LPG Cylinder Price : ಮಾರ್ಚ್ ಮೊದಲ ದಿನವೇ ಮತ್ತೆ ಗಗನಕ್ಕೇರಿದ ಅಡುಗೆ ಅನಿಲ ದರ
LPG Cylinder Price : ಮಾರ್ಚ್ 1 ದೊಡ್ಡ ಹಿನ್ನಡೆಯೊಂದಿಗೆ ಪ್ರಾರಂಭವಾಯಿತು, ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆ (LPG Cylinder Price) ಪ್ರತಿ ಸಿಲಿಂಡರ್ಗೆ 25 ರೂ. ಹೆಚ್ಚಳವಾಗಿದೆ.
LPG Cylinder Price Today: ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆ (LPG Cylinder Price) ಪ್ರತಿ ಸಿಲಿಂಡರ್ಗೆ 25 ರೂ. ಹೆಚ್ಚಳವಾಗಿದ್ದು ತಿಂಗಳ ಮೊದಲ ದಿನವೇ ಜನಸಾಮಾನ್ಯರಿಗೆ ಭಾರೀ ಹಿನ್ನಡೆಯಾದಂತಾಗಿದೆ. ಕಳೆದ ತಿಂಗಳು, ಅಂದರೆ ಫೆಬ್ರವರಿಯಲ್ಲಿ, ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು 3 ಪಟ್ಟು ಹೆಚ್ಚಿಸಲಾಗಿದೆ, ಫೆಬ್ರವರಿ ಒಂದೇ ತಿಂಗಳಲ್ಲಿ ಸಿಲಿಂಡರ್ 100 ರೂ.ಗಳಷ್ಟು ದುಬಾರಿಯಾಗಿದೆ, ಇಂದಿನ ಹೆಚ್ಚಳದೊಂದಿಗೆ ಕೇವಲ 26 ದಿನಗಳಲ್ಲಿ ಎಲ್ಪಿಜಿ 125ರೂ. ದುಬಾರಿಯಾಗಿದೆ.
ಎಲ್ಪಿಜಿ ಸಿಲಿಂಡರ್ 25 ರೂಪಾಯಿ ಹೆಚ್ಚಳ:
ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ನಂತರ 15 ನೇ ದಿನದಂದು ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಐಒಸಿ ಫೆಬ್ರವರಿಯಲ್ಲಿ ಮೂರು ಬಾರಿ 14.2 ಕೆಜಿ ಎಲ್ಪಿಜಿಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದೆ. ಮೊದಲು ಫೆಬ್ರವರಿ 4 ರಂದು, ಎರಡನೇ ಬಾರಿಗೆ ಫೆಬ್ರವರಿ 14 ರಂದು ಮತ್ತು ಮೂರನೇ ಬಾರಿಗೆ ಫೆಬ್ರವರಿ 25 ರಂದು ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಯಿತು. ಇಂದು, ಎಲ್ಪಿಜಿ ಸಿಲಿಂಡರ್ ಅನ್ನು ಮಾರ್ಚ್ ಮೊದಲ ದಿನಾಂಕದಂದು 25 ರೂ. ಹೆಚ್ಚಿಸಲಾಗಿದೆ.
ಎಲ್ಪಿಜಿ ಸಿಲಿಂಡರ್ ಹೊಸ ಬೆಲೆಗಳು ;
ದೆಹಲಿಯಲ್ಲಿ, ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ (LPG Cylinder) ಈಗ 25 ರೂ. ಹೆಚ್ಚಳಗೊಂಡು 819 ರೂ.ಗೆ ತಲುಪಿದೆ. ಈ ಮೊದಲು ಅದು 794 ರೂ.ಗೆ ಲಭ್ಯವಿತ್ತು. ಅದೇ ರೀತಿ ಮುಂಬೈನಲ್ಲೂ ಎಲ್ಪಿಜಿ ಸಿಲಿಂಡರ್ಗಳಿಗೆ 819 ರೂಪಾಯಿ ಪಾವತಿಸಬೇಕಾಗುತ್ತದೆ. ಕೋಲ್ಕತಾದಲ್ಲಿ ಎಲ್ಪಿಜಿ ಸಿಲಿಂಡರ್ಗೆ ಗರಿಷ್ಠ 845.50 ರೂ., ಚೆನ್ನೈನಲ್ಲಿ ಗ್ರಾಹಕರು ಎಲ್ಪಿಜಿ ಸಿಲಿಂಡರ್ಗೆ 835 ರೂ. ಪಾವತಿಸ ಬೇಕಾಗುತ್ತದೆ.
ಇದನ್ನೂ ಓದಿ - LPG cylinder ಮತ್ತೆ ದುಬಾರಿ, ಮಾರ್ಚ್ 1ರಿಂದ ಏನೆಲ್ಲಾ ಬದಲಾಗಲಿದೆ ಎಂದು ತಪ್ಪದೇ ತಿಳಿಯಿರಿ
ನಗರ | ಮಾರ್ಚ್ 1 ರಿಂದ ಅನ್ವಯಿಸಲಿರುವ ಹೊಸ ದರ |
ದೆಹಲಿ | 819 |
ಮುಂಬೈ | 819 |
ಕೋಲ್ಕತಾ | 845.50 |
ಚೆನ್ನೈ | 835 |
ಫೆಬ್ರವರಿಯಲ್ಲಿ ಬೆಲೆಗಳನ್ನು ಮೂರು ಬಾರಿ ಹೆಚ್ಚಿಸಲಾಯಿತು :
ಎಲ್ಪಿಜಿ (LPG) ಸಿಲಿಂಡರ್ಗಳ ಬೆಲೆಯನ್ನು ಡಿಸೆಂಬರ್ನಲ್ಲಿ ಎರಡು ಬಾರಿ ಹೆಚ್ಚಿಸಲಾಯಿತು. ಡಿಸೆಂಬರ್ 1 ರಂದು ಅದರ ದರವನ್ನು 594 ರೂ.ಗಳಿಂದ 644 ರೂ.ಗೆ ಹೆಚ್ಚಿಸಲಾಯಿತು ಮತ್ತು ನಂತರ ಡಿಸೆಂಬರ್ 15 ರಂದು ಮತ್ತೆ ಅದರ ಬೆಲೆಯನ್ನು 694 ರೂ.ಗೆ ಹೆಚ್ಚಿಸಲಾಯಿತು. ಅಂದರೆ, ಒಂದು ತಿಂಗಳಲ್ಲಿ 100 ರೂಪಾಯಿಗಳ ಹೆಚ್ಚಳ ಕಂಡುಬಂದಿದೆ. ಆದರೆ ಜನವರಿಯಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿಲ್ಲ. ಜನವರಿಯಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ (14.2 ಕೆಜಿ) ಬೆಲೆ 694 ರೂ. ಗೆ ಮಾರಾಟವಾಗುತ್ತಿತ್ತು.
ಇದನ್ನೂ ಓದಿ - ಈ ರೀತಿ ಸಿಲಿಂಡರ್ ಬುಕ್ ಮಾಡಿ, Cashback ಜೊತೆಗೆ ಕೇವಲ 94 ರೂ.ಗೆ ಖರೀದಿಸಿ LPG Cylinder
ಫೆಬ್ರವರಿ 1 ರಂದು ಬೆಲೆಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ, ಆದರೆ ಫೆಬ್ರವರಿ 4 ರಂದು ಅದರ ದರವನ್ನು ಮತ್ತೆ 719 ರೂಗಳಿಗೆ ಹೆಚ್ಚಿಸಲಾಯಿತು. ಅಂದರೆ, 25 ರೂಪಾಯಿಗಳ ಹೆಚ್ಚಳ ಕಂಡುಬಂದಿದೆ. ಮತ್ತು ಮತ್ತೊಮ್ಮೆ, ಎಲ್ಪಿಜಿಯ ಬೆಲೆಯನ್ನು 10 ದಿನಗಳಲ್ಲಿ 50 ರೂಪಾಯಿ ಹೆಚ್ಚಿಸಲಾಗಿದೆ. ಇದರ ನಂತರ, ಫೆಬ್ರವರಿ 25 ರಂದು ಅದರ ಬೆಲೆಯನ್ನು ಮತ್ತೆ 769 ರೂ.ಗಳಿಂದ 794 ರೂ.ಗೆ ಹೆಚ್ಚಿಸಲಾಯಿತು.
ಈ ರೀತಿಯ ಎಲ್ಪಿಜಿ ಬೆಲೆಯನ್ನು ಪರಿಶೀಲಿಸಿ :
ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಶೀಲಿಸಲು, ನೀವು ಸರ್ಕಾರಿ ತೈಲ ಕಂಪನಿ ಐಒಸಿಯ ವೆಬ್ಸೈಟ್ಗೆ ಹೋಗಬೇಕಾಗುತ್ತದೆ. ಇಲ್ಲಿ ಕಂಪನಿಯು ಪ್ರತಿ ತಿಂಗಳು ಹೊಸ ದರಗಳನ್ನು ಬಿಡುಗಡೆ ಮಾಡುತ್ತದೆ. https://iocl.com/Products/IndaneGas.aspx ಈ ಲಿಂಕ್ನಲ್ಲಿ ನಿಮ್ಮ ನಗರ ಅನಿಲ ಸಿಲಿಂಡರ್ನ ಬೆಲೆಯನ್ನು ನೀವು ಪರಿಶೀಲಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.