Winter Business Idea: ಪ್ರಸ್ತುತ, ದೇಶಾದ್ಯಂತ ಚಳಿ ಹೆಚ್ಚಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತದ ಪರಿಣಾಮದಿಂದಾಗಿ ಮಳೆಯೂ ಹೆಚ್ಚಾಗಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲೂ ಸಾಮಾನ್ಯಕ್ಕಿಂತಲೂ ಚಳಿ ಹೆಚ್ಚಾಗಿಯೇ ಇದೆ. ಚುಮು-ಚುಮು ಚಳಿಯಲ್ಲಿ ಟೀ-ಕಾಫಿ ಜೊತೆಗೆ ಬಿಸಿ ಬಿಸಿಯಾಗಿ ಏನನ್ನಾದರೂ ತಿನ್ನಬೇಕೆನಿಸುವುದು ಸಹಜ...! 


COMMERCIAL BREAK
SCROLL TO CONTINUE READING

ನೀವು ಚಳಿಗಾಲವನ್ನೇ ಬಂಡವಾಳವಾಗಿಸಿಕೊಂಡು "ಕಾಲೋಚಿತ ವ್ಯವಹಾರ" ಆರಂಭಿಸಿದರೆ ಉತ್ತಮ ಆದಾಯ ಗಳಿಸಬಹುದು. ಇದಕ್ಕಾಗಿ, ನೀವು ದಿನವಿಡೀ ದುಡಿಯುವ ಅಗತ್ಯವಿಲ್ಲ. ಬದಲಿಗೆ, ದಿನದಲ್ಲಿ ಕೇವಲ ನಾಲೈದು ಗಂಟೆಗಳ ಕಾಲ ಕೆಲಸ ಮಾಡಿ ಬಾರೀ ಹಣ ಗಳಿಸಬಹುದು.  


ಇದನ್ನೂ ಓದಿ- SCAM ALERT: SBI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದೀರಾ? ಹಾಗಿದ್ರೆ ನಿಮ್ಮ ಫೋನ್ ಗೆ ಈ ರೀತಿ ಮೆಸೇಜ್ ಬರಬಹುದು, ಎಚ್ಚರ! 


ಚಳಿಗಾಲದ ಬಿಸಿನೆಸ್ ಉಪಾಯಗಳು: 
ಚಳಿಗಾಲದಲ್ಲಿ ಕಾಫಿ-ಟೀ, ಬಜ್ಜಿ ಬೋಂಡ ವ್ಯವಹಾರ ಮಾಡುವವರಿಗೆ ಉತ್ತಮ ಆದಾಯ ದೊರೆಯುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರಿಂದ ಕೆಲವರು ಇವುಗಳನ್ನು 'ಅನ್ ಹೆಲ್ದಿ' ಆಹಾರಗಳೆಂದು ಪರಿಗಣಿಸುತ್ತಾರೆ. 


ಸೂಪ್ ವ್ಯವಹಾರ ಆರಂಭಿಸಿ ಕೈತುಂಬಾ ಗಳಿಸಿ:
ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಕೆಲ ಮಂದಿ ತೂಕ ಹೆಚ್ಚಳ, ಅಸಿಡಿಟಿ ಸಮಸ್ಯೆಗಳನ್ನು ತಪ್ಪಿಸಲು ಟೀ-ಕಾಫಿಯನ್ನು ಕುಡಿಯುವುದನ್ನು ಇಷ್ಟಪಡುವುದಿಲ್ಲ. ಆದರೂ, ಮಂಜು, ಚಳಿಯ ವಾತಾವರಣದಲ್ಲಿ ಬಿಸಿ-ಬಿಸಿಯಾಗಿ ಏನನ್ನಾದರೂ ಸವಿಯಲು ಇಚ್ಚಿಸುತ್ತಾರೆ. ಇಂತಹ ನಗರಗಳಲ್ಲಿ 'ಸೂಪ್ ಮಾರಾಟ'ದ ವ್ಯವಹಾರ ಆರಂಭಿಸಿದರೆ ಕೈ ತುಂಬಾ ಆದಾಯ ಗಳಿಸಬಹುದು. 


ಇದನ್ನೂ ಓದಿ- Post Office Saving Schemes: ಕೇವಲ 10 ರೂ.ನಿಂದ ಉಳಿತಾಯ ಆರಂಭಿಸಿ ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿ ಗಳಿಸಲು ಸುವರ್ಣಾವಕಾಶ! 


ಇದೇ ಬೆಸ್ಟ್ ಸಮಯ: 
ಉತ್ತಮ ಆದಾಯ ಗಳಿಸಬೇಕೆಂದು ನೀವು ಬೆಳಗ್ಗೆಯಿಂದ ಸಂಜೆವರೆಗೂ ಸೂಪ್ ಮಾರಾಟ ಮಾಡುವ ಅಗತ್ಯವಿಲ್ಲ. ಮಧ್ಯಾಹ್ನ 3 ಗಂಟೆ ನಂತರ ಕೆಲ ಗಂಟೆವರೆಗೆ ಈ ಕೆಲಸ ಮಾಡಿದರೂ ಸಾಕು ಕಡಿಮೆ ಹೂಡಿಕೆ ಮಾಡಿ ಬಂಪರ್ ಹಣ ಸಂಪಾದಿಸಬಹುದು. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.