Crypto Currencyಗಳ ಹೆಚ್ಚಾಗುತ್ತಿರುವ ಪ್ರಭಾವದ ಕುರಿತು ಆತಂಕ ವ್ಯಕ್ತಪಡಿಸಿದ IMF ಹೇಳಿದ್ದೇನು?
Legal Tender To Crypto Currency - BitCoin ಗಳಂತಹ ಕ್ರಿಪ್ಟೋಕರೆನ್ಸಿ ಗಳಿಗೆ ಕಾನೂನು ಬದ್ಧಗೊಳಿಸುವುದರ ಕುರಿತು IMF ಎಚ್ಚರಿಕೆ ನೀಡಿದ್ದು, ಇದರಿಂದ ಮೈಕ್ರೋ ಎಕಾನಾಮಿ ಸ್ಟೆಬಿಲಿಟಿಗೆ ಪ್ರತ್ಯಕ್ಷ ರೂಪದಲ್ಲಿ ಹೊರೆಯಾಗಲಿದೆ ಎಂದು ಹೇಳಿದೆ.
ನವದೆಹಲಿ: Legal Tender To Crypto Currency - BitCoin ನಂತಹ ಕ್ರಿಪ್ಟೋಕರೆನ್ಸಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕಾನೂನುಬದ್ಧ ಕರೆನ್ಸಿಯ (Global Legal Tender) ಮಾನ್ಯತೆ ನೀಡುವುದರ ವಿರುದ್ಧ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ವಿಶ್ವದಾದ್ಯಂತ ದೇಶಗಳಿಗೆ ಎಚ್ಚರಿಕೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಐಎಂಎಫ್ ಕ್ರಿಪ್ಟೋಕರೆನ್ಸಿಯನ್ನು ಕಾನೂನುಬದ್ಧ ಕರೆನ್ಸಿಯಾಗಿ ವ್ಯಾಪಕ ಮಟ್ಟದಲ್ಲಿ ಒಪ್ಪಿಕೊಂಡರೆ, ಅದು ಆರ್ಥಿಕತೆಯ ಒಟ್ಟಾರೆ ಸ್ಥಿರತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಹೇಳಿದೆ.
ಪ್ರಸ್ತುತ ವಿಶ್ವಾದ್ಯಂತದ ಹಲವು ದೇಶಗಳಲ್ಲಿ ಕ್ರಿಪ್ಟೋಕರೆನ್ಸಿಗಳ (Crypto Currency) ಕಾನೂನುಬದ್ಧಗೊಳಿಸುವಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಲ್ ಸಾಲ್ವಡಾರ್, ಮಧ್ಯ ಅಮೆರಿಕದ ಅತ್ಯಂತ ಚಿಕ್ಕದಾದ ಆದರೆ ಜನನಿಬಿಡ ದೇಶವಾಗಿದ್ದು, ಜೂನ್ ತಿಂಗಳಲ್ಲಿ ಬಿಟ್ ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಎಂದು ಘೋಷಿಸಿದೆ. ತನ್ನ ಬ್ಲಾಗ್ ಒಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ IMF, ಕ್ರಿಪ್ಟೋಸೆಟ್ ಗಳನ್ನು ರಾಷ್ಟ್ರೀಯ ಕರೆನ್ಸಿಯಾಗಿಸುವುದು ಒಂದು ಶಾರ್ಟ್ಕಟ್ ಆಗಿದ್ದು ಅದು ಸ್ಥೂಲ ಆರ್ಥಿಕ ಸ್ಥಿರತೆ (Macro Financial Stability) ಮತ್ತು ಗ್ರಾಹಕರ ಹಿತಾಸಕ್ತಿಗೆ ಅಪಾಯವನ್ನುಂಟು ಮಾಡಬಹುದು ಎಂದು ಹೇಳಿದೆ.
ಕಳೆದ ತಿಂಗಳು, ಯುಕೆ ಮೂಲದ ಪರ್ಸನಲ್ ಫೈನಾನ್ಸ್ ಪ್ಲಾಟ್ಫಾರಂ ಆಗಿರುವ 'ಫೈಂಡರ್' ವಿಶ್ವದ ಸುಮಾರು 42 ಕ್ರಿಪ್ಟೋ ತಜ್ಞರನ್ನೊಳಗೊಂಡ ಒಂದು ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ಪ್ರಕಾರ, 2050 ರ ವೇಳೆಗೆ ಗ್ಲೋಬಲ್ ಫೈನಾನ್ಸ್ ಅನ್ನು ಬಿಟ್ ಕಾಯಿನ್ ದಾಟಲಿದೆ ಎನ್ನಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಇದರ ಸ್ವೀಕೃತಿ ಹೆಚ್ಚಾಗಿದೆ ಮತ್ತು ಜೆಪಿ ಮೋರ್ಗಾನ್, ಗೋಲ್ಡ್‌ಮ್ಯಾನ್ ಸ್ಯಾಕ್ಸ್, ಪೇಪಾಲ್, ವೀಸಾ, ಟೆಸ್ಲಾ, ಆಪಲ್, ಅಮೆಜಾನ್ ಮತ್ತು ಮೈಕ್ರೋಸ್ಟ್ರಾಟಜಿ ಕಂಪನಿಗಳು ಇದನ್ನು ಸ್ವೀಕರಿಸಲು ಆರಂಭಿಸಿವೆ. ಆದರೆ, ಈ ಹಿಂದೆ ಕ್ರಿಪ್ಟೋಕರೆನ್ಸಿಯನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದ ಟೆಸ್ಲಾ ಕಂಪನಿಯ ಎಲಾನ್ ಮಸ್ಕ್, ಹೂಡಿಕೆದಾರರು ತಮ್ಮ ಜೀವಿತಾವಧಿಯ ಎಲ್ಲಾ ಹೂಡಿಕೆಯನ್ನು ಬಿಟ್ ಕಾಯಿನ್ ಗಳಲ್ಲಿ ಹೂಡಿಕೆ ಮಾಡಬಾರದು ಎಂದು ಹೇಳಿ ಎಲ್ಲರ ಹುಬ್ಬೇರಿಸಿದ್ದರು.
ಇದನ್ನೂ ಓದಿ- ಭಾರತ ಲಸಿಕೆ ರಪ್ತಿನ ಮೇಲೆ ನಿಷೇಧ ಹೇರಿದ್ದು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಸಮಸ್ಯೆಯಾಗಿದೆ-IMF
BitCoin ಗಳಿಂದ ಅಪಾಯ ಏನು?
>> ವಾಷಿಂಗ್ಟನ್ ಮೂಲದ ಐಎಂಎಫ್ ವಿಶ್ವದಾದ್ಯಂತ ವಿತ್ತೀಯ ಸಹಕಾರ ಮತ್ತು ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ. ಐಎಂಎಫ್ ಕ್ರಿಪ್ಟೋಸೆಟ್‌ಗಳ ವಹಿವಾಟಿಗೆ ಇಂಟರ್ನೆಟ್ ಪ್ರವೇಶ ಮತ್ತು ತಂತ್ರಜ್ಞಾನ ಅತ್ಯಗತ್ಯ ಎಂದು ಹೇಳುತ್ತದೆ, ಇದು ಅನೇಕ ದೇಶಗಳಲ್ಲಿ ಸುಲಭವಾಗಿ ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನ್ಯಾಯಸಮ್ಮತತೆ ಮತ್ತು ಹಣಕಾಸಿನ ಸೇರ್ಪಡೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದಿದೆ.
>> IMF ಹೇಳುವ ಪ್ರಕಾರ, ಅಧಿಕೃತ ವಿತ್ತೀಯ ಘಟಕದ ಮೌಲ್ಯವು (Official Monetary Unit)ಸಾಕಷ್ಟು ಸ್ಥಿರವಾಗಿರಬೇಕು. ಏಕೆಂದರೆ ಇದು ಮಧ್ಯಮದಿಂದ ದೀರ್ಘಾವಧಿಯ ಹೂಡಿಕೆಗಳಿಗೆ ಬಳಕೆಯಾಗಬೇಕು ಎಂದು ಹೇಳುತ್ತದೆ.
>> ಬ್ಯಾಂಕುಗಳು ಹಾಗೂ ಇತರೆ ಆರ್ಥಿಕ ಸಂಸ್ಥೆಗಳಿಗೆ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿನ ಭಾರಿ ಏರಿಳಿತದಿಂದ ತೊಂದರೆಯಾಗಲಿದೆ ಎಂಬುದು IMF ಅಭಿಮತ.
>> ದೊಡ್ಡ ಪ್ರಮಾಣದಲ್ಲಿ ಕ್ರಿಪ್ಟೋ ಕರೆನ್ಸಿ ಗಳ ಬಳಕೆ ಆರಂಭಗೊಂಡ ಬಳಿಕ ಇದರಲ್ಲಿ ಒಂದು ವೇಳೆ ಭಾರಿ ಇಳಿಕೆಯಾದರೆ ಅಥವಾ ವಂಚನೆ ನಡೆದರೆ ಅಥವಾ ಸೈಬರ್ ದಾಳಿ ನಡೆದರೆ, ಸಾಕಷ್ಟು ಜನರ ಹೂಡಿಕೆ ಒಂದೇ ಹೊಡೆತಕ್ಕೆ ಖಾಲಿಯಾಗಲಿದೆ ಎಂಬುದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಅಭಿಪ್ರಾಯ.
ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಸ್ಥಿತಿ ಏನು?
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ BaiuCoin ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಿವಂ ಠಕರಾಲ್, ಕ್ರಿಪ್ಟೋಕರೆನ್ಸಿಗಳ ಬಗ್ಗೆ ಭಾರತದ ಅಪ್ರೋಚ್ ಸಾಕಷ್ಟು ವಿಭಿನ್ನವಾಗಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಗೆ ಕಾನೂನಾತ್ಮಕ ಒಪ್ಪಿಗೆ ಇಲ್ಲ. ಆದರೆ, ಇದನ್ನು ಒಂದು ಅಸೆಟ್ ಕ್ಲಾಸ್ ರೂಪದಲ್ಲಿ ನೋಡಲಾಗುತ್ತದೆ. ಕ್ರಿಪ್ಟೋ ಅಸೆತ್ಸ್ ಹಾಗೂ ನ್ಯಾಷನಲ್ ಕರೆನ್ಸಿಯ ಮಧ್ಯೆ ಭಾರತದಲ್ಲಿ ಸಹಬಾಳ್ವೆ ಇರುವುದರಿಂದ ಅಸೆಟ್ ವಿಭಾಗದಲ್ಲಿ ಕ್ರಿಪ್ಟೋ ಅತ್ಯುತ್ತಮ ಮಾದರಿಯಾಗಿದೆ ಎಂದು ಠಾಕರಾಲ್ ಹೇಳುತ್ತಾರೆ. ಕ್ರಿಪ್ಟೋ ಅಸೆಟ್ ಗಳ ಮೂಲಕ, ವಿಶ್ವಾದ್ಯಂತ ಒಂದು ಪಾವತಿ ವ್ಯವಸ್ಥೆಯನ್ನು ರಚಿಸುವ ಮೂಲಕ ಇದರಲ್ಲಿ ಬ್ಲಾಕ್‌ಚೈನ್ ನೆಟ್‌ವರ್ಕ್‌ನಲ್ಲಿ ಸಾರ್ವಜನಿಕ ಲೆಡ್ಜರ್‌ನ ವಹಿವಾಟುಗಳ ಸಂಪೂರ್ಣ ದಾಖಲೆ ಸೃಷ್ಟಿಸಬಹುದು ಎಂದು ಠಕರಾಲ್ ಹೇಳುತ್ತಾರೆ. ಬ್ಲಾಕ್ ಚೈನ್ ವಹಿವಾಟಿನ ಮೂಲಕ ವ್ಯವಹಾರದಲ್ಲಿ ಪಾರದರ್ಶಕತೆ ಬರಲಿದೆ ಹಾಗೂ ಆರ್ಥಿಕ ವಂಚನೆಯನ್ನು ತಡೆಗಟ್ಟಲು ಇದರಿಂದ ಸಹಾಯ ಸಿಗಲಿದೆ ಎಂದು ಠಕಾರಲ್ ಹೇಳಿದ್ದಾರೆ.
ಇದನ್ನೂ ಓದಿ-Economic Growth Rate - 2021ರಲ್ಲಿ ಭಾರತದ ಆರ್ಥಿಕ ವಿಕಾಸ ದರ ಶೇ.11.5 ರಷ್ಟು ಇರಲಿದೆ: IMF
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ