Liquor Shop Bandh: ಎಣ್ಣೆ ಪ್ರಿಯರಿಗೆ ಕಿರಿಕಿರಿಗೆ ಇದು ನಿಜವಾಗಿಯೂ ಕೆಟ್ಟ ಸುದ್ದಿ. ದುಡ್ಡು ಕೊಟ್ಟರೂ, ಎಲ್ಲಿಗೆ ಹೋದರೂ ಅವರಿಗೆ ಬೇಕಿರುವ ಮದ್ಯ ಸಿಗಲಾರದಂಥ ಪರಿಸ್ಥಿ ತಿ ನಿರ್ಮಾಣವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಏಕೆಂದರೆ ಮದ್ಯದ ಅಂಗಡಿಗಳ ಮಾಲೀಕರು ಮದ್ಯದ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಮದ್ಯದ ಅಂಗಡಿಗಳ ಮಾಲೀಕರು ಪ್ರತಿಭಟಿಸುತ್ತಿರುವುದೇಕೆ?
ಅಬಕಾರಿ ಇಲಾಖೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಆಗಿದೆ, ಅಬಕಾರಿ ಇಲಾಖೆಯ ಭ್ರಷ್ಟಾಚಾರದಿಂದ ವಿವಿಧ ಬ್ರಾಂಡ್ ಗಳ ದರ ನಿಗದಿ, ಪೂರೈಕೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತಿದೆ. ಇದರಿಂದ ಮದ್ಯ ಮಾರಾಟಗಾರರ ಲಾಭದ ಪ್ರಮಾಣ ಕುಸಿಯುತ್ತಿದೆ. ಬಾಡಿಗೆ, ನೌಕರರ ಸಂಬಳಗಳೆಲ್ಲವನ್ನೂ ನಿಭಾಯಿಸಿಕೊಂಡು ಮದ್ಯದ ಅಂಗಡಿಗಳನ್ನು ನಡೆಸುವುದೇ ಕಷ್ಟವಾಗುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳ ಮಾಲೀಕರು ಬಂದ್ ನಡೆಸಲು ನಿರ್ಧರಿಸಿದ್ದಾರೆ. ಮದ್ಯದ ಅಂಗಡಿಗಳು ಪ್ರತಿಭಟನೆಗಾಗಿ ಮುಚ್ಚಿದರೆ ಸಹಜವಾಗಿ ಎಣ್ಣೆ ಪ್ರಿಯರಿಗೆ ಮದ್ಯ ಸಿಗುವುದಿಲ್ಲ. 


ಯಾವಾಗಿನಿಂದ ಮದ್ಯದ ಅಂಗಡಿಗಳ ಮಾಲೀಕರ ಪ್ರತಿಭಟನೆ?
ಈಗಾಗಲೇ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರಕ್ಕೆ ಕೂಡಲೇ ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ. ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸದಿದ್ದರೆ ಇದೇ ನವೆಂಬರ್ 20ರಿಂದ ರಾಜ್ಯಾದ್ಯಂತ ಮಧ್ಯದ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. 


ಇದನ್ನೂ ಓದಿ- ಧಂತೇರಸ್‌ನಲ್ಲಿ ಚಿನ್ನ ಖರೀದಿಸಲು ಯೋಚಿಸ್ತಿದ್ದೀರಾ? ತೆರಿಗೆ ಎಷ್ಟು ಕಟ್ ಆಗುತ್ತೆ ಗೊತ್ತಾ?


ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಇದೇ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಬಂದ್ ಬಗ್ಗೆ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಗುರುಸ್ವಾಮಿ ಅವರು ಪ್ರತಿಕ್ರಿಯಿಸಿ ಅಬಕಾರಿ ಇಲಾಖೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಸರ್ಕಾರ ಈ ಕೂಡಲೇ ನಿರ್ಮೂಲನೆ ಮಾಡದೇ ಇದ್ದರೆ ನಾವು ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಅಬಕಾರಿ ಇಲಾಖೆಯಲ್ಲಿ ಪರವಾನಿಗೆ, ನವೀಕರಣಕ್ಕೆ, ಮತ್ತು ವ್ಯವಹಾರ ನಡೆಸಲು ಎಲ್ಲದಕ್ಕೂ ಲಂಚ ಕೊಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪಾರಾಗಲು ನಮಗೆ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ. 


ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವವರು ಅವರ ಅನುಕೂಲಕ್ಕೆ ತಕ್ಕಂತೆ ಅಥವಾ ದುಡ್ಡು ಮಾಡಲು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿದ್ದಾರೆ. ಇದು ಕೂಡ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದೆ. ಅಧಿಕಾರಿಗಳು ವರ್ಗಾವಣೆಯಾದರೆ ಒಂದು ಜಾಗದಿಂದ ಹೋಗುವ ಅಧಿಕಾರಿಗೆ ಹಣ ಕೊಟ್ಟಿದ್ದರೂ ಅಲ್ಲಿಗೆ ನಿಯುಕ್ತಿಗೊಳ್ಳುವ ಇನ್ನೊಬ್ಬ ಅಧಿಕಾರಿಗೂ  ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಮದ್ಯ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶಗೊಂಡು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರತಿಭಟನೆಗಿಳಿದಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ- ಯೂಟ್ಯೂಬ್, ವಾಟ್ಸಾಪ್ ಬಳಕೆದಾರರೇ ಎಚ್ಚರ, ಎಚ್ಚರ! ಸಣ್ಣ ತಪ್ಪಿನಿಂದ ಮಹಾ ದೋಖ, ಅಕೌಂಟ್ ಫುಲ್ ಖಾಲಿ!


ಬೆಂಗಳೂರಿನಲ್ಲೇ ಹೆಚ್ಚು ಭ್ರಷ್ಟಾಚಾರ!
ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಮದ್ಯದ ಅಂಗಡಿ ಮಾಲೀಕರು ತಿಂಗಳಿಗೆ ಕನಿಷ್ಠ 40ರಿಂದ 50 ಸಾವಿರದವರೆಗೆ ಲಂಚ ಕೊಡಬೇಕೆಂದು ತಾಖೀತು ಮಾಡಲಾಗಿದೆ. ಇಂತಹ ವ್ಯವಸ್ಥೆಗೆ ಸರ್ಕಾರ ಕೂಡಲೇ ಬ್ರೇಕ್ ಹಾಕಬೇಕು. ಇಲ್ಲದಿದ್ದರೆ ಮದ್ಯದ ಅಂಗಡಿಗಳ ಮಾಲೀಕರು ತಮ್ಮ ವ್ಯವಹಾರವನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು  ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸದಸ್ಯರು ಹೇಳುತ್ತಾರೆ. 


‘ಸ್ಟ್ಯಾಂಡ್‌ ಅಂಡ್ ಡ್ರಿಂಕ್’ಗೆ ಬೇಡಿಕೆ
ವೈನ್ ಶಾಪ್ ಗಳಲ್ಲಿ ಕೇವಲ ಮದ್ಯವನ್ನು ಮಾರಾಟ ಮಾಡಬೇಕು ಎನ್ನುವ ನಿಯಮ ಇದೆ. ಇವುಗಳನ್ನು CL-2 ವೈನ್ ಶಾಪ್ ಗಳೆಂದು ಹೇಳಲಾಗುತ್ತದೆ. ಬೆಂಗಳೂರು ನಗರ ಒಂದರಲ್ಲೇ ಇಂತಹ 3,929 ವೈನ್ ಶಾಪ್ ಗಳಿವೆ. ಇಂತಹ ವೈನ್ ಶಾಪ್ ಗಳಲ್ಲಿ ಈಗಿರುವ ‘ಕೇವಲ ಮದ್ಯವನ್ನೇ ಮಾರಾಟ ಮಾಡಬೇಕು’ ಎಂಬ ನಿಯಮವನ್ನು ತೆಗೆದು ಹಾಕಿ, ವೈನ್ ಶಾಪ್ ಗಳಲ್ಲಿ ಅಥವಾ ವೈನ್ ಶಾಪ್ ಗಳ ಬಳಿ ‘ಸ್ಟ್ಯಾಂಡ್‌ ಅಂಡ್ ಡ್ರಿಂಕ್’ (ಅಲ್ಲೇ ನಿಂತು ಕುಡಿಯುವ ವ್ಯವಸ್ಥೆ ಮಾಡಲು ಅವಕಾಶ ಮಾಡಿಕೊಡಬೇಕೆಂದು) ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಬೇಡಿಕೆ ಇಟ್ಟಿದ್ದು, ನವೆಂಬರ್ 20ರಿಂದ ನಡೆಯುವ ಮುಷ್ಕರದಲ್ಲಿ ಈ ಬೇಡಿಕೆ ಈಡೇರಿಸುವಂತೆಯೂ ಒತ್ತಾಯಿಸಲಾಗುತ್ತದೆ ಎಂದು ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.