Kisan Samman Yojana 14th Installment: ದೇಶಾದ್ಯಂತ ಇರುವ ಕೋಟ್ಯಾಂತರ ರೈತರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಪ್ರಸ್ತುತ ದೇಶದ ರೈತರು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ (Kisan Samman Yojana 14th Installment) 14ನೇ ಕಂತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ನೀವೂ ಕೂಡ ಈ ಕಂತಿಗಾಗಿಕಾಯುತ್ತಿದ್ದರೆ, ನಿಮಗಾಗಿ ಸರ್ಕಾರ ಒಂದು ಮಹತ್ವದ ಅಪ್ಡೇಟ್ ಪ್ರಕಟಿಸಿದೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ಟ್ವೀಟ್‌ನಲ್ಲಿ ಈ ಅಪ್ಡೇಟ್ ಕುರಿತು ಮಾಹಿತಿಯನ್ನು ನೀಡಲಾಗಿದೆ. ನೀವು ಕೂಡ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮಗೂ ಈ ಸಂಗತಿ ತಿಳಿಯುವುದು ತುಂಬಾ ಮುಖ್ಯ. ಸರ್ಕಾರ ಹೊರಡಿಸಿದ ಈ ಅಪ್ಡೇಟ್ ಕೋಟ್ಯಾಂತರ ಜನರ ಮೇಲೆ ಪರಿಣಾಮ ಬೀರಲಿದೆ.


COMMERCIAL BREAK
SCROLL TO CONTINUE READING

ಸರ್ಕಾರ ಮಾಡಿದ ಟ್ವೀಟ್ ಏನು?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು, ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು ಮತ್ತು ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್ http://pmkisan.gov ನಲ್ಲಿ ತಮ್ಮ ಇ-ಕೆವೈಸಿ ಸಲ್ಲಿಸಬೇಕು ಎಂದು ಪಿಎಂ ಕಿಸಾನ್ ಯೋಜನೆ ಅಧಿಕೃತ ಟ್ವೀಟ್‌ನಲ್ಲಿ ಬರೆದುಕೊಂಡಿದೆ. 


ಬ್ಯಾಂಕ್ ಖಾತೆಯಲ್ಲಿ ನಿಮ್ಮ DBT ಆಯ್ಕೆಯನ್ನು ಸಕ್ರಿಯಗೊಳಿಸಿ
>> ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಿ
>> PM ಕಿಸಾನ್ ಪೋರ್ಟಲ್‌ನಲ್ಲಿ 'ನಿಮ್ಮ ಸ್ಥಿತಿ ಮಾಡ್ಯೂಲ್ ಅನ್ನು ತಿಳಿದುಕೊಳ್ಳಿ' ಅಡಿಯಲ್ಲಿ ನಿಮ್ಮ ಆಧಾರ್ ಸೀಡಿಂಗ್ ಸ್ಥಿತಿಯನ್ನು ಪರಿಶೀಲಿಸಿ.


ಇದನ್ನೂ ಓದಿ-Bajaj Triumph Scrambler 400X-Triumph ಸ್ಪೀಡ್ ಮಾರುಕಟ್ಟೆಗೆ ಬಿಡುಗಡೆ, ಬೆಲೆ, ವೈಶಿಷ್ಟ್ಯ ಹಾಗೂ ಮೈಲೆಜ್ ವಿವರ ಇಲ್ಲಿದೆ


ಇ-ಕೆವೈಸಿ ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು
ಪಿಎಂ ಕಿಸಾನ್ (News In Kannada) ವೆಬ್‌ಸೈಟ್ ಪ್ರಕಾರ, ಪಿಎಂ ಕಿಸಾನ್ ನೋಂದಾಯಿತ ರೈತರಿಗೆ ಇಕೆವೈಸಿ ಕಡ್ಡಾಯವಾಗಿದೆ. KYC ಅನ್ನು ಆನ್‌ಲೈನ್‌ನಲ್ಲಿ ಮಾಡಬೇಕಾದರೆ, PM ಕಿಸಾನ್ ಪೋರ್ಟಲ್‌ನಲ್ಲಿ OTP ಆಧಾರಿತ eKYC ಲಭ್ಯವಿದೆ. ರೈತರು ಬಯೋಮೆಟ್ರಿಕ್ ಆಧಾರಿತ KYC ಅನ್ನು ಸಹ ಪಡೆಯಬಹುದು. ಇದಕ್ಕಾಗಿ, ಬಯೋಮೆಟ್ರಿಕ್ ಆಧಾರಿತ KYC ಗಾಗಿ CSC ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ KYC ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಪಿಎಂ ಕಿಸಾನ್‌ನ 14 ನೇ ಕಂತಿನ ಪ್ರಯೋಜನವನ್ನು ಪಡೆಯಲು ಬಯಸಿದರೆ, ಶೀಘ್ರದಲ್ಲೇ KYC ಮಾಡಿಸಿ..


ಇದನ್ನೂ ಓದಿ-Harley Davidson ಬೈಕ್ ಖರೀದಿಸುವ ನಿಮ್ಮ ಕನಸು ಶೀಘ್ರದಲ್ಲೇ ನನಸಾಗಲಿದೆ, ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಈ ಅಗ್ಗದ ಬೈಕ್!


ನಿಮ್ಮ ಕಂತು ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ (Business News In Kannada)
>> ಕಂತಿನ ಸ್ಥಿತಿಯ ಕುರಿತು ಪರಿಶೀಲನೆ ನಡೆಸಲು, ನೀವು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.
>> ಈಗ ರೈತರ ಕಾರ್ನರ್ ಕ್ಲಿಕ್ ಮಾಡಿ.
>> ಈಗ Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳಲಿದೆ.
>> ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
>> ಇದರ ನಂತರ ನೀವು ನಿಮ್ಮ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.