Home Loan: ನೀವು ಕೂಡ ಮನೆ ಖರೀದಿಸಲು ಯೋಚಿಸುತ್ತಿದ್ದರೆ ತಡ ಮಾಡದಿರಿ, ಕೊನೆಗೊಳ್ಳಲಿದೆ ಈ ಕೊಡುಗೆ
ಗೃಹ ಸಾಲದ ಮೇಲಿನ ಬಡ್ಡಿದರ ಕುಸಿಯುವ ಪ್ರವೃತ್ತಿ ಮುಂದುವರೆದಿದೆ. ಎಸ್‌ಬಿಐ ನಂತರ ಖಾಸಗಿ ಬ್ಯಾಂಕ್ ಕೊಟಕ್ ಮಹೀಂದ್ರಾ ಗೃಹ ಸಾಲ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಬಡ್ಡಿದರಗಳನ್ನು ಶೇಕಡಾ 0.10 ರಷ್ಟು ಕಡಿಮೆ ಮಾಡಿದೆ.
ನವದೆಹಲಿ : ಹಣದುಬ್ಬರದ ಈ ಯುಗದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಸಾಮಾನ್ಯ ಜನರಿಗೆ ಹೆಚ್ಚಿನ ಪರಿಹಾರ ನೀಡಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್ ವಿಶೇಷ ಕೊಡುಗೆಯನ್ನು ತಂದಿದ್ದು, ಇದರ ಅಡಿಯಲ್ಲಿ ಗೃಹ ಸಾಲದ (Home Loan) ಆರಂಭಿಕ ಬಡ್ಡಿದರವನ್ನು ಶೇಕಡಾ 6.65ಕ್ಕೆ ಇಳಿಸಲಾಗಿದೆ. ಆದ್ದರಿಂದ ನೀವು ಮನೆ ಖರೀದಿಸಲು ಯೋಜಿಸುತ್ತಿದ್ದರೆ, ವಿಳಂಬ ಮಾಡಬೇಡಿ. ಏಕೆಂದರೆ ವಿಶೇಷ ಕೊಡುಗೆ ಮುಗಿಯಲು ಕೆಲವೇ ದಿನಗಳು ಉಳಿದಿವೆ.
ಕೊಟಕ್ ಮಹೀಂದ್ರಾ ಬ್ಯಾಂಕಿನ ವಿಶೇಷ ಕೊಡುಗೆ :
ಕೊಟಕ್ ಮಹೀಂದ್ರಾ ಬ್ಯಾಂಕಿನ ವಿಶೇಷ ಕೊಡುಗೆಯಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳ ಮೇಲೆ ಗೃಹ ಸಾಲವನ್ನು ಎಸ್‌ಬಿಐಗಿಂತ ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತಿದೆ. ಗೃಹ ಸಾಲ (Home Loan) ಕ್ಷೇತ್ರದಲ್ಲಿ ಈಗ ಬೇರೆ ಬ್ಯಾಂಕುಗಳಿಗಿಂತ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಗ್ಗದ ಗೃಹ ಸಾಲವನ್ನು ನೀಡುತ್ತಿರುವುದಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್ ಹೇಳಿಕೊಂಡಿದೆ. ಈ ಕೊಡುಗೆಯು ಇದೇ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ.
ಇದನ್ನೂ ಓದಿ - Home Loan: SBI, HDFC ಬಳಿಕ ಗೃಹಸಾಲ ಬಡ್ಡಿದರದಲ್ಲಿ ಇಳಿಕೆ ಮಾಡಿದ ಖಾಸಗಿವಲಯದ ಅತಿದೊಡ್ಡ ಬ್ಯಾಂಕ್
ಉತ್ತಮ ಸಿಬಿಲ್ ಹೊಂದಿರುವ ಅರ್ಜಿದಾರರು ಮಾತ್ರ ಪ್ರಯೋಜನ ಪಡೆಯುತ್ತಾರೆ :
ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಉತ್ತಮವಾಗಿರುವ ಗ್ರಾಹಕರಿಗೆ ಶೇಕಡಾ 6.65 ದರದಲ್ಲಿ ಗೃಹ ಸಾಲ ನೀಡಲಾಗುವುದು ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಸ್ಪಷ್ಟಪಡಿಸಿದೆ. ಇದಲ್ಲದೆ, ಒಟ್ಟು ಮಾಸಿಕ ಗಳಿಕೆಗೆ ಅನುಗುಣವಾಗಿ ಬ್ಯಾಂಕ್ ಸಾಲವನ್ನು ಮೌಲ್ಯಮಾಪನ ಮಾಡುತ್ತದೆ.
ಇದನ್ನೂ ಓದಿ - SBI Home Loan: ಕನಸಿನ ಮನೆ ಖರೀದಿಸ ಬೇಕೇ? ಮಾರ್ಚ್ 2021ರವರೆಗೆ SBI ನೀಡುತ್ತಿದೆ ಈ ಅವಕಾಶ
ಎಸ್‌ಬಿಐ ಸಹ ಗೃಹ ಸಾಲಗಳ ಬಡ್ಡಿದರವನ್ನು ಕಡಿಮೆ ಮಾಡಿದೆ:
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ಸಹ ಕೂಡ ಬಡ್ಡಿದರವನ್ನು ಕಡಿಮೆ ಮಾಡಿದೆ. ಎಸ್‌ಬಿಐ ಆರಂಭಿಕ ಗೃಹ ಸಾಲ ಬಡ್ಡಿದರವನ್ನು 6.70 ರವರೆಗೆ ಇಟ್ಟುಕೊಂಡಿದ್ದು, ಇದರ ಅಡಿಯಲ್ಲಿ 75 ಲಕ್ಷದವರೆಗಿನ ಗೃಹ ಸಾಲ ಲಭ್ಯವಿರುತ್ತದೆ. ಎಸ್‌ಬಿಐ ಇತ್ತೀಚೆಗೆ ರಿಯಲ್ ಎಸ್ಟೇಟ್ ಗ್ರೂಪ್ ಶಾಪುರ್ಜಿ ಪಲಂಜಿ (Shapoorji Pallonji) ಆವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಶಪೂರ್ಜಿ ಪಲ್ಲೊಂಜಿ ಸಮೂಹದ ಉದ್ಯೋಗಿಗಳು ಸಹ ಈ ಕೊಡುಗೆಯ ಲಾಭವನ್ನು ಪಡೆಯುತ್ತಾರೆ. ಜನರು ಮನೆಯಲ್ಲಿ ಕುಳಿತು ಮಾಹಿತಿ ಪಡೆಯಲು ಮೊಬೈಲ್ ಸಂಖ್ಯೆ 72089-33140 ಗೆ ಸಂಪರ್ಕಿಸಬಹುದು ಎಂದು ಎಸ್‌ಬಿಐ ಹೇಳಿದೆ. ಗೃಹ ಸಾಲ ಕ್ಷೇತ್ರವನ್ನು ಎಸ್‌ಬಿಐ ಆಕ್ರಮಿಸಿಕೊಂಡಿದೆ. ಒಟ್ಟು 34 ಪ್ರತಿಶತ ಜನರು ಎಸ್‌ಬಿಐನಿಂದ ಗೃಹ ಸಾಲ ಪಡೆದಿದ್ದಾರೆ. 2020 ರ ಡಿಸೆಂಬರ್ ವರೆಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು 2 ಲಕ್ಷ ಜನರಿಗೆ ಎಸ್‌ಬಿಐ ಗೃಹ ಸಾಲ ನೀಡಿದೆ.
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.