ನವದೆಹಲಿ: ಸಾಮಾನ್ಯವಾಗಿ ನಮಗೆಲ್ಲರಿಗೂ ಕೆಲ ಅತ್ಯಗತ್ಯ ಕೆಲಸಗಳಿಗೆ ಹಣಕಾಸಿನ ಅಗತ್ಯ ಬಂದೆ ಬರುತ್ತದೆ ಮತ್ತು ಆಗ ನಮ್ಮ ಬಳಿ ಹಣ ಇರುವುದಿಲ್ಲ.  ಮಕ್ಕಳ ಶಿಕ್ಷಣ, ಮದುವೆ ಅಥವಾ ವೈದ್ಯಕೀಯ ವೆಚ್ಚಗಳು ಇತ್ಯಾದಿ. ಇಂತಹ ಪರಿಸ್ಥಿತಿಯಲ್ಲಿ, ನಾವು ಸ್ನೇಹಿತರ ಸಹಾಯವನ್ನು ಪಡೆದುಕೊಳ್ಳುತ್ತೇವೆ, ಆದರೆ ಅದಕ್ಕೂ ಒಂದು ಮಿತಿ ಇದೆ. ವೈಯಕ್ತಿಕ ಸಾಲದಂತಹ ಸಾಲಕ್ಕೆ ಷರತ್ತು-ನಿಯಮಗಳು ಕಟ್ಟುನಿಟ್ಟಾಗಿರುತ್ತವೆ ಮತ್ತು ಬಡ್ಡಿ ದರವೂ ತುಂಬಾ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ತೊಂದರೆಯಿಲ್ಲದೆ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸುವ ಒಂದು ಸಾಲದ ವಿಧಾನ ಇದೆ. ಅದನ್ನು ಪಡೆದುಕೊಳ್ಳಲು CIBIL ಸಿಬಿಲ್ ಸ್ಕೋರ್ ನ ಅಗತ್ಯತೆ ಬೀಳುವುದಿಲ್ಲ, ಆದಾಯದ ಪುರಾವೆಗಳ ಅಗತ್ಯವೂ ಬೀಳುವುದಿಲ್ಲ ಮತ್ತು ಅದರ ಬಡ್ಡಿದರವೂ ತುಂಬಾ ಕಡಿಮೆಯಾಗಿರುತ್ತದೆ. ನಾವು ಹೇಳುತ್ತಿರುವುದು ಚಿನ್ನದ ಸಾಲದ ಬಗ್ಗೆ. .


COMMERCIAL BREAK
SCROLL TO CONTINUE READING

ಚಿನ್ನದ ಸಾಲ ಎಂದರೇನು?
ಚಿನ್ನದ ಸಾಲವನ್ನು ಸಾಮಾನ್ಯವಾಗಿ ಅಲ್ಪಾವಧಿಯ ಅಗತ್ಯಗಳಿಗಾಗಿ ತೆಗೆದುಕೊಳ್ಳಲಾಗುತ್ತದೆ. ಮಕ್ಕಳ ಮದುವೆ, ಶಿಕ್ಷಣ ಮತ್ತು ಕುಟುಂಬದಲ್ಲಿ ಯಾವುದೇ ತುರ್ತು ಪರಿಸ್ಥಿತಿ ನಿಭಾಯಿಸಲು ಈ ಸಾಲ ಪಡೆಯಲಾಗುತ್ತದೆ. ಸಾಮಾನ್ಯವಾಗಿ ಚಿನ್ನದ ಸಾಲದ ಮೇಲಿನ ಬಡ್ಡಿ ದರವು 10% ಕ್ಕಿಂತ ಕಡಿಮೆ ಇರುತ್ತದೆ. ಏಕೆಂದರೆ, ಈ ಸಾಲವು ಬ್ಯಾಂಕುಗಳು ಮತ್ತು NBFC ಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಸಾಲ ಪಡೆಯಲು ಮನೆಯಲ್ಲಿ ಇಟ್ಟಿರುವ ಚಿನ್ನವನ್ನು ಆದವು ಇರಿಸಬೇಕು, ಇದರಲ್ಲಿ ಯಾವುದೇ ತೊಂದರೆಯಿಲ್ಲ, ಏಕೆಂದರೆ ಬ್ಯಾಂಕ್‌ನಲ್ಲಿರುವ ಚಿನ್ನವು ಮನೆಗಿಂತ ಸುರಕ್ಷಿತವಾಗಿರುತ್ತದೆ.


ಇದನ್ನೂ ಓದಿ-ಆರೋಗ್ಯ ವಿಮೆ ಹೊಂದಿದವರಿಗೊಂದು ಗುಡ್ ನ್ಯೂಸ್, ಬದಲಾಗಲಿದೆ ಈ ನಿಯಮ!


ಚಿನ್ನದ ಸಾಲಕ್ಕೆ CIBIL ಸ್ಕೋರ್ ತೋರಿಸುವ ಅಗತ್ಯವಿಲ್ಲ
ಚಿನ್ನದ ಸಾಲ ಪಡೆಯಲು CIBIL ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿಲ್ಲ. ನಿಮ್ಮ CIBIL ಸ್ಕೋರ್ ಸರಿಯಾಗಿಲ್ಲದಿದ್ದರೂ ಕೂಡ ನೀವು ಈ ಸಾಲವನ್ನು ಪಡೆದುಕೊಳ್ಳಬಹುದು. ಆದಾಗ್ಯೂ, ಈ ಸಾಲದ ಮೂಲಕ ನೀವು ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡುವ ಮೂಲಕ ನಿಮ್ಮ CIBIL ಅನ್ನು ಸುಧಾರಿಸಬಹುದು. ಚಿನ್ನದ ಸಾಲ ತಕ್ಷಣವೇ ಸಿಗುತ್ತದೆ. ಸಾಲವನ್ನು ಪಡೆಯಲು ಗರಿಷ್ಠ 1-2 ದಿನಗಳ ಸಮಯ ಬೇಕಾಗುತ್ತದೆ.  ಚಿನ್ನದ ಸಾಲದ ಅಡಿಯಲ್ಲಿ, 50 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಈ ಸಾಲವನ್ನು ಬಳಸಬಹುದು.


ಇದನ್ನೂ ಓದಿ-ಇನ್ಮುಂದೆ ಈ ಜನರಿಗೆ ಸಿಗಲ್ಲ ಉಚಿತ ಪಡಿತರ, ಸರ್ಕಾರದ ಮಹತ್ವದ ಘೋಷಣೆ!


ಚಿನ್ನದ ಸಾಲದ ಮೇಲಿನ ಬಡ್ಡಿ ದರ ಎಷ್ಟು?
ಸಾಮಾನ್ಯವಾಗಿ, ಚಿನ್ನದ ಸಾಲಕ್ಕೆ ಶೇಕಡಾ 10-11 ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಮತ್ತು ಅದನ್ನು ಒಂದರಿಂದ ಮೂರು ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಪ್ರತಿ ಗ್ರಾಂ ಚಿನ್ನಕ್ಕೆ ಸುಮಾರು 2000 ರೂ ಸಾಲ ಲಭ್ಯವಿದೆ. ಚಿನ್ನದ ಪರಿಶುದ್ಧತೆಗೆ ಅನುಗುಣವಾಗಿ ಈ ಪ್ರಮಾಣ ಹೆಚ್ಚು ಕಡಿಮೆ ಆಗಬಹುದು. ಬಹುತೇಕ ಎಲ್ಲಾ ಸರ್ಕಾರಿ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಚಿನ್ನದ ಸಾಲಗಳನ್ನು ಒದಗಿಸುತ್ತವೆ ಮತ್ತು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಯಾವುದೇ ಪ್ರತಿಷ್ಠಿತ ಸಂಸ್ಥೆಯನ್ನು ಆಯ್ಕೆ ಮಾಡಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.