ಆಧಾರ್ ಕಾರ್ಡ್ ಮಾನ್ಯತೆ:  ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ- ಯುಐಡಿಎಐ ಪ್ರತಿಯೊಬ್ಬ ಭಾರತೀಯ ಪ್ರಜೆಗೂ 12-ಅಂಕಿಯ ಸಂಖ್ಯೆಯನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಎಷ್ಟು ಮುಖ್ಯವಾದ ದಾಖಲೆ ಎಂದರೆ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸುವುದರಿಂದ ಹಿಡಿದು, ಸಿಮ್ ಪಡೆಯಲು, ಬ್ಯಾಂಕ್ ಖಾತೆ ತೆರೆಯುವುದು ಹೀಗಿ ಪ್ರತಿ ಹಂತದಲ್ಲೂ ಇದು ಅತ್ಯಗತ್ಯವಾಗಿದೆ. ಸಾಮಾನ್ಯವಾಗಿ ನಾವು ನಮ್ಮ ಆಧಾರ್ ಕಾರ್ಡ್ ಯಾವಾಗಲೂ ಮಾನ್ಯವಾಗಿರುತ್ತದೆ ಎಂದು ಭಾವಿಸುತ್ತೇವೆ. ಆದರೆ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಂತೆ, ಆಧಾರ್ ಕಾರ್ಡ್ ಕೂಡ ಎಕ್ಸ್‌ಪೈರಿ  ದಿನಾಂಕವನ್ನು ಹೊಂದಿರುತ್ತದೆ ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಹೌದು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳಂತೆ, ಆಧಾರ್ ಕಾರ್ಡ್ ಮಾನ್ಯತೆಗೂ ಕೂಡ ಮಿತಿ ಇದೆ. ಹಾಗಿದ್ದರೆ, ಆಧಾರ್ ಕಾರ್ಡ್ ಎಷ್ಟು ಕಾಲ ಮಾನ್ಯವಾಗಿರುತ್ತದೆ? ಅದನ್ನು ಪರಿಶೀಲಿಸುವುದು ಹೇಗೆ ಎಂಬ ಬಗೆಗಿನ ಇತ್ಯಾದಿ ಮಾಹಿತಿಗಳನ್ನು ಇಲ್ಲಿ ತಿಳಿಯೋಣ...


ಆಧಾರ್ ಕಾರ್ಡ್ ಎಷ್ಟು ದಿನಗಳವರೆಗೆ ಮಾನ್ಯವಾಗಿರುತ್ತದೆ?
ನೀವು ವಯಸ್ಕರಾಗಿದ್ದರೆ ನಿಮಗೆ ನೀಡಲಾದ ಆಧಾರ್ ಕಾರ್ಡ್ ಜೀವನ ಪರ್ಯಂತ ಮಾನ್ಯವಾಗಿರುತ್ತದೆ. ವ್ಯಕ್ತಿಯ ಮರಣದ ನಂತರವಷ್ಟೇ ಆ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ. 


ಇದನ್ನೂ ಓದಿ- ಈ ನೋಟುಗಳು ಇನ್ಮುಂದೆ ರದ್ದಿಗೆ ಸಮಾನ, ನಿಮ್ಮ ಜೇಬಿನಲ್ಲೂ ಇದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ
 
5 ವರ್ಷದೊಳಗಿನ ಮಕ್ಕಳಿಗೆ ಆಧಾರ್‌ನ ಸಿಂಧುತ್ವ:

ಆದರೆ, ಅಪ್ರಾಪ್ತ ಮಕ್ಕಳ ವಿಷಯದಲ್ಲಿ ಅಂದರೆ ಐದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಆಧಾರ್ ಕಾರ್ಡ್‌ನ ಮಾನ್ಯತೆ ಇರುತ್ತದೆ. ವಾಸ್ತವವಾಗಿ, ಚಿಕ್ಕ ಮಕ್ಕಳಿಗೆ,  5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ. ಈ ಕಾರ್ಡ್ ಮಗುವಿನ 5 ವರ್ಷ ವಯಸ್ಸಿನವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇದರಲ್ಲಿ ಮಗುವಿನ ಬಯೋಮೆಟ್ರಿಕ್ ತೆಗೆದುಕೊಳ್ಳುವುದಿಲ್ಲ. ಮಗುವಿಗೆ ಐದು ವರ್ಷ ಪೂರ್ಣಗೊಂಡ ಬಳಿಕ ಆ ಮಗುವಿನ ಕಾರ್ಡ್ ಅನ್ನು ನವೀಕರಿಸಲಾಗುತ್ತದೆ. 


ಇದನ್ನೂ ಓದಿ- LPG Price Today: ಎಲ್‌ಪಿಜಿ ಬೆಲೆಯಲ್ಲಿ ಭಾರೀ ಕಡಿತ
 
ಆಧಾರ್ ಕಾರ್ಡ್ ಸಿಂಧುತ್ವವನ್ನು ಪರಿಶೀಲಿಸುವುದು ಹೇಗೆ ?

- ಆಧಾರ್ ಕಾರ್ಡ್ ಸಿಂಧುತ್ವವನ್ನು ಪರಿಶೀಲಿಸಲು ಮೊದಲು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
-  ವೆಬ್‌ಸೈಟ್‌ನಲ್ಲಿ ಮುಖಪುಟದಲ್ಲಿ ನೀಡಲಾದ ಆಧಾರ್ ಸೇವೆಗಳ ಆಯ್ಕೆಗೆ ಹೋಗಬೇಕು.
- ಮುಖಪುಟದ ಬಲಭಾಗದಲ್ಲಿ, ನೀವು "ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ" ಎಂಬ ಆಯ್ಕೆಯನ್ನು ಕಾಣಬಹುದು. 
- ನಂತರ "ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ" ಕ್ಲಿಕ್ ಮಾಡಿ ಮತ್ತು ಅದು ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯುತ್ತದೆ.
- ಬಳಿಕ ನಿಗದಿತ ಸ್ಥಳದಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
- ನಿಮ್ಮ ಭದ್ರತಾ ಕೋಡ್ ನಮೂದಿಸಿ.
- ಈಗ Verify ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಮಾನ್ಯವಾಗಿದ್ದರೆ, ಆಧಾರ್ ಸಂಖ್ಯೆ ಪರಿಶೀಲನೆಯ ಸ್ಥಿತಿಯನ್ನು ತೋರಿಸುವ ಸಂದೇಶವು ಕಾಣಿಸಿಕೊಳ್ಳುತ್ತದೆ. ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಿದ್ದರೆ, ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂದು ಹೇಳುವ ಹಸಿರು ಬಣ್ಣದ ಚಿಹ್ನೆ ಕಾಣಿಸಿಕೊಳ್ಳುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.