Lok Sabha Election 2024: ಚುನಾವಣೆ ಹಿನ್ನೆಲೆ ಚಾರ್ಟರ್ಡ್ ವಿಮಾನಗಳ ಬೇಡಿಕೆ ಹೆಚ್ಚಳ, ಗಂಟೆಗೆ ಹೆಲಿಕ್ಯಾಪ್ಟರ್ ಬಾಡಿಗೆ ಎಷ್ಟು ಗೊತ್ತಾ?
Lok Sabha Election 2024: ಲೋಕಸಭೆ ಚುನಾವಣೆಗಾಗಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ದೇಶಾದ್ಯಂತ ಪ್ರವಾಸ ಮಾಡುತ್ತಿದ್ದು, ಈ ಕಾರಣದಿಂದಾಗಿ ಚಾರ್ಟರ್ಡ್ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಬೇಡಿಕೆಯು ಶೇಕಡಾ 40 ರಷ್ಟು ಹೆಚ್ಚಾಗಿದೆ.
Lok Sabha Elections 2024: ಲೋಕಸಭೆ ಚುನಾವಣೆಗಾಗಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ದೇಶಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ, ಇದರಿಂದಾಗಿ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಬೇಡಿಕೆಯು ಶೇಕಡಾ 40 ರಷ್ಟು ಹೆಚ್ಚಾಗಿದೆ. ತಜ್ಞರ ಪ್ರಕಾರ, ಖಾಸಗಿ ವಿಮಾನಗಳು ಮತ್ತು ಹೆಲಿಕಾಪ್ಟರ್ ಆಪರೇಟರ್‌ಗಳು ಇದರಿಂದ ಶೇ. 15-20 ರಶು ಹೆಚ್ಚು ಗಳಿಸುವ ನಿರೀಕ್ಷೆಯಿದೆ. ಚಾರ್ಟರ್ಡ್ ಸೇವೆಗಳ ಗಂಟೆಯ ದರವೂ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಚಾರ್ಟರ್ಡ್ ಫ್ಲೈಟ್ ಬುಕ್ ಮಾಡಲು ಎಷ್ಟು ವೆಚ್ಚವಾಗುತ್ತದೆ?
ಒಂದು ವಿಮಾನದ ಶುಲ್ಕ ಸುಮಾರು 4.5 - 5.25 ಲಕ್ಷ ಮತ್ತು ಅವಳಿ ಎಂಜಿನ್ ಹೆಲಿಕಾಪ್ಟರ್‌ಗೆ ಇದು ಸುಮಾರು 1.5 - 1.7 ಲಕ್ಷ ರೂ.ಗಲಾಗಿದೆ. ಸಾಮಾನ್ಯ ಸಮಯ ಮತ್ತು ಹಿಂದಿನ ಚುನಾವಣಾ ವರ್ಷಗಳಿಗೆ ಹೋಲಿಸಿದರೆ ಬೇಡಿಕೆ ಹೆಚ್ಚಿದ್ದರೂ, ಸ್ಟೇಬಲ್ ವಿಂಗ್ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಲಭ್ಯತೆ ಕಡಿಮೆ ಸಂಖ್ಯೆಯಲ್ಲಿದೆ. ಕೆಲವು ನಿರ್ವಾಹಕರು ಇತರ ಕಂಪನಿಗಳಿಂದ ವಿಮಾನ ಮತ್ತು ಹೆಲಿಕಾಪ್ಟರ್ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ನೋಡುತ್ತಿದ್ದಾರೆ.
ಹೆಲಿಕಾಪ್ಟರ್‌ಗಳ ಬೇಡಿಕೆ ಹೆಚ್ಚಿದೆ ಮತ್ತು ಸಾಮಾನ್ಯ ಅವಧಿಗೆ ಹೋಲಿಸಿದರೆ ಚುನಾವಣಾ ಅವಧಿಯಲ್ಲಿ ಶೇ.25 ರಷ್ಟು ಹೆಚ್ಚಿದೆ. ಬೇಡಿಕೆಗಿಂತ ಪೂರೈಕೆ ಕಡಿಮೆಯಾಗಿದೆ ಎಂದು ರೋಟರಿ ವಿಂಗ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ (ಪಶ್ಚಿಮ ವಲಯ) ಕ್ಯಾಪ್ಟನ್ ಉದಯ್ ಗೆಲಿ ಹೇಳಿದ್ದಾರೆ. (RWSI)
ಈ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇದೆ
ಸಾಮಾನ್ಯವಾಗಿ, ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳು ಮತ್ತು ನಾಯಕರನ್ನು ವಿವಿಧ ಸ್ಥಳಗಳಿಗೆ, ವಿಶೇಷವಾಗಿ ದೂರದ ಪ್ರದೇಶಗಳಿಗೆ ಕಡಿಮೆ ಸಮಯದಲ್ಲಿ ತಲುಪಲು ಹೆಲಿಕಾಪ್ಟರ್‌ಗಳನ್ನು ಬಳಸುತ್ತವೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ದೊಡ್ಡ ರಾಜ್ಯಗಳಲ್ಲಿ ಹೆಲಿಕಾಪ್ಟರ್‌ಗಳ ಬಳಕೆ ಹೆಚ್ಚು ಕಾಣುತ್ತಿದೆ ಎಂದು ಗೇಲಿ ಹೇಳಿದ್ದಾರೆ.
40ರಷ್ಟು ಬೇಡಿಕೆ ಹೆಚ್ಚಿದೆ
ಈ ಕುರಿತು ಮಾತನಾಡಿರುವ ಬಿಸಿನೆಸ್ ಏರ್‌ಕ್ರಾಫ್ಟ್ ಆಪರೇಟರ್ಸ್ ಅಸೋಸಿಯೇಷನ್‌ನ (ಬಿಎಒಎ) ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಆರ್‌ಕೆ ಬಾಲಿ, ಕಳೆದ ಸಾರ್ವತ್ರಿಕ ಚುನಾವಣೆಗಳಿಗಿಂತ ಚಾರ್ಟರ್ಡ್ ವಿಮಾನಗಳ ಬೇಡಿಕೆ ಶೇಕಡಾ 30-40 ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ-HRA Hike: ಕೇಂದ್ರ ಸರ್ಕಾರಿ ನೌಕರರಿಗೆ ಬಂಬಾಟ್ ಲಾಟರಿ, DA ಹೆಚ್ಚಳದ ಬಳಿಕ HRA ಸರದಿ, 12,500 ರೂ.ಗಳ ಲಾಭ!
"ಸಾಮಾನ್ಯವಾಗಿ ಸಿಂಗಲ್ ಇಂಜಿನ್ ಹೆಲಿಕಾಪ್ಟರ್‌ಗಳಿಗೆ ಗಂಟೆಯ ದರ ಸುಮಾರು 80,000 ರಿಂದ 90,000 ರೂ.ಗಳಷ್ಟಿದ್ದರೆ, ಅವಳಿ ಎಂಜಿನ್ ಹೆಲಿಕಾಪ್ಟರ್‌ಗಳಿಗೆ ಇದು ಸುಮಾರು 1.5 ರಿಂದ 1.7 ಲಕ್ಷ ರೂಪಾಯಿಗಳಷ್ಟಿದೆ" ಎಂದು ಗೇಲಿ ಹೇಳಿದ್ದಾರೆ. ಇಂಜಿನ್ ಹೆಲಿಕಾಪ್ಟರ್‌ನ ಬೆಲೆ ಸುಮಾರು 1.5 ಲಕ್ಷ ರೂಪಾಯಿ ಮತ್ತು ಎರಡು ಇಂಜಿನ್ ಹೆಲಿಕಾಪ್ಟರ್‌ಗೆ 3.5 ಲಕ್ಷ ರೂಪಾಯಿ ಗಳಾಗಿದೆ.
ಇದನ್ನೂ ಓದಿ-Fixed Deposit ವಿಶೇಷ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡ SBI
ಸಿಂಗಲ್ ಇಂಜಿನ್ ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ ಏಳು ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿದ್ದರೆ, ಅವಳಿ ಇಂಜಿನ್ ಹೆಲಿಕಾಪ್ಟರ್‌ನಲ್ಲಿ 12 ಜನರು ಕುಳಿತುಕೊಳ್ಳುವ ಸಾಮರ್ಥ್ಯವಿರುತ್ತದೆ. ಚಾರ್ಟರ್ಡ್ ವಿಮಾನದ ದರವು ಗಂಟೆಗೆ 4.5 ಲಕ್ಷದಿಂದ 5.25 ಲಕ್ಷದವರೆಗೆ ಇರುತ್ತದೆ. ಚುನಾವಣೆಯ ಅವಧಿಯಲ್ಲಿ, ಚಾರ್ಟರ್ಡ್ ಏರ್ ಆಪರೇಟರ್‌ಗಳ ಗಳಿಕೆಯು ಸಾಮಾನ್ಯ ಸಮಯಕ್ಕಿಂತ 15-20 ಪ್ರತಿಶತದಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬಾಲಿ ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ