LPG Price Hike : ಗೃಹಿಣಿಯರಿಗೆ ಬಿಗ್ ಶಾಕ್ .! ಮತ್ತೆ ಏರಿಕೆಯಾಯಿತು ಅಡುಗೆ ಅನಿಲ ದರ
LPG Price Hiked Again : ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆ ದೇಶದಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯಾದ ನಂತರ ದೇಶದಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 1000 ರೂ. ದಾಟಿದೆ.
LPG Price Hiked Again : ಶ್ರೀಸಾಮಾನ್ಯನ ಜೇಬಿಗೆ ಮತ್ತೊಮ್ಮೆ ಹೊಡೆತ ಬಿದ್ದಿದೆ. ತೈಲ ಕಂಪನಿಗಳು ಅಡುಗೆ ಅನಿಲದ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿವೆ. ಇದೀಗ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದೇಶದಲ್ಲಿ 1000 ರೂ. ದಾಟಿದೆ. ಅಡುಗೆ ಅನಿಲ ಹೊರತುಪಡಿಸಿ, ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳು ಸಹ ದುಬಾರಿಯಾಗಿವೆ.
ಅಡುಗೆ ಅನಿಲ ಸಿಲಿಂಡರ್ 1000 ರೂ. ದಾಟಿದೆ :
ಇಂದು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 3 ರೂ.50 ಪೈಸೆಯಷ್ಟು ಏರಿಕೆಯಾಗಿದೆ. ಈ ಹೆಚ್ಚಳದ ನಂತರ ದೇಶದಲ್ಲಿ ಗೃಹಬಳಕೆಯ LPG ಸಿಲಿಂಡರ್ 1000 ರೂ. ಗಡಿ ದಾಟಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದ ನಂತರ ಇಂದಿನಿಂದ ದೆಹಲಿ ಮತ್ತು ಮುಂಬೈನಲ್ಲಿ 14.2 ಕೆಜಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 1003 ರೂ., ಕೋಲ್ಕತ್ತಾದಲ್ಲಿ 1029 ರೂ., ಚೆನ್ನೈನಲ್ಲಿ 1018.5 ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ : Post Office ಈ ಯೋಜನೆಯಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು ಆದಾಯ!
ವಾಣಿಜ್ಯ LPG ಸಿಲಿಂಡರ್ ಕೂಡಾ ತುಂಬಾ ದುಬಾರಿ :
ಗೃಹಬಳಕೆಯ ಎಲ್‌ಪಿಜಿಯ ಹೊರತಾಗಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಸಹ 8 ರೂಯಷ್ಟು ದುಬಾರಿಯಾಗಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 2354 ರೂ., ಕೋಲ್ಕತ್ತಾದಲ್ಲಿ 2454 ರೂ., ಮುಂಬೈನಲ್ಲಿ 2306 ರೂ. ಮತ್ತು ಚೆನ್ನೈನಲ್ಲಿ 2507 ರೂ. ಆಗಿರಲಿದೆ. ಮೇ 7 ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 10 ರೂಪಾಯಿಗಳಷ್ಟು ಇಳಿಸಲಾಗಿತ್ತು.
ಮೇ ತಿಂಗಳಲ್ಲಿ ಸಿಲಿಂಡರ್ ಬೆಲೆ ಎರಡು ಬಾರಿ ಏರಿಕೆ :
ಈ ಹಿಂದೆ ಮೇ 7 ರಂದು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನಲ್ಲಿ 50 ರೂ.ಗಳಷ್ಟು ಏರಿಕೆಯಾಗಿತ್ತು. ಇದಾದ ನಂತರ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಬೆಲೆ 999.50 ರೂ.ಗೆ ತಲುಪಿತ್ತು. ಈ ಹಿಂದೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 102 ರೂ. ಯಷ್ಟು ಹೆಚ್ಚಿಸಲಾಗಿತ್ತು.
ಇದನ್ನೂ ಓದಿ : SBI ಗ್ರಾಹಕರೆ ಗಮನಿಸಿ : ATM ಹಣ ಡ್ರಾ ನಿಯಮಗಳಲ್ಲಿ ಬದಲಾವಣೆ
ಈ ವರ್ಷ ನಿರಂತರವಾಗಿ ಆಗಿದೆ ಬೆಲೆ ಏರಿಕೆ :
ಈ ವರ್ಷ LPG ಗ್ಯಾಸ್ ಸಿಲಿಂಡರ್ ಬೆಲೆ ಹಲವಾರು ಬಾರಿ ಏರಿಕೆಯಾಗಿದೆ. ಏಪ್ರಿಲ್ 1 ರಂದು 19 ಕೆಜಿಯ ವಾಣಿಜ್ಯ ಸಿಲಿಂಡರ್ ಮೇಲೆ 250 ರೂ. ಹೆಚ್ಚಳವಾಗಿದ್ದು, ಸಿಲಿಂಡರ್ ಬೆಲೆ 2253 ರೂ.ಗೆ ಏರಿತ್ತು. ಮಾರ್ಚ್ 1, 2022 ರಂದು ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿತ್ತು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.