Mahindra: ಹೊಸ ಎಲೆಕ್ಟ್ರಿಕ್ ಆಲ್ಫಾ ಸಿಎನ್‌ಜಿ ಆಟೋ ಬಿಡುಗಡೆ ಮಾಡಿದ ಮಹೀಂದ್ರಾ
Mahindra: ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್, ಹಿಂದೆ ರೇವಾ ಎಲೆಕ್ಟ್ರಿಕ್ ಕಾರ್ ಕಂಪನಿ ಎಂದು ಕರೆಯಲಾಗುತ್ತಿತ್ತು, ಇದು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ವಾಹನಗಳನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಸುವ ಭಾರತೀಯ ಕಂಪನಿಯಾಗಿದೆ.
Mahindra: ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಮಹೀಂದ್ರ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್, ಹೊಸ ಆಲ್ಫಾ ಸಿಎನ್‌ಜಿ ಪ್ಯಾಸೆಂಜರ್ ಮತ್ತು ಸರಕು ಸಾಗಣೆ ಮಾದರಿಗಳನ್ನು ಸೋಮವಾರ (ಏಪ್ರಿಲ್ 04) ಅನಾವರಣಗೊಳಿಸಿತು. ಮಹೀಂದ್ರಾ ಮತ್ತು ಮಹೀಂದ್ರಾ ಹೊಸ ಆಲ್ಫಾ ಪ್ಯಾಸೆಂಜರ್ ಡಿಎಕ್ಸ್ ಸಿಎನ್‌ಜಿ ಆವೃತ್ತಿಯ ಬೆಲೆ ರೂ. 2,57,000 (ಎಕ್ಸ್-ಶೋ ರೂಂ) ಮತ್ತು ಆಲ್ಫಾ ಲೋಡ್ ಪ್ಲಸ್ ಬೆಲೆ ರೂ. 2,57,800 (ಎಕ್ಸ್ ಶೋ ರೂಂ) ಆಗಿದೆ.
ಮಹೀಂದ್ರಾ ಗ್ರೂಪ್‌ನ (Mahindra Group) ಹೊಸ ಆಲ್ಫಾ ಸಿಎನ್‌ಜಿ ಪ್ಯಾಸೆಂಜರ್ ಮತ್ತು ಸರಕು ಸಾಗಣೆ ಸಿಎನ್‌ಜಿ ಮಾದರಿಗಳು ಜನಪ್ರಿಯ ತ್ರಿಚಕ್ರ ವಾಹನ ಆಲ್ಫಾ ಬ್ರಾಂಡ್ ಮತ್ತು ಮಹೀಂದ್ರಾ ಡೀಲರ್‌ಶಿಪ್‌ಗಳನ್ನು ಆಧರಿಸಿವೆ. ಕಂಪನಿಯ ಪ್ರಕಟಣೆಯ ಪ್ರಕಾರ ಈ ಹೊಸ ತ್ರಿಚಕ್ರ ವಾಹನಗಳನ್ನು ಉತ್ತರ ಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ದೆಹಲಿ, ಬಿಹಾರ, ಜಾರ್ಖಂಡ್, ಕೇರಳ ಮತ್ತು ಮಧ್ಯಪ್ರದೇಶದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ- Tesla Cars: ಒಂದೇ ವರ್ಷದಲ್ಲಿ 10 ಲಕ್ಷ ಎಲೆಕ್ಟ್ರಿಕ್ ಕಾರು ಮಾರಾಟ, ಟೆಸ್ಲಾ ದಾಖಲೆ
ಹೊಸ ಆಲ್ಫಾ ಸಿಎನ್‌ಜಿ ಕಾರ್ಗೋ ಮತ್ತು ಪ್ಯಾಸೆಂಜರ್ ಅನ್ನು ಪ್ರಾರಂಭಿಸುವ ಮೂಲಕ, ನಮ್ಮ ಗ್ರಾಹಕರಿಗೆ ಎಲೆಕ್ಟ್ರಿಕ್ (Mahindra Electric), ಡೀಸೆಲ್ ಮತ್ತು ಸಿಎನ್‌ಜಿಯಂತಹ ಬಹು ಆಯ್ಕೆಗಳನ್ನು ಒದಗಿಸುವ ಮೂಲಕ ನಾವು ಪೂರ್ಣ ಶ್ರೇಣಿಯ ಪ್ಲೇಯರ್ಸ್ ಆಗಲಿದ್ದೇವೆ ಎಂದು ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಸಿಇಒ ಸುಮನ್ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ- ಅಗ್ಗವಾಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ, ಹಣಕಾಸು ಸಚಿವರು ಹೇಳಿದ್ದೇನು ?
ಭಾರತದ ಕೆಲವು ಭಾಗಗಳಲ್ಲಿ ಸಿಎನ್‌ಜಿ ಕೇಂದ್ರಗಳು ಹೆಚ್ಚು ಪ್ರಚಲಿತವಾಗುತ್ತಿವೆ, ಇದು ಆಲ್ಫಾ ಕಾರ್ಗೋ ಮತ್ತು ಪ್ಯಾಸೆಂಜರ್ ಸಿಎನ್‌ಜಿಯನ್ನು ಹಣವನ್ನು ಉಳಿಸಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಅವರು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.