆ


CNG-PNG ಬೆಲೆಗಳು
CNG ಮತ್ತು PNG ಬೆಲೆಯಲ್ಲಿ ಬದಲಾವಣೆಗಳನ್ನು ತಿಂಗಳ 1 ರಂದು ಅಥವಾ ಮೊದಲ ವಾರದಲ್ಲಿ ಗಮನಿಸಬಹುದು. ದೆಹಲಿ, ಮುಂಬೈ ಸೇರಿದಂತೆ ಇತರ ನಗರಗಳಲ್ಲಿ, ತೈಲ ಕಂಪನಿಗಳು ತಿಂಗಳ ಮೊದಲ ವಾರದಲ್ಲಿ ಸಿಎನ್‌ಜಿ-ಪಿಎನ್‌ಜಿ ದರವನ್ನು ಬದಲಾಯಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಜುಲೈನಲ್ಲಿ ಬೆಲೆಯಲ್ಲಿ ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.