ಬೆಂಗಳೂರು :LIC Loan : ತುರ್ತು ಪರಿಸ್ಥಿತಿಯಲ್ಲಿ ಹಣದ ಅಗತ್ಯವಿದ್ದರೆ,ಅನೇಕ ಜನರು ವೈಯಕ್ತಿಕ ಸಾಲವನ್ನು ಅಂದರೆ ಪರ್ಸನಲ್ ಲೋನ್ ಪಡೆಯುತ್ತಾರೆ.ಇನ್ನು ಕೆಲವರು ಪಾಲಿಸಿಯನ್ನು ಅರ್ಧಕ್ಕೆ ನಿಲ್ಲಿಸಿ ಹಣವನ್ನು ಹಿಂದಕ್ಕೆ ಪಡೆದುಕೊಳ್ಳುತ್ತಾರೆ.ಆದರೆ ಹೀಗೆ ಮಾಡಬೇಕಿಲ್ಲ.ನಿಮ್ಮ ಬಳಿ ಎಲ್ಐಸಿ  ಪಾಲಿಸಿ ಇದ್ದರೆ ಆ ಪಾಲಿಸಿಯ ಮೇಲೆಯೂ ಸಾಲವನ್ನು ತೆಗೆದುಕೊಳ್ಳಬಹುದು.ಎಲ್ಐಸಿ ಸಾಲಗಳು ಸಾಮಾನ್ಯವಾಗಿ ವೈಯಕ್ತಿಕ ಸಾಲಗಳಿಗಿಂತ ಅಗ್ಗವಾಗಿರುತ್ತದೆ.ಮರು-ಪಾವತಿ ಕೂಡಾ ಸುಲಭ.ಪ್ರತಿ ತಿಂಗಳು EMI ಪಾವತಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ.ಹಾಗಿದ್ದರೆ ಈ ಸಾಲದ ಮರುಪಾವತಿ ಹೇಗೆ? ಎಲ್ಐಸಿ ಸಾಲ ಸೌಲಭ್ಯಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳು ಮತ್ತು ಪ್ರಯೋಜನಗಳು ಇಲ್ಲಿವೆ. 


COMMERCIAL BREAK
SCROLL TO CONTINUE READING

ಸಾಲದ ವೈಶಿಷ್ಟ್ಯಗಳು : 
LIC ಪಾಲಿಸಿಯ ಮೇಲಿನ ಸಾಲವು ಸುರಕ್ಷಿತ ಸಾಲದ ವರ್ಗದ ಅಡಿಯಲ್ಲಿ ಬರುತ್ತದೆ.  ಏಕೆಂದರೆ ಸಾಲದ ಖಾತರಿಯು ನಿಮ್ಮ ಜೀವ ವಿಮಾ ಪಾಲಿಸಿಯಾಗಿದೆ.ಇದಕ್ಕೆ ಹೆಚ್ಚಿನ ಪೇಪರ್ ವರ್ಕ್ ಅಗತ್ಯವಿಲ್ಲ ಮತ್ತು ಸಾಲವು ತ್ವರಿತವಾಗಿ ಲಭ್ಯವಿರುತ್ತದೆ.ಗ್ರಾಹಕರು ಕೇವಲ 3 ರಿಂದ 5 ದಿನಗಳಲ್ಲಿ ಸಾಲದ ಮೊತ್ತವನ್ನು ಪಡೆಯಬಹುದು.


ಇದನ್ನೂ ಓದಿ : Arecanut Price in Karnataka: ರಾಜ್ಯದ ಅಡಿಕೆ ಮಾರುಕಟ್ಟೆ ಧಾರಣೆ ಮತ್ತಷ್ಟು ಏರಿಕೆ..!


LIC ನಲ್ಲಿ ಸಾಲದ ಒಂದು ಪ್ರಯೋಜನವೆಂದರೆ ನಿಮ್ಮ ಪಾಲಿಸಿಯನ್ನು ನೀವು ಸರೆಂಡರ್ ಮಾಡಬೇಕಾಗಿಲ್ಲ.ಸಾಲ ಪಡೆದರೂ ವಿಮೆಯಲ್ಲಿ ನೀವು ಪಡೆಯುವ ಪ್ರಯೋಜನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ.ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಈ ಸಾಲಗಳು ಅಗ್ಗವಾಗಿವೆ.ಅಲ್ಲದೆ,ಯಾವುದೇ ಪ್ರೊಸೆಸಿಂಗ್ ಚಾರ್ಜ್ ಅಥವಾ ಹಿಡನ್ ಚಾರ್ಜ್ ಇರುವುದಿಲ್ಲ.ಇದು ಸಾಲದ ಮೇಲಿನ ಹೆಚ್ಚುವರಿ ವೆಚ್ಚವನ್ನು ತಪ್ಪಿಸುತ್ತದೆ.


ಮರುಪಾವತಿ ತುಂಬಾ ಸುಲಭ: 
ನೀವು ಎಲ್ಐಸಿ ಪಾಲಿಸಿಯ ಮೇಲೆ ಸಾಲವನ್ನು ತೆಗೆದುಕೊಂಡರೆ, ಅದರ ಮರುಪಾವತಿ ತುಂಬಾ ಸುಲಭ.ಸಾಲವನ್ನು ಮರುಪಾವತಿಸಲು ಇದು ಉತ್ತಮ ಸಮಯವನ್ನು ನೀಡುತ್ತದೆ.ಸಾಲದ ಅವಧಿಯು ಆರು ತಿಂಗಳಿಂದ ವಿಮಾ ಪಾಲಿಸಿಯ ಮುಕ್ತಾಯದವರೆಗೆ ಇರುತ್ತದೆ.ಇನ್ನೊಂದು ಮುಖ್ಯ ವಿಷಯವೆಂದರೆ ಈ ಸಾಲದಲ್ಲಿ ಪ್ರತಿ ತಿಂಗಳು EMI ಪಾವತಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಕೈಯ್ಯಲ್ಲಿ ಹಣ ಸಂಗ್ರಹವಾಗುತ್ತಿದ್ದಂತೆ,ಅದಕ್ಕೆ ಅನುಗುಣವಾಗಿ ಪಾವತಿಸಬಹುದು.ಆದರೆ ಅದಕ್ಕೆ ವಾರ್ಷಿಕ ಬಡ್ಡಿಯನ್ನು ಸೇರಿಸಲಾಗುತ್ತದೆ.ಗ್ರಾಹಕರು ಆರು ತಿಂಗಳೊಳಗೆ ಸಾಲವನ್ನು ಮರುಪಾವತಿಸಿದರೆ ತಿಂಗಳವರೆಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ : ಮುಖೇಶ್, ಅನಿಲ್ ಅಂಬಾನಿ ಜಗತ್ತಿಗೇ ಗೊತ್ತು! ತೆರೆಮರೆಯಲ್ಲಿರುವ ಅಂಬಾನಿ ಸಹೋದರಿಯರ ಬಗ್ಗೆ ಗೊತ್ತಾ ? ಸಂಪತ್ತಿನಲ್ಲಿ ಸಹೋದರರಿಗೆ ಸರಿ ಸಮಾನವಾಗಿ ನಿಂತಿರುವ ಚೆಂದುಳ್ಳಿ ಚೆಲುವೆಯರು !


 ಸಾಲ ಮರುಪಾವತಿ ಆಯ್ಕೆಗಳು :
- ಸಂಪೂರ್ಣ ಅಸಲು ಮೊತ್ತವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಬಹುದು.
- ವಿಮಾ ಪಾಲಿಸಿಯ ಮುಕ್ತಾಯದ ಸಮಯದಲ್ಲಿ ಕ್ಲೈಮ್ ಮೊತ್ತದೊಂದಿಗೆ ಅಸಲು ಪಾವತಿಸಿ.ಆ ಸಂದರ್ಭದಲ್ಲಿ ನೀವು ಬಡ್ಡಿಯ ಮೊತ್ತವನ್ನು ಮಾತ್ರ ಪಾವತಿಸಬೇಕಾಗುತ್ತದೆ. 
- ವಾರ್ಷಿಕ ಬಡ್ಡಿ ಮೊತ್ತ ಮತ್ತು ಅಸಲು ಮೊತ್ತವನ್ನು ಪ್ರತ್ಯೇಕವಾಗಿ ಪಾವತಿಸಿ.


ಸಾಲಕ್ಕೆ ಲಗತ್ತಿಸಲಾದ ನಿಯಮವೆಂದರೆ : 
ವಿಮಾ ಪಾಲಿಸಿಯ ಬದಲಾಗಿ ಸಾಲವು ಸಾಂಪ್ರದಾಯಿಕ ಮತ್ತು ಎಂಡೋಮೆಂಟ್ ಪಾಲಿಸಿಗಳಂತಹ ಕೆಲವು ಪಾಲಿಸಿಗಳ ಬದಲಿಗೆ ಮಾತ್ರ ಲಭ್ಯವಿದೆ.


ಸಾಲದ ಮೊತ್ತವನ್ನು ಸರೆಂಡರ್ ಮೌಲ್ಯಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.ನಿಮ್ಮ ಪಾಲಿಸಿಯ ಸರೆಂಡರ್ ಮೌಲ್ಯದ 80 ರಿಂದ 90 ಪ್ರತಿಶತದಷ್ಟು ಸಾಲ ಲಭ್ಯವಿದೆ.


ಲೋನ್ ಪಾಲಿಸಿಯ ಬಡ್ಡಿ ದರವು ಪಾಲಿಸಿದಾರರ ಪ್ರೊಫೈಲ್ ಅನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇದು 10 ರಿಂದ 12 ಪ್ರತಿಶತದವರೆಗೆ ಇರುತ್ತದೆ. 


ಇದನ್ನೂ ಓದಿ : ಡಿಎ ಹೆಚ್ಚಳವಾಯ್ತು ! ಇದೀಗ ಮತ್ತೊಂದು ಭತ್ಯೆಯಲ್ಲಿ ಹೆಚ್ಚಳ ! ಸರ್ಕಾರಿ ನೌಕರರ ವೇತನದಲ್ಲಿ ಆಗಲಿದೆ 12,600 ರೂ.ಹೆಚ್ಚಳ


ಸಾಲವನ್ನು ಮರುಪಾವತಿ ಮಾಡದಿದ್ದರೆ ಅಥವಾ ಸಾಲದ ಬಾಕಿಯು ಪಾಲಿಸಿಯ ಸರೆಂಡರ್ ಮೌಲ್ಯವನ್ನು ಮೀರಿದರೆ ನಿಮ್ಮ ಪಾಲಿಸಿಯನ್ನು ಕೊನೆಗೊಳಿಸುವ ಹಕ್ಕನ್ನು ಕಂಪನಿಯು ಹೊಂದಿದೆ. ಸಾಲವನ್ನು ವಿತರಿಸುವ ಮೊದಲು ನಿಮ್ಮ ವಿಮಾ ಪಾಲಿಸಿಯು ಪಕ್ವವಾಗಿದ್ದರೆ, ವಿಮಾ ಕಂಪನಿಯು ನಿಮ್ಮ ಮೊತ್ತದಿಂದ ಸಾಲದ ಮೊತ್ತವನ್ನು ಕಡಿತಗೊಳಿಸಬಹುದು.


ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ : 
ನೀವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಪಾಲಿಸಿಯ ಬದಲಾಗಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.ಆಫ್‌ಲೈನ್‌ಗಾಗಿ ನೀವು LIC ಕಚೇರಿಗೆ ಹೋಗಿ KYC ದಾಖಲೆಗಳೊಂದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಎಲ್‌ಐಸಿಯ ಇ-ಸೇವೆಗಳಿಗೆ ಅರ್ಜಿ ಸಲ್ಲಿಸಿ. ನಂತರ ನಿಮ್ಮ ಖಾತೆಗೆ ಲಾಗಿನ್ ಮಾಡಿ.ನಂತರ ನೀವು ವಿಮಾ ಪಾಲಿಸಿಯ ಮೇಲೆ ಸಾಲವನ್ನು ಪಡೆಯಲು ಅರ್ಹರಾಗಿದ್ದೀರಾ ಎಂಬುದನ್ನು ಪರಿಶೀಲಿಸಿ. ಎಲ್ಲಾ ವಿವರಗಳನ್ನು ಓದಿದ ನಂತರ KYC ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ