LIC: ವಿಮಾ ದೈತ್ಯ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಜಾಗತಿಕವಾಗಿ ಪ್ರಬಲ ವಿಮಾ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಬ್ರ್ಯಾಂಡ್ ಫೈನಾನ್ಸ್ ಇನ್ಶುರೆನ್ಸ್ 100, 2024 ರ ವರದಿಯ ಪ್ರಕಾರ,  ಎಲ್‌ಐ‌ಸಿಯ ಬ್ರ್ಯಾಂಡ್ ಮೌಲ್ಯವು  9.8 ಶತಕೋಟಿ ಯುಎಸ್$ನಷ್ಟಿಟ್ಟು. ಇದು ಬ್ರ್ಯಾಂಡ್ ಸ್ಟ್ರೆಂತ್ ಇಂಡೆಕ್ಸ್ ಸ್ಕೋರ್ 88.3 ಮತ್ತು ಸಂಬಂಧಿತ AAA ಬ್ರ್ಯಾಂಡ್ ಸಾಮರ್ಥ್ಯದ ರೇಟಿಂಗ್ ಅನ್ನು ಸಹ ಹೊಂದಿದೆ.


COMMERCIAL BREAK
SCROLL TO CONTINUE READING

ಬ್ರ್ಯಾಂಡ್ ಫೈನಾನ್ಸ್ ಇನ್ಶುರೆನ್ಸ್‌ನ ಹೇಳಿಕೆಯ ಪ್ರಕಾರ, ಕ್ಯಾಥೆ ಲೈಫ್ ಇನ್ಶುರೆನ್ಸ್  ಎಲ್‌ಐಸಿ ನಂತರದ ಸ್ಥಾನವನ್ನು ಪಡೆದಿದ್ದು ಎರಡನೇ ಪ್ರಬಲ ಬ್ರ್ಯಾಂಡ್ ಎಂದೆನಿಸಿಕೊಂಡಿದೆ. ಕ್ಯಾಥೆ ಲೈಫ್ ಇನ್ಶುರೆನ್ಸ್‌ನ ಬ್ರ್ಯಾಂಡ್ ಮೌಲ್ಯವು ಒಂಬತ್ತು ಪ್ರತಿಶತದಷ್ಟು ಹೆಚ್ಚಿ $4.9 ಬಿಲಿಯನ್‌ಗೆ ತಲುಪಿದೆ. ಮುಂದಿನದು NRMA ಇನ್ಶುರೆನ್ಸ್, ಇದರ ಬ್ರ್ಯಾಂಡ್ ಮೌಲ್ಯವು 82 ಶೇಕಡಾದಿಂದ $1.3 ಶತಕೋಟಿಗೆ ಏರಿದೆ.


ಲಭ್ಯವಿರುವ ಮಾಹಿತಿಗಳ ಪ್ರಕಾರ, ಚೀನಾದ ವಿಮಾ ಬ್ರ್ಯಾಂಡ್‌ಗಳು ಜಾಗತಿಕ ಶ್ರೇಯಾಂಕದಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿವೆ. ಪಿಂಗ್ ಆನ್ ಬ್ರ್ಯಾಂಡ್ ನಾಲ್ಕು ಪ್ರತಿಶತದಷ್ಟು ಮೌಲ್ಯವನ್ನು $33.6 ಶತಕೋಟಿಗೆ ಹೆಚ್ಚಿಸುವುದರೊಂದಿಗೆ ತನ್ನ ಸ್ಥಾನವ ನು ಉಳಿಸಿಕೊಂಡಿದೆ. ಇದರ ನಂತರ, ಚೀನಾ ಜೀವ ವಿಮೆ ಮತ್ತು CPIC ಕ್ರಮವಾಗಿ ಮೂರು ಮತ್ತು ಐದನೇ ಸ್ಥಾನವನ್ನು ಕಾಯ್ದುಕೊಂಡಿವೆ. 


ಇದನ್ನೂ ಓದಿ- ಕಡಿಮೆ ಭೂಮಿ ಹೊಂದಿರುವರಿಗೆ ಗುಡ್‌ ನ್ಯೂಸ್:‌ ನೇರವಾಗಿ ಖಾತೆಗೆ ಬರುತ್ತೆ 10 ಸಾವಿರ ರೂ.


ಹಲವು ಆಯಾಮಗಳಲ್ಲಿ ಮುಂದಿರುವ ಎಲ್‌ಐ‌ಸಿ: 
ಎಲ್‌ಐ‌ಸಿ ಇಂಡಿಯಾ ಆರ್ಥಿಕ ವರ್ಷ 2022-23 ರಲ್ಲಿ 39,090 ಕೋಟಿ ರೂಪಾಯಿಗಳ ಮೊದಲ ವರ್ಷದ ಪ್ರೀಮಿಯಂ ಸಂಗ್ರಹವನ್ನು ಸಾಧಿಸಿದೆ. ಆದರೆ  ಎಸ್‌ಬಿ‌ಐ ಲೈಫ್ ಇನ್ಶುರೆನ್ಸ್ ಮತ್ತು ಎಚ್‌ಡಿ‌ಎಫ್‌ಸಿ ಲೈಫ್ ಇನ್ಶುರೆನ್ಸ್  ವಿತ್ತೀಯ ವರ್ಷ 2022 -23ರಲ್ಲಿ ಕ್ರಮವಾಗಿ 15,197 ಕೋಟಿ ಮತ್ತು 10,970 ಕೋಟಿ ರೂಪಾಯಿಗಳ ಹೊಸ ಪ್ರೀಮಿಯಂ ಸಂಗ್ರಹಗಳನ್ನು ಸಾಧಿಸುವ ಮೂಲಕ ಖಾಸಗಿ ವಲಯದಲ್ಲಿ ಮುಂಚೂಣಿ ಸ್ಥಾನದಲ್ಲಿವೆ.  


ಆಗಸ್ಟ್ 2022 ರಿಂದ ಜಾರಿಗೆ ಬರುವಂತೆ ಎಲ್ಐಸಿ ಉದ್ಯೋಗಿಗಳಿಗೆ 17 %ರಷ್ಟು ವೇತನ ಪರಿಷ್ಕರಣೆಗೆ ಸರ್ಕಾರ ಅನುಮೋದನೆ ನೀಡಿದ್ದು, 1,10,000 ಕ್ಕೂ ಹೆಚ್ಚು ಉದ್ಯೋಗಿಗಳು ಇದರಿಂದ ಪ್ರಯೋಜನವನ್ನು ಪಡೆಯಲಿದ್ದಾರೆ. 


ಇದನ್ನೂ ಓದಿ- PM Kisan: ಪಿಎಂ ಕಿಸಾನ್ ಯೋಜನೆಯ ಪ್ರಯೋಜನೆಯಲ್ಲಿ ನೋಂದಾಯಿಸದ ರೈತರಿಗೆ ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ


ಎಲ್‌ಐ‌ಸಿ ಷೇರುಗಳು ಕೂಡ 1,175 ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಇದು ಭಾರತದ ಅತ್ಯಂತ ಮೌಲ್ಯಯುತವಾದ ಸಾರ್ವಜನಿಕ ವಲಯದ ಉದ್ಯಮವಾಗಿ (PSU) ಮತ್ತು ಮಾರುಕಟ್ಟೆ ಮೌಲ್ಯಮಾಪನದಲ್ಲಿ ಎಸ್‌ಬಿ‌ಐ ಅನ್ನು ಹಿಂದಿಕ್ಕುವ ಮೂಲಕ ಐದನೇ ಅತ್ಯಂತ ಮೌಲ್ಯಯುತವಾದ ಭಾರತೀಯ ಲಿಸ್ಟೆಡ್ ಕಂಪನಿಯಾಗಿ ತನ್ನ ಸ್ಥಾನವನ್ನು ಮರಳಿ ಪಡೆಯುವಲ್ಲಿಯೂ ಯಶಸ್ವಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.