ಮುಖೇಶ್ ಮತ್ತು ಅನಿಲ್ ಅಂಬಾನಿ ಇಬ್ಬರೂ ಕೋಟಿಗಳ ಒಡೆಯರೇ! ಇಬ್ಬರ ಪೈಕಿ ತಾಯಿಯನ್ನು ತನ್ನೊಂದಿಗೆ ಇರಿಸಿಕೊಂಡ ನಿಜವಾದ ಸಿರಿವಂತ ಯಾರು ?
ದೇಶದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ವಿಶ್ವದ ಅಗ್ರ ಉದ್ಯಮಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಮಟ್ಟದ ನಷ್ಟವನ್ನು ಎದುರಿಸಿದವರು. ಇದೀಗ ಒಂದೊಂದೇ ಸಾಲವನ್ನು ತೀರಿಸುತ್ತಾ ಮತ್ತೆ ವ್ಯಾಪಾರ ಜಗತ್ತಿನಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ.
ದೇಶದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ವಿಶ್ವದ ಅಗ್ರ ಉದ್ಯಮಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಮಟ್ಟದ ನಷ್ಟವನ್ನು ಎದುರಿಸಿದವರು. ಇದೀಗ ಒಂದೊಂದೇ ಸಾಲವನ್ನು ತೀರಿಸುತ್ತಾ ಮತ್ತೆ ವ್ಯಾಪಾರ ಜಗತ್ತಿನಲ್ಲಿ ಮತ್ತೆ ಛಾಪು ಮೂಡಿಸಲು ಮುಂದಾಗಿದ್ದಾರೆ. ಒಬ್ಬ ಸಹೋದರ ಯಶಸ್ಸಿನ ಉತ್ತುಂಗದಲ್ಲಿ ಇದ್ದರೆ, ಮತ್ತೊಬ್ಬರು ಸಾಲದ ಸುಳಿಯಿಂದ ಹೊರ ಬರುವ ಪ್ರಯತ್ನದಲ್ಲಿದ್ದಾರೆ.
ಕೋಕಿಲಾಬೆನ್ ವಾಸ ಯಾರ ಜೊತೆ :
ತನ್ನ ಇಬ್ಬರೂ ಪುತ್ರರು ಪ್ರತ್ಯೇಕವಾಗಿ ವಾಸಿಸುತ್ತಿರುವಾಗ ಕೋಕಿಲಾಬೆನ್ ಯಾರ ಜೊತೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯಜನರಿಗೆ ಇದ್ದೇ ಇರುತ್ತದೆ.
ಇದನ್ನೂ ಓದಿ : Post Office Saving Schemes: ಕೇವಲ 10 ರೂ.ನಿಂದ ಉಳಿತಾಯ ಆರಂಭಿಸಿ ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿ ಗಳಿಸಲು ಸುವರ್ಣಾವಕಾಶ!
ಅನಿಲ್ ಅಂಬಾನಿ ಪತ್ನಿ ಟೀನಾ ಅಂಬಾನಿ ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಕೋಕಿಲಾಬೆನ್ ಅವರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಇರುತ್ತಾರೆ.ಮತ್ತೊಂದೆಡೆ ನೀತಾ ಅಂಬಾನಿ ಪ್ರತಿ ಸಮಾರಂಭದಲ್ಲಿ ತನ್ನ ಅತ್ತೆಯ ಜೊತೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಕೋಕಿಲಾ ಬೆನ್ ಇಬ್ಬರೂ ಸೊಸೆಯಂದಿರ ಜಿತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನಲಾಗಿದೆ.
ಇಬ್ಬರೂ ಪುತ್ರರ ಮೇಲೆ ಅತಿಯಾದ ಪ್ರೀತಿ ಹೊಂದಿದ್ದರೂ ಕೋಕಿಲಾಬೆನ್ ವಾಸವಿರುವುದು ಮಾತ್ರ ತನ್ನ ಹಿರಿಯ ಮಗ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದ ಜೊತೆಗೆ. ಇಂದಿಗೂ ಅಂಬಾನಿ ಪರಿವಾರದಲ್ಲಿ 90ರ ಹರೆಯದ ಕೋಕಿಲಾಬೆನ್ ಮಾತಿನ ಪ್ರಕಾರವೇ ಎಲ್ಲವೂ ನಡೆಯುವುದು ಎಂದು ಹೇಳಲಾಗುತ್ತದೆ.
ಕೋಕಿಲಾಬೆನ್ ತನ್ನ ಇಬ್ಬರು ಸೊಸೆಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಮನೆಯ ಮಕ್ಕಳಿಗೂ ಅಜ್ಜಿ ಎಂದರೆ ಬಲು ಪ್ರೀತಿ. ಅಂಬಾನಿ ಕುಟುಂಬದ ಪ್ರತಿ ಕಾರ್ಯಕ್ರಮದಲ್ಲೂ ಕೋಕಿಲಾಬೆನ್ ಮುಖೇಶ್ ಅಂಬಾನಿ ಕುಟುಂಬದೊಂದಿಗೆಯೇ ಕಾಣಿಸಿಕೊಳ್ಳುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಅಂಬಾನಿ ಕುಟುಂಬದ ನಿಜವಾದ ಬಾಸ್ :
ಕೋಕಿಲಾಬೆನ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅತಿ ಹೆಚ್ಚು ಪಾಲನ್ನು ಹೊಂದಿದ್ದಾರೆ. ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ 1,57,41,322 ಷೇರುಗಳನ್ನು ಅಂದರೆ ಕಂಪನಿಯ ಶೇಕಡಾ 0.24 ರಷ್ಟು ಪಾಲನ್ನು ಹೊಂದಿದ್ದಾರೆ. ಕೋಕಿಲಾಬೆನ್ ಅಂಬಾನಿಯ ಒಟ್ಟು ಸಂಪತ್ತು ಸುಮಾರು 18,000 ಕೋಟಿ ರೂ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.