ನವದೆಹಲಿ : ಇಲ್ಲಿಯವರೆಗೆ  ಭಾರತೀಯ ಜೀವ ವಿಮಾ ನಿಗಮ  (LIC)  ಪಾಲಿಸಿಯ ಕುರಿತು ಯಾವುದೇ ಮಾಹಿತಿಗಾಗಿ ಬೇಕಿದ್ದರೂ,  ಏಜೆಂಟರನ್ನೇ ಭೇಟಿ ಮಾಡಬೇಕಿತ್ತು. ಆದರೆ, ಈಗ ಪಾಲಿಸಿಗೆ ಸಂಬಂಧಿಸಿದ ಮಾಹಿತಿಯ ಬಗ್ಗೆ ಏಜೆಂಟ್ ಗಾಗಿ (LIC Agent) ಕಾಯುವ ಅವಶ್ಯಕತೆಯಿಲ್ಲ. ಕೇವಲ ಒಂದು ಕರೆಯ ಮೂಲಕ ಪಾಲಿಸಿ ಬಗೆಗಿನ ಎಲ್ಲಾ ಮಾಹಿತಿಗಳು ಸಿಗಲಿವೆ.  


COMMERCIAL BREAK
SCROLL TO CONTINUE READING

ಒಂದೇ ಕರೆಯಲ್ಲಿ ಎಲ್‌ಐಸಿಗೆ ಸಂಬಂಧಿಸಿದ ಎಲ್ಲಾ ಅಪ್‌ಡೇಟ್‌ಗಳು : 
LIC ಈಗ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ನೀಡುತ್ತಿದೆ. ಇದರ ಅಡಿಯಲ್ಲಿ, ಪಾಲಿಸಿಗೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿ ಅಥವಾ ಅಪ್‌ಡೇಟ್‌ಗಳಿಗಾಗಿ (LIC Update) ಎಲ್‌ಐಸಿ ಏಜೆಂಟರನ್ನು ಭೇಟಿ ಮಾಡುವ ಅಗತ್ಯವಿಲ್ಲ. ಎಲ್‌ಐಸಿ ಪಾಲಿಸಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು, ಯಾವುದೇ ಹೊಸ ಯೋಜನೆ ಅಥವಾ ಹಳೆಯ ಸ್ಕೀಮ್‌ನಲ್ಲಿನ (Old scheme) ಯಾವುದೇ ಹೊಸ ಬದಲಾವಣೆಗಳ ಬಗ್ಗೆ ಒಂದು ಕರೆ ಮೂಲಕ ಮಾಹಿತಿ ಸಿಗಲಿದೆ. ಇದಕ್ಕಾಗಿ ಒಂದು ಸರಳ ವಿಧಾನವನ್ನು ಅನುಸರಿಸಬೇಕು. 


ಇದನ್ನೂ ಓದಿ : LIC Policy: 233 ರೂ. ಹೂಡಿಕೆ ಮಾಡಿ 17 ಲಕ್ಷ ಗಳಿಸಿ, ತೆರಿಗೆಯಲ್ಲೂ ಬಂಪರ್ ವಿನಾಯಿತಿ


ಸಂಪೂರ್ಣ ಪ್ರಕ್ರಿಯೆ ಹೀಗಿರಲಿದೆ.   
1. ನಿಮ್ಮ ಮೊಬೈಲ್ ಸಂಖ್ಯೆಯನ್ನು (Mobile number) ಭಾರತೀಯ ಜೀವ ವಿಮಾ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಬೇಕು.
2. ಇದಕ್ಕಾಗಿ ನೀವು ಮೊದಲು LIC www.licindia.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು .
3. ಇದರ ನಂತರ ಹೋಂ ಪೇಜ್  ಮೇಲ್ಭಾಗದಲ್ಲಿ ಕಸ್ಟಮ್ ಸರ್ವಿಸ್ ಕೆಟಗರಿ ಕಾಣಿಸುತ್ತದೆ. 
4. ಈ ಕೆಟಗರಿ ಮೇಲೆ ಕ್ಲಿಕ್ ಮಾಡಿ. ಈಗ ನೀವು ಸ್ಕ್ರೀನ್ ಮೇಲೆ ಇನ್ನೂ ಅನೇಕ ಸಬ್ ಕೆಟಗರಿ ಕಾಣಬಹುದು .
5. ಈಗ ಈ ಕೆತಗರಿಯಲ್ಲಿರುವ updateyour contact detals ಆಯ್ಕೆಯನ್ನು ಕ್ಲಿಕ್ ಮಾಡಿ.
6. ಈಗ  ಹೊಸ ಪುಟ ತೆರೆಯುತ್ತದೆ. ಈ ಪುಟದಲ್ಲಿ ನಿಮ್ಮನ್ನು ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
7. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಡಿಕ್ಲರೆಶನ್  ಬಗ್ಗೆ ಕೇಳಲಾಗುತ್ತದೆ. ಅದರ ಮೇಲೆ YES ಎಂದು ಕೊಟ್ಟು, ರೈಟ್ ಕ್ಲಿಕ್ ಮಾಡಿ ಸಬ್ಮಿಟ್ ಪ್ರೆಸ್ ಮಾಡಿ.  


ಇದನ್ನೂ  ಓದಿ : Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ಧಾರಣೆ ಎಷ್ಟಿದೆ ನೋಡಿ


ಪಾಲಿಸಿ ವಿವರಗಳನ್ನು ನೀಡಬೇಕು :  
1. ಈ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನೀವು ಅಸ್ತಿತ್ವದಲ್ಲಿರುವ LIC ಗ್ರಾಹಕರಾಗಿದ್ದರೆ, ನಿಮ್ಮ ಪಾಲಿಸಿ ಸಂಖ್ಯೆಯನ್ನು ಕೇಳಲಾಗುತ್ತದೆ.
2. ನಿಮ್ಮ ಪಾಲಿಸಿ ಸಂಖ್ಯೆಯನ್ನು ಇಲ್ಲಿ ನಮೂದಿಸಿದ ನಂತರ, ವ್ಯಾಲಿಡೇಟ್ ಪಾಲಿಸಿ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಪಾಲಿಸಿ ಸಂಖ್ಯೆಯನ್ನು ಪರಿಶೀಲಿಸಿ.
3. ಈ ಪ್ರಕ್ರಿಯೆಯ ನಂತರ ನಿಮ್ಮ ಕಾಂಟಾಕ್ಟ್ ಡೀಟೇಲ್ ಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ (website) ಅಪ್‌ಡೇಟ್ ಮಾಡಲಾಗುತ್ತದೆ.
4. ಇಷ್ಟಾದ ನಂತರ, ಎಲ್ಐಸಿ ಪಾಲಿಸಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಯಾವುದೇ ಹೊಸ ಪಾಲಿಸಿ ಅಥವಾ ಹಳೆಯ ಪಾಲಿಸಿಯಲ್ಲಿನ ಯಾವುದೇ ಅಪ್ಡೇಟ್ ಬಗ್ಗೆ ಫೋನ್ ಮೂಲಕವೇ ನೋಟಿಫಿಕೇಶನ್ (Notification) ಸಿಗಲು ಆರಂಭವಾಗುತ್ತದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.