LIC Amritbal Policy: ಮಕ್ಕಳ ಭವಿಷ್ಯ ಮತ್ತು ಉನ್ನತ ಶಿಕ್ಷಣವನ್ನು ಭದ್ರಪಡಿಸುವ ಉದ್ದೇಶದಿಂದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಅಮೃತಬಲ್ ಪಾಲಿಸಿಯನ್ನು ಆರಂಭಿಸಿದೆ.  ಪಾಲಿಸಿಯು ವೈಯಕ್ತಿಕ, ಉಳಿತಾಯ, ಜೀವ ವಿಮಾ ಪಾಲಿಸಿಯಾಗಿದ್ದು, ವಿಶೇಷವಾಗಿ ಮಕ್ಕಳ ಉನ್ನತ ಶಿಕ್ಷಣ ಮತ್ತು ಇತರ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹೊಸದಾಗಿ ಜಾರಿಗೊಳಿಸಲಾಗಿದೆ. 


ಎಲ್ಐಸಿ ಅಮೃತಬಲ್ ಯೋಜನೆ, 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೂಕ್ತವಾದ ಜೀವ ವಿಮೆ ಮತ್ತು ಉಳಿತಾಯ ಪಾಲಿಸಿಯಾಗಿದೆ. ಈ ಉಳಿತಾಯ ಮತ್ತು ಜೀವ ವಿಮಾ ಯೋಜನೆಯ ಮೂಲಕ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಕಷ್ಟು ಹಣವನ್ನು ಠೇವಣಿ ಮಾಡಬಹುದು. ಇದಲ್ಲದೆ, ಇದು ಮಕ್ಕಳ ಇತರ ಅಗತ್ಯಗಳನ್ನು ಪೂರೈಸುತ್ತದೆ. ಯೋಜನೆಯಲ್ಲಿ ಗಮನಾರ್ಹವಾಗಿ, ಪ್ರತಿ ಸಾವಿರಕ್ಕೆ  80 ರೂ. ಖಾತರಿ ಮೊತ್ತವನ್ನು ವಾರ್ಷಿಕವಾಗಿ ಮೂಲ ವಿಮಾ ಮೊತ್ತಕ್ಕೆ ಸೇರಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಬ್ಯಾಂಕಿಂಗ್ ನಿಯಮಗಳ ಬಗ್ಗೆ ನಿಮಗೂ ತಿಳಿದಿರಲಿ!


ಅರ್ಹತಾ ಮಾನದಂಡ: 
ಎಲ್‌ಐ‌ಸಿ ಅಮೃತಬಲ್ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ಒಂದು ತಿಂಗಳ ವಯಸ್ಸಾಗಿರಬೇಕು ಮತ್ತು 13 ವರ್ಷಕ್ಕಿಂತ ಹೆಚ್ಚಿರಬಾರದು ಎಂಬುದು ಪ್ರಮುಖ ಮಾನದಂಡವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಪೋಷಕರು ತಮ್ಮ ಮಗುವಿನ ಭವಿಷ್ಯವನ್ನು ಚಿಕ್ಕ ವಯಸ್ಸಿನಿಂದಲೇ ಭದ್ರಪಡಿಸಬಹುದಾಗಿದೆ. 


ಪ್ರೀಮಿಯಂ ಆಯ್ಕೆ: 
ಎಲ್‌ಐ‌ಸಿ ಅಮೃತಬಲ್ ಯೋಜನೆಯಲ್ಲಿ ಏಕ ಪ್ರೀಮಿಯಂ ಮತ್ತು ಸೀಮಿತ ಪ್ರೀಮಿಯಂ ಪಾವತಿ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ಪ್ರೀಮಿಯಂ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಪಾಲಿಸಿ ಅವಧಿಯು ಐದು ವರ್ಷದಿಂದ 25 ವರ್ಷಗಳವರೆಗೆ ಇರುತ್ತದೆ. ಸಣ್ಣ ಪ್ರೀಮಿಯಂ ಪಾವತಿಗಾಗಿ, 5, 6 ಮತ್ತು 7 ವರ್ಷಗಳ ಆಯ್ಕೆಗಳು ಲಭ್ಯವಿದ್ದರೆ, ದೀರ್ಘ ಪ್ರೀಮಿಯಂ ಪಾವತಿಯು 25 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.  


ಇದನ್ನೂ ಓದಿ- Tax Saving Scheme : ಇಂದೇ ಬ್ಯಾಂಕ್‌ಗೆ ಹೋಗಿ ಈ ಕೆಲಸ ಮಾಡಿ ! ಒಂದು ರೂಪಾಯಿಯೂ ತೆರಿಗೆ ಕಡಿತವಾಗುವುದಿಲ್ಲ! 


ಎಲ್‌ಐ‌ಸಿ ಅಮೃತಬಲ್ ಯೋಜನೆಯಲ್ಲಿ ಕನಿಷ್ಠ ವಿಮಾ ಮೊತ್ತವನ್ನು 2 ಲಕ್ಷ ರೂ.ಗಳು ಎಂದು ನಿಗದಿಗೊಳಿಸಲಾಗಿದೆ. ಆದರೆ, ಗರಿಷ್ಠ ವಿಮಾ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಮುಕ್ತಾಯದ ದಿನಾಂಕದಂದು, ಪ್ರಸ್ತುತ ಪಾಲಿಸಿಗೆ ಖಾತರಿಪಡಿಸಿದ ಹೆಚ್ಚುವರಿ ಮೊತ್ತದ ಜೊತೆಗೆ ಮೆಚ್ಯೂರಿಟಿಯ ಮೇಲಿನ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ. ನೀವು ಬಯಸಿದರೆ, ನೀವು 5ನೇ, 10ನೇ ಅಥವಾ 15ನೇ ವರ್ಷದಲ್ಲಿ ಮನಿ ಬ್ಯಾಕ್ ಪ್ಲಾನ್‌ನಂತೆ ಮೆಚ್ಯೂರಿಟಿ ಸೆಟಲ್‌ಮೆಂಟ್ ತೆಗೆದುಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.