ಬೆಂಗಳೂರು : ಕೆಎಂಎಫ್‌ನಿಂದ ಮತ್ತೊಂದು ಪ್ರಾಡಕ್ಟ್ ಲಾಂಚ್ ಆಗಿದೆ. ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಪ್ರೋಟಿನ್‌ಯುಕ್ತ ದೋಸೆ ಹಿಟ್ಟು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ನಿನ್ನೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ದೋಸೆ ಹಾಗೂ ಇಡ್ಲಿ ಹಿಟ್ಟು ಬಿಡುಗಡೆ ಕಾರ್ಯಕ್ರಮ ನಡೆಯಿತು. 


COMMERCIAL BREAK
SCROLL TO CONTINUE READING

ಇಂದಿನಿಂದಲೇ ಮಾರುಕಟ್ಟೆಯಲ್ಲಿ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಸಿಗುತ್ತಿದೆ. ಈ ಬಗ್ಗೆ KMF ಅಧಿಕೃತ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಇಂದಿನಿಂದಲೇ ಬೆಂಗಳೂರಿನಲ್ಲಿ ಹಿಡ್ಲಿ ದೋಸೆ ಹಿಟ್ಟು ಲಭ್ಯವಿರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ. ಮೊದಲ ಹಂತದಲ್ಲಿ ಈ ಉತ್ಪನ್ನ ಬೆಂಗಳೂರಿನಲ್ಲಿ ಲಭ್ಯವಾಗಲಿದೆ. 


ಇದನ್ನೂ ಓದಿ : ಗ್ರಾಹಕರಿಗೆ ಬಿಗ್ ರಿಲೀಫ್ !ಚಿನ್ನದ ಬಳಿಕ ಬೆಳ್ಳಿ ಮಾರಾಟ, ಖರೀದಿ ವಿಚಾರದಲ್ಲಿ ಸರ್ಕಾರದ ಮಹತ್ವದ ಹೆಜ್ಜೆ !


ಇತರೆ ಕಂಪನಿಗಳಿಂದ ಒಂದು ದಿನಕ್ಕೆ 30 ಟನ್ ದೋಸೆ ಹಿಟ್ಟು ಮಾರಾಟ ಆಗುತ್ತಿದೆ. ಈ ಪೈಕಿ 1-20% ರಷ್ಟು ನಂದಿನಿಯಿಂದ ಟಾರ್ಗೆಟ್ ಇಟ್ಟುಕೊಂಡಿದೆ. 450gm ಪಾಕೆಟ್ ಗೆ 40ರೂ ಮತ್ತು 900ಗ್ರಾಂ ಗೆ 80ರೂ.ಯಂತೆ ಈ ಹಿಟ್ಟು ಮಾರಾಟವಾಗಲಿದೆ. ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟಿನಲ್ಲಿ‌ ಶೇ 5ರಷ್ಟು ಪ್ರೋಟಿನ್ ಅಂಶ ಇರಲಿದೆ. 


ಬೆಂಗಳೂರು ಆದ ಬಳಿಕ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಉತ್ಪನ್ನವನ್ನು ಬಿಡುಗಡೆ ಮಾಡಲಾಗುವುದು. ಸಾಕಷ್ಟು ಪಾರ್ಲರ್ ಗಳು, ಅಂಗಡಿಗಳಲ್ಲಿ ಹಿಟ್ಟು ಮಾರಾಟ ಮಾಡುವ ಯೋಜನೆಯನ್ನು ಕೆಎಂಎಫ್ ಹಾಕಿಕೊಂಡಿದೆ. ಈ ಮೂಲಕ ಇಲ್ಲಿರುವ ಎರಡು ಕಂಪನಿಗಳಿಗೆ ನೇರ ಸ್ಪರ್ಧೆ ನೀಡಲಿದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಇನ್ನು ನಂದಿನಿ ಎನ್ನುವುದು ಜನರ ನಂಬಿಕೆಯ ಬ್ರಾಂಡ್ ಆಗಿರುವುದರಿಂದ  ಗುಣಮಟ್ಟದಲ್ಲಿ ಯಾವುದೇ ರೀತಿಯ ಕಾಂಪ್ರಮೈಸ್ ಇರುವುದಿಲ್ಲ ಎಂದು ಕಮೊಅನಿ ಹೇಳಿದೆ. ಈ ಹಿಂದೆ ಖಾಸಗಿ ಕಂಪನಿ‌ ಲಾಭಿಗಳ ವಿಚಾರದ ಆರೋಪದ ಬಗ್ಗೆ ಪ್ರತಿಕ್ರಿಯೆಗೆ ಕೆಎಂಎಫ್ ಅಧ್ಯಕ್ಷ ಭೀಮ‌ನಾಯ್ಕ್  ನಿರಾಕರಿಸಿದ್ದಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.