ನವದೆಹಲಿ : LPG Price: 2021-22 ರ ಸಾಲಿನ ಬಜೆಟ್ ಅನ್ನು ಈಗಾಗಲೇ ಮಂಡಿಸಲಾಗಿದೆ.  ಬಜೆಟ್ (Budget) ಬಗೆಗಿನ ಲಾಭ ನಷ್ಟದ ಲೆಕ್ಕಾಚಾರದಲ್ಲೇ ನೀವು ತೊಡಗಿದ್ದರೆ, ಇದೀಗ  ಎಲ್ ಪಿಜಿ (LPG) ಸಿಲಿಂಡರ್ ಬೆಲೆಯ ಬಗ್ಗೆ ಹೊಸ ಮಾಹಿತಿ ಬಂದಿದೆ. ಐಒಸಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಇನ್ನು ದುಬಾರಿ:
ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ ತಿಂಗಳ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು ಬಿಡುಗಡೆ ಮಾಡಿವೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (19 ಕೆಜಿ) ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 190 ರೂ. ಏರಿಸಲಾಗಿದೆ. ಆದರೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ (14.2 ಕೆಜಿ) ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ ಹೊಸ ದರಗಳು ಫೆಬ್ರವರಿ 1 ರಿಂದ ಜಾರಿಗೆ ಬಂದಿವೆ. ಡಿಸೆಂಬರ್‌ ತಿಂಗಳಲ್ಲಿ ಐಒಸಿ (IOC) ಗೃಹಬಳಕೆಯ ಎಲ್‌ಪಿಜಿಯ ಬೆಲೆಯನ್ನು ಎರಡು ಬಾರಿ ಹೆಚ್ಚಿಸಿತ್ತು.  ಈ ಹಿಂದೆ ಡಿಸೆಂಬರ್ 2 ರಂದು 50 ರೂಗಳನ್ನು ಹೆಚ್ಚಿಸಿದ್ದರೆ, ಡಿಸೆಂಬರ್ 15 ರಂದು ಮತ್ತೆ  50 ರೂಗಳನ್ನು ಏರಿಸಲಾಗಿತ್ತು.


ಇದನ್ನೂ ಓದಿ : ಉಚಿತವಾಗಿ LPG cylinder ಪಡೆಯಲು ಇಲ್ಲಿದೆ ಸುಲಭ ಮಾರ್ಗ


ಪ್ರಸಕ್ತ ಗೃಹ ಬಳಕೆಯ ಸಿಲಿಂಡರ್ ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ಮುಂದಿನ ತಿಂಗಳು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
 
ಎಲ್ ಪಿಜಿ ದರ ತಿಳಿದುಕೊಳ್ಳಲು ಹೀಗೆ ಮಾಡಿ :

ಒಂದೊಮ್ಮೆ ನಿಮ್ಮ ನಗರದಲ್ಲಿ ಅನಿಲ ಸಿಲಿಂಡರ್ ದರ (Gas rate) ಎಷ್ಟಿದೆ ಎನ್ನುವುದನ್ನು ಪರಿಸೀಲಿಸಬೇಕಾದರೆ ಹೀಗೆ ಮಾಡಬಹುದು. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಲು ನೀವು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ (Website) ಹೋಗಬೇಕಾಗುತ್ತದೆ. ಇಲ್ಲಿನ ಕಂಪನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಈ ಲಿಂಕ್‌ನಲ್ಲಿ, ನಿಮ್ಮ ನಗರದ ಅನಿಲ ಸಿಲಿಂಡರ್‌ನ ಬೆಲೆಯನ್ನು ನೀವು ಪರಿಶೀಲಿಸಬಹುದು.


ಇದನ್ನೂ ಓದಿ : Gold Price Today, 02 February 2021: ಚಿನ್ನದಲ್ಲಿ ಹೂಡಿಕೆಗೆ ಸುವರ್ಣಾವಕಾಶ, ಬೆಳ್ಳಿ ಬೆಲೆಯಲ್ಲಿಯೂ ಭಾರಿ ಕುಸಿತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.