ಸಾರಿಗೆ ಇಲಾಖೆಯಿಂದ ಪ್ರಯಾಣಿಕರಿಗೆ ಮತ್ತೊಂದು ಶಾಕ್: ಬಸ್ ಪಾಸ್ ದರ ಏರಿಕೆ!
Bus Pass Price Hiked: ಇತ್ತೀಚಿಗಷ್ಟೇ ಬಸ್ ಟಿಕೆಟ್ ದರ ಏರಿಸಿದ್ದ ರಾಜ್ಯ ಸಾರಿಗೆ ಇಲಾಖೆ ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯಾಪ್ತಿಯ ಬಸ್ ಪಾಸುಗಳ ದರವನ್ನು ಹೆಚ್ಚಳ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
Bus Pass Price Hiked: ತೀವ್ರ ವಿರೋಧದ ನಡುವೆಯೂ ಸಾರಿಗೆ ಇಲಾಖೆಯು ಪ್ರಯಾಣಿಕರ ಮೇಲೆ ಮತ್ತೊಂದು ಬರೆ ಎಳೆದಿದೆ. ರಾಜ್ಯದ ಎಲ್ಲಾ ಬಸ್ ಟಿಕೆಟ್ ದರಗಳನ್ನು ಶೇಕಡಾ 15ರಷ್ಟು ಏರಿಕೆ ಮಾಡಿದ್ದ ರಾಜ್ಯ ಸಾರಿಗೆ ಇಲಾಖೆಯು ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಪಾಸುಗಳ ದರವನ್ನು ಹೆಚ್ಚಳ ಮಾಡಿದೆ.
ಇತ್ತೀಚಿಗೆ ಸಾರಿಗೆ ಇಲಾಖೆ ಬಸ್ ಟಿಕೆಟ್ ದರ ಏರಿಕೆ ಮಾಡುವ ಮುನ್ನ ಮತ್ತು ನಂತರ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗಾಗಲೇ ಬೆಲೆ ಏರಿಕೆಯಿಂದ ಬಳಲಿ ಬೆಂಡಾಗಿರುವ ನಾಗರಿಕರು ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಿದಾಗ ವ್ಯಾಪಕ ವಿರೋಧ ಮಾಡಿದರು. ಇದಕ್ಕೆ ಕ್ಯಾರೇ ಎನ್ನದ ಸಾರಿಗೆ ಇಲಾಖೆ ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಪಾಸುಗಳ ದರವನ್ನು ಹೆಚ್ಚಳ ಮಾಡಿದೆ.
ಇದ್ನನೂ ಓದಿ- Union Budget 2025: ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ 'ನಾರಿಯರಿಗೆ' ಜಾಕ್ ಪಾಟ್..!
ಇತ್ತೀಚಿಗೆ KSRTC, BMTC, NWKRTC ಮತ್ತು KKRTC ಬಸ್‌ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಪಾಸುಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಯಾವ್ಯಾವ ರೀತಿಯ ಬಸ್ ಪಾಸುಗಳ ದರ ಎಷ್ಟೆಷ್ಟು ಏರಿಕೆಯಾಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಇದ್ನನೂ ಓದಿ- ಇಸ್ರೋಗೆ ಹೊಸ ಸಾರಥಿ: ಡಾ ವಿ ನಾರಾಯಣನ್ ಬಗ್ಗೆ ತಿಳಿಯಲೇಬೇಕಾದ ವಿಷಯಗಳಿವು
ಯಾವ್ಯಾವ ರೀತಿಯ ಬಸ್ ಪಾಸುಗಳ ದರ ಎಷ್ಟೆಷ್ಟು ಏರಿಕೆಯಾಗಿದೆ?
>> ಸಾಮಾನ್ಯ ದಿನದ ಪಾಸು 70 ರೂಪಾಯಿಯಿಂದ 80 ರೂಪಾಯಿಗೆ ಏರಿಕೆ
>> ವಾರದ ಪಾಸು 300 ರೂಪಾಯಿಯಿಂದ 350 ರೂಪಾಯಿಗೆ ಏರಿಕೆ
>> ಮಾಸಿಕ ಪಾಸು 1,050 ರೂಪಾಯಿಯಿಂದ 1,200 ರೂಪಾಯಿಗೆ ಏರಿಕೆ.
>> ನೈಸ್ ರಸ್ತೆ ಟೋಲ್ ಶುಲ್ಕ ಸೇರಿ 2,200 ರೂಪಾಯಿಯಿಂದ 2350 ರೂಪಾಯಿಗೆ ಏರಿಕೆ
>> ವಜ್ರ ಬಸ್ಸಿನ ದಿನದ ಪಾಸು 120 ರೂಪಾಯಿಯಿಂದ 140 ರೂಪಾಯಿಗೆ ಏರಿಕೆ
>> ವಜ್ರ ಬಸ್ಸಿನ ಮಾಸಿಕ ಪಾಸು 1,800 ರೂಪಾಯಿಯಿಂದ 2,000 ರೂಪಾಯಿಗೆ ಏರಿಕೆ
>> ವಾಯುವಜ್ರ ಬಸ್ಸಿನ ಪಾಸು 3,755 ರೂಪಾಯಿಯಿಂದ 4,000 ರೂಪಾಯಿಗೆ ಏರಿಕೆ
>> ವಿದ್ಯಾರ್ಥಿ ವಜ್ರ ಮಾಸಿಕ ಪಾಸು 1,200 ರೂಪಾಯಿಯಿಂದ 1,400 ರೂಪಾಯಿಗೆ ಏರಿಕೆ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.