ನವದೆಹಲಿ: ಹಣಕಾಸು ಸೇವಾ ಆ್ಯಪ್ ಧನಿ(Dhani App) ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿವಾದಗಳನ್ನು ಎದುರಿಸುತ್ತಿದೆ. ಈ ಅಪ್ಲಿಕೇಶನ್ ಭದ್ರತೆಯಿಲ್ಲದೆ ಸಾಲವನ್ನು ಒದಗಿಸುವಲ್ಲಿ ಪ್ರಸಿದ್ಧವಾಗಿದೆ. ಕೆಲ ದಿನಗಳ ಹಿಂದೆ ಕೂಡ ಧನಿ ಆ್ಯಪ್ ಮೂಲಕ ವಿಭಿನ್ನ ರೀತಿಯ ವಂಚನೆ ನಡೆದಿರುವ ಬಗ್ಗೆ ವರದಿಯಾಗಿತ್ತು.


COMMERCIAL BREAK
SCROLL TO CONTINUE READING

ಸಾಲ ಪಡೆಯದೇ ಸಾಲಗಾರರಾಗುತ್ತಿರುವ ಬಳಕೆದಾರರು!


ಧನಿ ಆ್ಯಪ್ ವಿಚಾರವಾಗಿ ಜನರಿಗೆ ಗೊತ್ತಿಲ್ಲದ ಸಂಗತಿಯೊಂದು ಬಯಲಾಗಿದ್ದು, ಅವರ ಪಾನ್ ಕಾರ್ಡ್(Pan Card) ಮೇಲೆ ಕಂಪನಿ ಬೇರೆಯವರಿಗೆ ಸಾಲ ನೀಡಿದೆ. ಹೀಗಿರುವಾಗ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಪಾನ್ ಕಾರ್ಡ್ ಕೂಡ ದುರುಪಯೋಗವಾಗುತ್ತಿದೆಯೇ ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಸಾಲವನ್ನು ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಮನೆಯಲ್ಲಿಯೇ ಕುಳಿತು ನಿಮಿಷಗಳಲ್ಲಿ ಪರಿಶೀಲಿಸಬಹುದು. ಇದರ ಕೆಲವು ಸುಲಭ ಮಾರ್ಗಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ ನೋಡಿ.


ಇದನ್ನೂ ಓದಿ: SBI Scheme : SBI ಖಾತೆದಾರರಿಗೆ ಸಿಹಿಸುದ್ದಿ! ಬರೀ ₹342 ಹೂಡಿಕೆ ಮಾಡಿ, ₹4 ಲಕ್ಷ ಲಾಭ ಪಡೆಯಿರಿ!


ಅನೇಕ ಬಳಕೆದಾರರಿಗೆ ವಂಚನೆ


ಧನಿ ಆ್ಯಪ್ ನ ಅನೇಕ ಬಳಕೆದಾರರು ಸಾಲ ಪಡೆಯದೇ ವಂಚನೆ(Dhani Fraud Case)ಗೊಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ವಿಟರ್‌ನಲ್ಲಿ ಬಳಕೆದಾರರು ಕಂಪನಿಯು ಸಾಲವನ್ನು ನೀಡಿದೆ ಎಂದು ಸ್ಕ್ರೀನ್‌ಶಾಟ್‌ಗಳ ಮೂಲಕ ತಿಳಿಸಿದ್ದಾರೆ. ಅದೇ ಬಳಕೆದಾರರ ಪ್ಯಾನ್ ಸಂಖ್ಯೆಯನ್ನು ಸಾಲಕ್ಕಾಗಿ ಬಳಸಲಾಗಿದೆ ಮತ್ತು ವಿಳಾಸವು ಬಿಹಾರ ಮತ್ತು ಉತ್ತರ ಪ್ರದೇಶವಾಗಿದೆ. ಕೆಲ ಬಳಕೆದಾರರು ತಾವು ಸಾಲವನ್ನೇ ತೆಗೆದುಕೊಂಡಿಲ್ಲ, ಆದರೂ ತಮ್ಮನ್ನು ಸಾಲಗಾರರನ್ನಾಗಿ ಮಾಡಲಾಗಿದೆ ಅಂತಾ ಹೇಳಿದ್ದಾರೆ. ಇನ್ನೊಬ್ಬರು ಬೇರೆಯವರ ಹೆಸರು ಮತ್ತು ಪಾನ್‌ನಲ್ಲಿ ಸಾಲ ಪಡೆಯುವುದು ಹೇಗೆ ಅಂತಾ ಕೆಲವರು ಆಶ್ಚರ್ಯದಿಂದ ಪ್ರಶ್ನಿ‍ಸಿದ್ದಾರೆ. ಇದರ ಬಗ್ಗೆ ತಮಗೆ ಯಾವುದೇ ಮಾಹಿತಿ ತಿಳಿದಿಲ್ಲ ಅಂತಾ ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದಾದ ನಂತರ ಇಂತಹ ಟ್ವೀಟ್‌ಗಳ ಮಹಾಪೂರವೇ ಹರಿದು ಬಂದಿದೆ. ನೂರಾರು ಬಳಕೆದಾರರು ತಮ್ಮ ಪ್ಯಾನ್ ಕಾರ್ಡ್ ಮೂಲಕ ಸಾಲ ವಂಚನೆಯಾಗಿದೆ ಅಂತಾ ದೂರಿದ್ದಾರೆ.


ನಿಮಗೂ ವಂಚನೆಯಾಗಿದೆಯೇ ಎಂಬುದನ್ನು ಹೀಗೆ ಪರಿಶೀಲಿಸಿ


  • ಕ್ರೆಡಿಟ್ ಸ್ಕೋರ್ ವರದಿಯು ನಿಮ್ಮ ಹೆಸರಿನಲ್ಲಿರುವ ಸಾಲದ ಖಾತೆಗಳ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

  • ವರದಿಯನ್ನು ಪರಿಶೀಲಿಸಲು ನೀವು ಯಾವುದೇ ಕ್ರೆಡಿಟ್ ಬ್ಯೂರೋದ ಸೇವೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

  • ನೀವು TransUnion CIBIL, Equifax, Experian ಅಥವಾ CRIF ಹೈ ಮಾರ್ಕ್‌ನಂತಹ ಬ್ಯೂರೋಗಳ ಸೇವೆಯನ್ನು ತೆಗೆದುಕೊಳ್ಳಬಹುದು.

  • SBI ಕಾರ್ಡ್, Paytm, ಬ್ಯಾಂಕ್ ಬಜಾರ್ ಇತ್ಯಾದಿಗಳು ಬ್ಯೂರೋಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ವರದಿಗಳನ್ನು ಪರಿಶೀಲಿಸುವ ಸೌಲಭ್ಯವನ್ನು ಸಹ ಒದಗಿಸುತ್ತವೆ.

  • ಈ ಆಯ್ಕೆಗಳಲ್ಲಿ ಯಾವುದು ನಿಮಗೆ ಸುಲಭವಾಗಿದೆ ಎಂಬುದನ್ನು ಆರಿಸಿಕೊಳ್ಳಿ.

  • ಆಯಾ ಪೋರ್ಟಲ್ ಅಥವಾ ಅಪ್ಲಿಕೇಶನ್‌ನಲ್ಲಿ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವ ಆಯ್ಕೆಯನ್ನು ಹುಡುಕಿ.

  • SBI ಕಾರ್ಡ್‌ನಂತಹ ಕೆಲವು ಅಪ್ಲಿಕೇಶನ್‌ಗಳು ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸುವ ಸೌಲಭ್ಯವನ್ನು ಒದಗಿಸುತ್ತವೆ. ಇದಕ್ಕಾಗಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವುದು ಅವಶ್ಯಕ.

  • ಇತರ ಬಳಕೆದಾರರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಯೋಜನೆಯನ್ನು ಆಯ್ಕೆ ಮಾಡಬಹುದು. ಇದರ ಮೇಲೆ ನಿಗಾ ಇಡಲು ಇದು ನಿಮಗೆ ಸಹಾಯ ಮಾಡುತ್ತದೆ.

  • ಹುಟ್ಟಿದ ದಿನಾಂಕ (DoB), ಮೊಬೈಲ್ ಸಂಖ್ಯೆ, ಇಮೇಲ್ ಐಡಿ, PAN ಸಂಖ್ಯೆ ಮುಂತಾದ ಕೆಲವು ಮಾಹಿತಿಯನ್ನು ನೀಡುವ ಮೂಲಕ ನಿಮ್ಮ ಖಾತೆಯನ್ನು ರಚಿಸಲಾಗುತ್ತದೆ.

  • ಈಗ ನೀವು ಲಾಗಿನ್ ಮಾಡಬಹುದು ಮತ್ತು ವರದಿಯನ್ನು ಪರಿಶೀಲಿಸಬಹುದು.   ನಿಮ್ಮ ಹೆಸರಿನಲ್ಲಿ ಎಷ್ಟು ಸಾಲ ತೆಗೆದುಕೊಳ್ಳಲಾಗಿದೆ ಎಂಬುದರ ವರದಿಯನ್ನು ತೋರಿಸುತ್ತದೆ.

  • ನೀವು ತೆಗೆದುಕೊಳ್ಳದ ಯಾವುದೇ ಸಾಲದ ಬಗ್ಗೆ ಗೊತ್ತಾದ ತಕ್ಷಣವೇ ಅದರ ಬಗ್ಗೆ ದೂರು ನೀಡಿ. ಈ ದೂರನ್ನು ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ನೀಡಬಹುದು.


ಇದನ್ನೂ ಓದಿ: BSNL ಗಿಂತ ಉತ್ತಮ ಯೋಜನೆಗಳನ್ನು ನೀಡುತ್ತಿದೆಯೇ Airtel? ಇಲ್ಲಿದೆ ಈ ಬಗ್ಗೆ ಮಾಹಿತಿ


ಸನ್ನಿ ಲಿಯೋನ್ ಗೆ ವಂಚನೆ ನಡೆದಿದೆ


ಬಾಲಿವುಡ್ ನಟಿ ಸನ್ನಿ ಲಿಯೋನ್ ಗೆ ಕೂಡ ವಂಚನೆ ಮಾಡಲಾಗಿದೆ. ತನ್ನ ಪಾನ್‌(Indiabulls Loan Scam)ನಲ್ಲಿ ಬೇರೆಯವರಿಗೆ ಸಾಲ ನೀಡಲಾಗಿದೆ ಎಂದು ಸ್ವತಃ ನಟಿಯೇ ತಿಳಿಸಿದ್ದಾಳೆ. ಆಕೆಯ ಹೆಸರಿನಲ್ಲಿ ಬೇರೆಯವರು ಈ ವಂಚನೆ ಮಾಡಿದ್ದಾರೆ. ಸಾಲ ಮಾಡದೆ ಅನೇಕ ಜನರ ಕ್ರೆಡಿಟ್ ಸ್ಕೋರ್ ಕೂಡ ಹಾಳಾಗಿದೆ.


ಧನಿ ಅವರೇ ದೂರು ನೀಡಿದ್ದಾರೆ


ವಿಷಯ ತಿಳಿದ ನಂತರ ಧನಿ ಆ್ಯಪ್(Dhani App Loan), ತಪ್ಪು ದಾಖಲೆಗಳ ಆಧಾರದ ಮೇಲೆ ಕೆವೈಸಿ ಮಾಡಿ ಈ ವಂಚನೆ ಮಾಡಲಾಗಿದೆ ಎಂದು ಜನರಿಗೆ ತಿಳಿಸಿದೆ. ವಂಚಕರು ಇತರರ ಪ್ಯಾನ್ ಕಾರ್ಡ್ ಮಾಹಿತಿಯನ್ನು ಕ್ರೆಡಿಟ್ ಬ್ಯೂರೋಗಳಿಂದ ಪಡೆದಿರಬಹುದು ಎಂದು ಧನಿ ಆತಂಕ ವ್ಯಕ್ತಪಡಿಸಿದೆ. ಪ್ರಸ್ತುತ ಈ ವಿಷಯದಲ್ಲಿ ಸಂಬಂಧಪಟ್ಟ ಕಾನೂನು ಜಾರಿ ಸಂಸ್ಥೆಗಳಿಗೆ ದೂರು ನೀಡಲಾಗುತ್ತಿದೆ. ಧನಿ ಆ್ಯಪ್ ವಂಚನೆಗೊಳಗಾದವರ ಪರವಾಗಿ ಪೊಲೀಸರಿಗೂ ದೂರು ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.