ATM Block: ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ಬಂಧಿಸುವುದು ಹೇಗೆ? ಈ ಸುಲಭ ಟಿಪ್ಸ್ ಫಾಲೋ ಮಾಡಿ..!
Block Debit/Credit Card: ನಿಮ್ಮ ಎಟಿಎಂ (ಡೆಬಿಟ್/ಕ್ರೆಡಿಟ್) ಕಾರ್ಡ್ ಕಳೆದು ಹೋಗಿದ್ದರೆ ಮೋಸ ಹೋಗುವುದನ್ನು ತಪ್ಪಿಸಲು ಆ ಕಾರ್ಡ್‌ಗಳನ್ನು ನಿರ್ಬಂಧಿಸುವುದು ಉತ್ತಮ ಆಯ್ಕೆಯಾಗಿದೆ.
How To Block Block Debit/Credit Card: ಮೊದಲೆಲ್ಲಾ ಹಣಕಾಸಿನ ವ್ಯವಹಾರಗಳಿಗೆ ಬ್ಯಾಂಕ್‌ಗೆ ಹೋಗಬೇಕಿತ್ತು. ಎಟಿಎಂಗಳು ಬಂದ ಬಳಿಕ ಈ ಕೆಲಸ ಇನ್ನಷ್ಟು ಸುಲಭವಾಯಿತು. ಆದರೀಗ ತಂತ್ರಜ್ಞಾನ ಮುಂದುವರೆದಂತೆ ಬಹುತೇಕ ಕೆಲಸಗಳನ್ನು ಆನ್‌ಲೈನ್‌ನಲ್ಲಿಯೇ ಪೂರ್ಣಗೊಳಿಸಬಹುದು. ಆದಾಗ್ಯೂ, ಆನ್‌ಲೈನ್ ವಹಿವಾಟುಗಳನ್ನು ನಡೆಸಲು ಹಾಗೂ ಹಣವನ್ನು ಹಿಂಪಡೆಯಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು ಬೇಕೇ ಬೇಕು. ಆದರೆ, ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು (Credit/Debit Cards) ಯಾರಾದರೂ ಕದ್ದಿದ್ದರೆ, ಇಲ್ಲವೇ ಎಲ್ಲಾದರೂ ನೀವು ಅದನ್ನು ಮಿಸ್ ಮಾಡಿಕೊಂಡಿದ್ದರೆ ಮೊದಲು ಅದನ್ನು ನಿರ್ಬಂಧಿಸುವುದು ಬಹಳ ಮುಖ್ಯ.
ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ (How to Block Credit/Debit Cards)?
ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಕಳೆದುಹೋಗಿದ್ದರೆ (Lost Debit or Credit Card) ಅದನ್ನು ತಕ್ಷಣವೇ ನಿರ್ಬಂಧಿಸುವುದು ಉತ್ತಮ. ಇಲ್ಲದಿದ್ದರೆ, ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ನೀವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ನಿರ್ಬಂಧಿಸಬಹುದು.
ಆಫ್‌ಲೈನ್‌ನಲ್ಲಿ ಕಾರ್ಡ್ ನಿರ್ಬಂಧಿಸಲು ಏನು ಮಾಡಬೇಕು? (What to do to block card offline):
ನಿಮ್ಮ ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ನೀವು ಡೆಬಿಟ್/ಕ್ರೆಡಿಟ್ ಕಾರ್ಡ್ (Debit/Credit Card) ಅನ್ನು ಆಫ್‌ಲೈನ್‌ನಲ್ಲಿ ನಿರ್ಬಂಧಿಸಬಹುದು.
ಇದನ್ನೂ ಓದಿ- Gruha Lakshmi: ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ: ಈ ದಿನ ಖಾತೆ ಸೇರಲಿದೆ ಗೃಹಲಕ್ಷ್ಮಿ ಹಣ
ಆನ್‌ಲೈನ್‌ನಲ್ಲಿ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ? (How to block a card online?)
ಆನ್‌ಲೈನ್‌ನಲ್ಲಿ ಮಾಡುವಾಗ ನಿಮ್ಮ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಕಾರ್ಡ್‌ಗಳನ್ನು ನಿರ್ಬಂಧಿಸಬಹುದು. ಕೆಲವು ಬ್ಯಾಂಕ್‌ಗಳು ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ಅಥವಾ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಕಾರ್ಡ್‌ಗಳನ್ನು ನಿರ್ಬಂಧಿಸಲು ಸಹಾಯ ಮಾಡುತ್ತವೆ.
ನೆಟ್ ಬ್ಯಾಂಕಿಂಗ್ ಮೂಲಕ ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವ ಪ್ರಕ್ರಿಯೆ (Debit/Credit card blocking process through net banking) :-
>> ನೆಟ್ ಬ್ಯಾಂಕಿಂಗ್ (Net Banking) ಮತ್ತು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ತೆರೆಯಿರಿ
>> ಇದರಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ವಿವರಗಳ ವಿಭಾಗಕ್ಕೆ ಹೋಗಿ.
>> ಇಲ್ಲಿ ಕಾರ್ಡ್ ಅನ್ನು ನಿರ್ಬಂಧಿಸುವ ಆಯ್ಕೆಯನ್ನು ಆರಿಸಿ.
>> ನಿಗದಿತ ಬಾಕ್ಸ್ ನಲ್ಲಿ ಕಾರ್ಡ್ ಅನ್ನು ನಿರ್ಬಂಧಿಸುವ ಕಾರಣಗಳನ್ನು ನಮೂದಿಸಿ.
>> ಅಂತಿಮವಾಗಿ ಸಲ್ಲಿಸು ಎಂಬ ಆಯ್ಕೆಯನ್ನು ಆರಿಸಿ. ಇದರಲ್ಲಿ ಮತ್ತೊಮ್ಮೆ ದೃಢೀಕರಣವನ್ನು ಕೇಳಲಾಗುತ್ತದೆ. ಆಗ ದೃಢೀಕರಿಸಿದರೆ ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುತ್ತದೆ.
ಇದನ್ನೂ ಓದಿ- ದೇಶದ ಅತ್ಯಂತ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಬಳಸುವುದು ಮಾತ್ರ ಈ ಫೋನ್ !ಇದೇ ಆಯ್ಕೆ ಯಾಕೆ ಗೊತ್ತಾ ?
ಎಸ್‌ಎಮ್‌ಎಸ್ ಮೂಲಕ ಕ್ರೆಡಿಟ್/ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಎಸ್‌ಎಮ್‌ಎಸ್ ಮೂಲಕವೂ ನಿರ್ಬಂಧಿಸಬಹುದು. ಇದಕ್ಕಾಗಿ ನಿಮ್ಮ ಬ್ಯಾಂಕ್ ಒದಗಿಸಿದ ಸಂಖ್ಯೆಗೆ ನಿಗದಿತ ಸ್ವರೂಪದ ಪ್ರಕಾರ ಎಸ್‌ಎಮ್‌ಎಸ್ ಕಳುಹಿಸಬೇಕು. ಕಾರ್ಡ್ ಅನ್ನು ನಿರ್ಬಂಧಿಸಿದ ನಂತರ ಬ್ಯಾಂಕ್ ದೃಢೀಕರಣ ಸಂದೇಶವನ್ನು ಕಳುಹಿಸುತ್ತದೆ.
ಕರೆ ಮಾಡಿ ಕ್ರೆಡಿಟ್/ಡೆಬಿಟ್ ಕಾರ್ಡ್ ನಿರ್ಬಂಧಿಸುವುದು ಹೇಗೆ?
ಗ್ರಾಹಕರು ಬ್ಯಾಂಕ್‌ನ ಟೋಲ್ ಫ್ರೀ ಫೋನ್ ಬ್ಯಾಂಕಿಂಗ್ ಸಂಖ್ಯೆಗೆ ಕರೆ ಮಾಡುವ ಮೂಲಕವೂ ಕೂಡ ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಸುಲಭವಾಗಿ ಬ್ಲಾಕ್ ಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.