Earn Online: ಪ್ರತಿಯೊಬ್ಬರಿಗೂ ಹಣ ಗಳಿಸುವ ಆಸೆ ಇರುತ್ತದೆ. ಆಫೀಸ್ ಕೆಲಸದ ಜೊತೆಗೆ ಸೈಡ್ ವರ್ಕ್ ಮಾಡಿಯಾದರೂ  ಪಾಕೆಟ್ ಮನಿ ಗಳಿಸಬಹುದು ಅನ್ನೋ ಆಸೆ ಕೆಲವರಿಗೆ ಇದ್ದೇ ಇರುತ್ತದೆ. ನಾವು ನಿಮಗೆ ಹೇಳುವ ಮಾರ್ಗದಿಂದ ನೀವು ಲಕ್ಷಗಳನ್ನು ಗಳಿಸಲು ಸಾಧ್ಯವಿಲ್ಲ, ಆದರೆ ನೀವು ಪಾಕೆಟ್ ಮನಿಗಳಿಸಬಹುದು. ಅಂತಹ ಜನಪ್ರಿಯ ಆ್ಯಪ್ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಇದರಿಂದ ನೀವು ಮನೆಯಲ್ಲಿ ಕುಳಿತು ನಿಮಿಷಗಳಲ್ಲಿ 500 ರೂಪಾಯಿಗಳನ್ನು ಗಳಿಸಬಹುದು.


COMMERCIAL BREAK
SCROLL TO CONTINUE READING

ನಿಮಿಷಗಳಲ್ಲಿ ಕುಳಿತಲ್ಲಿಯೇ 500 ರೂಪಾಯಿಗಳನ್ನು ಗಳಿಸಲು (Earn) ನಿಮಗೆ ಸಹಾಯ ಮಾಡುವ ಆ್ಯಪ್ ಬೇರಾವುದೂ ಅಲ್ಲ ಫೋನ್ ಪೇ (PhonePe). ಈ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ವಿವಿಧ ರೀತಿಯ ಕಮಿಷನ್ ಗಳಿಸಬಹುದು. ಈಗ PhonePe ಒಂದು ಕೊಡುಗೆಯನ್ನು ಪರಿಚಯಿಸಿದೆ, ಅದರ ಮೂಲಕ ನೀವು 500 ರೂಪಾಯಿಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಆಫರ್ ಬಗ್ಗೆ ತಿಳಿಯೋಣ...


ಇದನ್ನೂ ಓದಿ- Offline Digital Payments: ಈಗ ಇಂಟರ್ನೆಟ್ ಇಲ್ಲದೆ ಸಾಧ್ಯ ಹಣ ವರ್ಗಾವಣೆ! ಪಾವತಿ ಮಿತಿಯನ್ನು ನಿಗದಿಪಡಿಸಿದ RBI


PhonePe ನ ಅದ್ಭುತ ಕೊಡುಗೆ:
ನೀವು ಫೋನ್ ಪೇ (PhonePe) ನಲ್ಲಿ ಒಬ್ಬ ವ್ಯಕ್ತಿಯನ್ನು ಉಲ್ಲೇಖಿಸಿದಾಗ ಮತ್ತು ಶಿಫಾರಸು ಮಾಡಲಾದ ವ್ಯಕ್ತಿಯು ಈ ಅಪ್ಲಿಕೇಶನ್ ಅನ್ನು ಬಳಸಿದಾಗ, ನೀವು ರೂ.100 ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಫೋನ್‌ಪೇಯಲ್ಲಿ ಮೊದಲ ಬಾರಿಗೆ ಎದುರಿಗಿರುವ ವ್ಯಕ್ತಿಯು ಯುಪಿಐ (UPI) ಮೂಲಕ ತನ್ನ ಬ್ಯಾಂಕ್ ಖಾತೆಯನ್ನು ಸೇರಿಸಿದಾಗ ಮಾತ್ರ ಈ ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ. ಇದಕ್ಕಾಗಿ ನೀವು ರೆಫರ್ ಮಾಡಿದ ವ್ಯಕ್ತಿಯು ಉಲ್ಲೇಖಿತ ಕೋಡ್ ಅನ್ನು ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಅನ್ನು ಬಳಸುವುದು. ನೀವು ಕಳುಹಿಸಿದ ಉಲ್ಲೇಖಿತ ಕೋಡ್ ಅನ್ನು ಕ್ಲಿಕ್ ಮಾಡುವ ಮೂಲಕ 5 ರೆಫರ್ ಮಾಡಿದ ವ್ಯಕ್ತಿಗಳು ಅಪ್ಲಿಕೇಶನ್ ಅನ್ನು ಬಳಸಿದರೆ, ನಿಮಗೆ 500 ರೂ. ಸಿಗುತ್ತದೆ.


ಇದನ್ನೂ ಓದಿ- PM Kisan Yojana: ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಕೈಗೆಟುಕುವ ದರದಲ್ಲಿ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ


ಇದಕ್ಕಾಗಿ ಏನು ಮಾಡಬೇಕಾಗುತ್ತದೆ?
1. ಮೊದಲನೆಯದಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ PhonePe ಅನ್ನು ತೆರೆಯಬೇಕು.
2. ಅಪ್ಲಿಕೇಶನ್ ತೆರೆದ ನಂತರ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು ರೆಫರ್ ಮಾಡಿ ಮತ್ತು ಗಳಿಸಿ 100 ಅನ್ನುವ ಆಯ್ಕೆಯನ್ನು ಟ್ಯಾಪ್ ಮಾಡಿ.
3. ಹೊಸ ಪುಟವು ತೆರೆಯುತ್ತದೆ, ಇದರಿಂದ ನೀವು ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್ ಮತ್ತು ಇತರ ವಿಧಾನಗಳ ಮೂಲಕ ಅಪ್ಲಿಕೇಶನ್ ಅನ್ನು ರೆಫರ್ ಮಾಡಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.