ನವದೆಹಲಿ : Hero HF 100 Launched : ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್ ತನ್ನ ಜನಪ್ರಿಯ ಬೈಕು ಹೀರೋ ಎಚ್‌ಎಫ್ 100 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಶೋರೂಂ ಬೆಲೆ 49,400 ರೂ. ಇದು ಹೀರೋದ ಅಗ್ಗದ ಬೈಕು ಎನ್ನಲಾಗಿದೆ. ಈ ಬೈಕ್ ಕಪ್ಪು ಮತ್ತು ಕೆಂಪು ಬಣ್ಣಗಳ ಮಿಶ್ರಣದಲ್ಲಿ ಮಾತ್ರ ಲಭ್ಯವಿರಲಿದೆ. 


COMMERCIAL BREAK
SCROLL TO CONTINUE READING

Hero HF 100 Specification: 
Hero HF 100ರ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು 97.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು ಗರಿಷ್ಠ 8,000 RPM ನಲ್ಲಿ  7.91 bhp  ಮತ್ತು 5000 RPM ನಲ್ಲಿ 8.05 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನಲ್ಲಿ 4 ಸ್ಪೀಡ್ ಗೇರ್‌ಬಾಕ್ಸ್ ಗಳನ್ನು ನೀಡಲಾಗಿದೆ.  ಬೈಕ್‌ನಲ್ಲಿರುವ 130 ಮಿಲಿಮೀಟರ್ ಡ್ರಮ್ ಬ್ರೇಕ್, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹೈಡ್ರಾಲಿಕ್ ಶಾಕ್ ಅಬ್ ಸರ್ ವರ್ ಈ ಬೈಕ್‌ನ (Bike) ಅನುಭವವನ್ನು ಇನ್ನಷ್ಟು ಅದ್ಭುತಗೊಳಿಸುತ್ತವೆ. 


ಇದನ್ನೂ ಓದಿ : ನಿಮ್ಮ Aadhar Card ಕಳೆದುಕೊಂಡಿದ್ದೀರಾ? ಹಾಗಾದ್ರೆ ತಕ್ಷಣವೆ ಈ ರೀತಿ ಲಾಕ್ ಮಾಡಿಸಿ!


ಈ ಬೈಕ್ 110 ಕೆಜಿಯಷ್ಟಿದೆ. ಇದರ ನೋಟ HF Deluxe ಅನ್ನು ಹೋಲುತ್ತದೆ. ಈ ಬೈಕ್‌ನಲ್ಲಿ Hero ನ XSens ಮತ್ತು ಹೀರೋನ ಪೇಟೆಂಟ್ i3s ವ್ಯವಸ್ಥೆಯನ್ನು ನೀಡಲಾಗಿದೆ. ಈ ಕಾರಣಕ್ಕಾಗಿ, ಈ ಬೈಕು ಬಹಳ ಕಡಿಮೆ ಪೆಟ್ರೋಲ್ (Petrol) ಅನ್ನು ಬಳಸುತ್ತದೆ. ದೆಹಲಿಯ ಈ ಬೈಕ್‌ನ ಎಕ್ಸ್‌ಶೋರೂಂ ಬೆಲೆ 49,400 ರೂ. 


ಇದನ್ನೂ ಓದಿ : Sukanya Samriddhi: ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ದಿನಕ್ಕೆ 131 ರೂ. ಹೂಡಿಕೆ ಮಾಡಿ 20 ಲಕ್ಷ ರೂ. ಪಡೆಯಿರಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.