ನವದೆಹಲಿ : Petrol Diesel Price : ಬೆಲೆ  ಏರಿಕೆಯ ನಡುವೆ ಜನರಿಗೆ ಸಮಾಧಾನದ ಸುದ್ದಿ ಬಂದಿದೆ. ಇಂದು ಸತತ 27ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.  ಸರ್ಕಾರಿ ತೈಲ ಕಂಪನಿಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 6 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 80 ಪೈಸೆ ಹೆಚ್ಚಿಸಲಾಗಿತ್ತು. 


COMMERCIAL BREAK
SCROLL TO CONTINUE READING

ಮಾರ್ಚ್ 22 ರಿಂದ  14 ಬಾರಿ ದರ ಹೆಚ್ಚಳ  :
ವಾಸ್ತವವಾಗಿ, ಮಾರ್ಚ್ 22 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ  ಹೆಚ್ಚಳ ಪ್ರಾರಂಭವಾಯಿತು. ನಂತರ 14 ಬಾರಿ ದರ ಹೆಚ್ಚಳ ಮಾಡಲಾಗಿತ್ತು. ಕಳೆದ 14 ಏರಿಕೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 10 ರೂ.ಯಷ್ಟು ಹೆಚ್ಚಳವಾಗಿತ್ತು.  ಈ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹಳ ದಿನಗಳಿಂದ ಏರಿಕೆಯಾಗಿರಲಿಲ್ಲ. ಕಳೆದ ವರ್ಷ ನವೆಂಬರ್ 4 ರಿಂದ ಮಾರ್ಚ್ 21 ರವರೆಗೆ ಎರಡೂ ಇಂಧನಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರಲಿಲ್ಲ.


ಇದನ್ನೂ ಓದಿ : Skoda Kushaq Active Peace: 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ ಐಷಾರಾಮಿ SUV


ದೇಶದ ಪ್ರಮುಖ ನಗರಗಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ :
ದೆಹಲಿ  - ಪೆಟ್ರೋಲ್ 105.41  ರೂ ಮತ್ತು ಡೀಸೆಲ್ ರೂ 96.67 ಪ್ರತಿ ಲೀಟರ್
ಮುಂಬೈ  - ಪೆಟ್ರೋಲ್ 120.51 ರೂ  ಮತ್ತು ಡೀಸೆಲ್ ರೂ 104.77 ರೂ
ಚೆನೈ - ಪೆಟ್ರೋಲ್ - 110.85  ರೂ. ,  ಡೀಸೆಲ್ ಲೀಟರ್‌ಗೆ 97.03 ರೂ
ಕೊಲ್ಕತ್ತಾ  - ಪೆಟ್ರೋಲ್ - 115.12  ರೂ.  , ಡೀಸೆಲ್ ಲೀಟರ್‌ಗೆ  99.83 ರೂ. 
ಲಕ್ನೋದಲ್ಲಿ ಪೆಟ್ರೋಲ್  105.25 ರೂ ಮತ್ತು ಡೀಸೆಲ್ ಲೀಟರ್‌ಗೆ  96.83 ರೂ
ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ 91.45  ರೂ  ಮತ್ತು ಡೀಸೆಲ್ ಲೀಟರ್‌ಗೆ ರೂ 85.83
ಪಾಟ್ನಾದಲ್ಲಿ ಪೆಟ್ರೋಲ್ 116.23  ರೂ . ಮತ್ತು ಡೀಸೆಲ್ ಲೀಟರ್‌ಗೆ 101 ರೂ.


SMS ಮೂಲಕ ಕೂಡಾ ದರ  ಪರಿಶೀಲಿಸಬಹುದು :
ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಹ ತಿಳಿಯಬಹುದು ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೆ ವೇಳೆ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.


ಇದನ್ನೂ ಓದಿ :  Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ..? 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.