Aadhaar Card: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ರೈಲ್ವೆ ಟಿಕೆಟ್ ಬುಕ್ ಮಾಡುವುದರಿಂದ ಹಿಡಿದು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಬೇಕೇ ಬೇಕು. ಇಂತಹ ಸಂದರ್ಭದಲ್ಲಿ ಭೌತಿಕ ಆಧಾರ್ ಕಾರ್ಡ್ ಕಳೆದು ಹೋದರೆ ಚಿಂತೆಯಾಗುವುದು ಸಹಜವೇ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಆಧಾರ್ ವ್ಯಕ್ತಿಯ ಪ್ರತಿಯೊಂದು ಮಾಹಿತಿಯನ್ನೂ ಒಳಗೊಂಡಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಧಾರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಧಾರ್ ಕಳೆದುಹೋದರೆ ಭಯವಾಗುವುದು ಸಹಜವೇ. 


ಇದನ್ನೂ ಓದಿ- ಸಾರ್ವಜನಿಕ ಭವಿಷ್ಯ ನಿಧಿಯ 5 ಸಂಗತಿಗಳ ಬಗ್ಗೆ ಗೊತ್ತಿದೆಯೇ? ಹಾಗಾದ್ರೇ ನೀವು ನಂಬಿಕೆದ PPF ನಲ್ಲಿ ಹೂಡಿಕೆ ಮಾಡಬಹುದು!


ಆಧಾರ್ ಕಾರ್ಡ್ ಕಳೆದು ಹೋದರೆ ತಲೆ ಮೇಲೆ ಕೈಹೊತ್ತು ಕೂರುವ ಬದಲಿಗೆ ಮೊದಲು ಯುಐಡಿಎಐಯ  ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ. ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ ಈ ಬಗ್ಗೆ ದೂರು ನೀಡಿ. ಇದರಿಂದ ನಿಮ್ಮ ಆಧಾರ್ ಅನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಬಹುದು. 


ಇದನ್ನೂ ಓದಿ- ದೇಶಾದ್ಯಂತದ ಅನ್ನದಾತರಿಗೆ ಕೃಷಿ ಸಚಿವರ ಉಡುಗೊರೆ, ಈ ದಿನ ಖಾತೆಗೆ ಬರಲಿದೆ ಪಿಎಂ ಕಿಸಾನ್ 15ನೇ ಕಂತು!


ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಿದ ನಂತರ ನೀವು ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಬಳಸಬಹುದಾದ ನಿಮ್ಮ ಆಧಾರ್ ಕಾರ್ಡ್‌ನ PVC ನಕಲನ್ನು ಆರ್ಡರ್ ಮಾಡಲು ಸರಳ ಹಂತಗಳನ್ನು ಅನುಸರಿಸಿ. ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದು ಇಲ್ಲಿದೆ 


ಹಂತ- 1: ಆಧಾರ್ ಕಳೆದುಹೋದ ಸಂದರ್ಭದಲ್ಲಿ, ಮೊದಲು https://uidai.gov.in/ ಗೆ ಭೇಟಿ ನೀಡಿ.
ಹಂತ- 2: ಇಲ್ಲಿ ನನ್ನ ಆಧಾರ್ (my aadhaar) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ- 3: ಇದರ ನಂತರದ ಪರದೆಯ ಮೇಲೆ ಕಾಣಿಸಿಕೊಳ್ಳುವ ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಆರ್ಡರ್ ಮಾಡಿ ಎಂಬ ಆಯ್ಕೆಯನ್ನು ಆರಿಸಿ.  
ಹಂತ- 4: ನಿಗದಿತ ಜಾಗದಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ. ಮುಂದುವರೆಯಿರಿ ಆಯ್ಕೆಯನ್ನು ಆರಿಸಿ. 
ಹಂತ- 5: ಮುಂದಿನ ಪರದೆಯಲ್ಲಿ ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಬಳಿಕ ಸೇವ್ ಮಾಡಿ. 
ಹಂತ- 6: ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓ‌ಟಿ‌ಪಿ ಕಳುಹಿಸಲಾಗುತ್ತದೆ, ಅದನ್ನು ನಿಗದಿತ ಜಾಗದಲ್ಲಿ ನಮೂದಿಸಿ.
ಹಂತ- 7: ಮೇಲಿನ ಹಂತಗಳು ಪೂರ್ಣಗೊಂಡ ನಂತರ ಹೊಸ ಪಿವಿಸಿ ಆಧಾರ್ ಕಾರ್ಡ್ ಗಾಗಿ 50 ರೂ. ಶುಲ್ಕವನ್ನು ಪಾವತಿಸಿ. ನೀವು ಈ PVC ಆಧಾರ್ ಕಾರ್ಡ್ ಅನ್ನು 15 ದಿನಗಳಲ್ಲಿ ಪಡೆಯುತ್ತೀರಿ.
ಹಂತ- 8: ಪಾವತಿ ಪೂರ್ಣಗೊಂಡ ನಂತರ ದೃಢೀಕರಣ ಸಂದೇಶ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ನೀವು ಒಂದು ಐಡಿ ಸಂಖ್ಯೆಯನ್ನು ಪಡೆಯುತ್ತೀರಿ. 
ಹಂತ- 9: ಈ ಐಡಿ ಸಂಖ್ಯೆಯನ್ನು ಬಳಸಿ ನಿಮ್ಮ ಆಧಾರ್ ಸ್ಥಿತಿಯನ್ನು ಪರಿಶೀಲಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.