LIC New Jeevan Shanti Policy : ನಿವೃತ್ತಿಯ ನಂತರ ಹಣಕ್ಕಾಗಿ ಚಿಂತೆಪಡಬೇಕಿಲ್ಲ, ಎಲ್ಐಸಿ ಪರಿಚಯಿಸಿದೆ ಅದ್ಬುತ ಪಾಲಿಸಿ
LIC ಹೊಸ ಮತ್ತು ಐಷಾರಾಮಿ ಪಾಲಿಸಿ ಜೀವನ್ ಶಾಂತಿ ಪಾಲಿಸಿಯನ್ನು ಪ್ರಾರಂಭಿಸಿದೆ. ಈ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ, ನೀವು ಜೀವಿತಾವಧಿ ಗ್ಯಾರಂಟಿಯೊಂದಿಗೆ ಪಿಂಚಣಿ ಪಡೆಯಬಹುದು.
ನವದೆಹಲಿ : LIC New Jeevan Shanti Policy: ಇಂದು ಮಾತ್ರ ನೆಮ್ಮದಿಯಾಗಿದ್ದರೆ ಸಾಲದು, ಇಂದಿನ ಜೊತೆಗೆ ನಾಳೆಯ ಬಗ್ಗೆಯೂ ಯೋಚಿಸಬೇಕಾಗುತ್ತದೆ. ವೃದ್ದಾಪ್ಯವನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯವಾಗಿರುತ್ತದೆ. ವೃದ್ದಾಪ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಇಂದೇ ಯೋಚಿಸಿದರೆ ಯಾರ ಮುಂದೆಯೂ ಕೈಚಾಚುವ ಅಗತ್ಯ ಬರುವುದಿಲ್ಲ ಈ ಹಿನ್ನೆಲೆಯಲ್ಲಿ ಎಲ್ಐಸಿ (LIC Policy) ಉತ್ತಮ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ವೃದ್ಧಾಪ್ಯವನ್ನು ಸುರಕ್ಷಿತವಾಗಿಡಬಹುದು.
LIC ಹೊಸ ಮತ್ತು ಐಷಾರಾಮಿ ಪಾಲಿಸಿ ಜೀವನ್ ಶಾಂತಿ ಪಾಲಿಸಿಯನ್ನು (Jeevan Shanti Policy) ಪ್ರಾರಂಭಿಸಿದೆ. ಈ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ, ನೀವು ಜೀವಿತಾವಧಿ ಗ್ಯಾರಂಟಿಯೊಂದಿಗೆ ಪಿಂಚಣಿ (Pension) ಪಡೆಯಬಹುದು. ಇದರೊಂದಿಗೆ, ನಿವೃತ್ತಿಯ ನಂತರದ ವೆಚ್ಚಗಳನ್ನು ನೀವು ಸುಲಭವಾಗಿ ಪೂರೈಸಬಹುದು.
ಇದನ್ನೂ ಓದಿ : Indian Railways: ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲುಗಳಲ್ಲಿ ಮತ್ತೆ ಆರಂಭವಾಗಲಿದೆ ಈ ಅಗತ್ಯ ಸೇವೆ
LIC ಜೀವನ್ ಶಾಂತಿ ಯೋಜನೆ :
ಜೀವನ್ ಶಾಂತಿ ಪಾಲಿಸಿಯು ಎಲ್ಐಸಿಯ ಹಳೆಯ ಯೋಜನೆಯಾದ ಜೀವನ್ ಅಕ್ಷಯ್ ಯೋಜನೆಯನ್ನು (Jeevan akshy scheme) ಹೋಲುತ್ತದೆ. ಜೀವನ್ ಶಾಂತಿ ಪಾಲಿಸಿಯಲ್ಲಿ ಎರಡು ಆಯ್ಕೆಗಳಿರುತ್ತವೆ. ಮೊದಲನೆಯದು ತಕ್ಷಣದ ವರ್ಷಾಶನ (immediate annuity) ಮತ್ತು ಎರಡನೆಯದು ಮುಂದೂಡಲ್ಪಟ್ಟ ವರ್ಷಾಶನ (deferred annuity plan). ಇದು ಒಂದೇ ಪ್ರೀಮಿಯಂ ಯೋಜನೆಯಾಗಿದೆ. ಮೊದಲ ಅಂದರೆ ತಕ್ಷಣದ ವರ್ಷಾಶನದ ಅಡಿಯಲ್ಲಿ, ಪಾಲಿಸಿಯನ್ನು ತೆಗೆದುಕೊಂಡ ತಕ್ಷಣ ಪಿಂಚಣಿ ಸೌಲಭ್ಯವು ಆರಂಭವಾಗುತ್ತದೆ. ಮತ್ತೊಂದೆಡೆ, ಮುಂದೂಡಲ್ಪಟ್ಟ ವರ್ಷಾಶನದಲ್ಲಿ ಪಾಲಿಸಿಯನ್ನು ತೆಗೆದುಕೊಂಡ 5, 10, 15 ಅಥವಾ 20 ವರ್ಷಗಳ ನಂತರ ಪಿಂಚಣಿ ಸೌಲಭ್ಯ ಲಭ್ಯವಿರುತ್ತದೆ.
ಪಿಂಚಣಿ ಎಷ್ಟು ಸಿಗುತ್ತದೆ ?
ಈ ಯೋಜನೆಯಡಿ ಪಿಂಚಣಿ (Pension) ಮೊತ್ತವನ್ನು ನಿಗದಿಪಡಿಸಲಾಗಿಲ್ಲ. ನಿಮ್ಮ ಹೂಡಿಕೆ, ವಯಸ್ಸು ಮತ್ತು ಮುಂದೂಡಿಕೆ ಅವಧಿಗೆ ಅನುಗುಣವಾಗಿ ಪಿಂಚಣಿ ಸಿಗುತ್ತದೆ. ಎಲ್ಐಸಿ (LIC) ನಿಮ್ಮ ಹೂಡಿಕೆಯ ಶೇಕಡಾವಾರು ಪ್ರಕಾರ ಪಿಂಚಣಿ ನೀಡುತ್ತದೆ.
ಇದನ್ನೂ ಓದಿ : Cryptocurrencyಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಬದಲಾಗಲಿದೆಯೇ Income Tax Act? ಸರ್ಕಾರ ನಡೆಸುತ್ತಿರುವ ಚಿಂತನೆ ಏನು?
ಯಾರು ಪ್ರಯೋಜನವನ್ನು ಪಡೆಯುತ್ತಾರೆ :
LIC ಯ ಈ ಯೋಜನೆಯನ್ನು ಕನಿಷ್ಠ 30 ವರ್ಷಗಳು ಮತ್ತು ಗರಿಷ್ಠ 85 ವರ್ಷಗಳ ವ್ಯಕ್ತಿಗಳು ತೆಗೆದುಕೊಳ್ಳಬಹುದು. ಇದಲ್ಲದೆ, ಪಿಂಚಣಿ ಪ್ರಾರಂಭವಾದ 1 ವರ್ಷದ ನಂತರ ಜೀವನ ಶಾಂತಿ ಯೋಜನೆಯಲ್ಲಿ (Jeevan Shanti Scheme) ಸಾಲವನ್ನು ಪಡೆಯಬಹುದು. ಪಿಂಚಣಿ ಪ್ರಾರಂಭವಾದ 3 ತಿಂಗಳ ನಂತರ ಅದನ್ನು ಸರೆಂಡರ್ ಮಾಡಬಹುದು. ಎರಡೂ ಆಯ್ಕೆಗಳಿಗೆ ಪಾಲಿಸಿಯನ್ನು ತೆಗೆದುಕೊಳ್ಳುವಾಗ ವಾರ್ಷಿಕ ದರಗಳನ್ನು ಖಾತರಿಪಡಿಸಲಾಗುತ್ತದೆ. ಯೋಜನೆಯ ಅಡಿಯಲ್ಲಿ ವಿವಿಧ ವರ್ಷಾಶನ ಆಯ್ಕೆಗಳು ಮತ್ತು ವರ್ಷಾಶನ ಪಾವತಿಯ ವಿಧಾನಗಳು ಲಭ್ಯವಿದೆ. ಆದರೆ ನೆನಪಿರಲಿ, ಈ ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ಒಮ್ಮೆ ಆಯ್ಕೆ ಮಾಡಿದ ಆಯ್ಕೆಯನ್ನು ಬದಲಾಯಿಸಲಾಗುವುದಿಲ್ಲ. ಈ ಯೋಜನೆಯನ್ನು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ