Big Change In PM Kisan Yojana: ದೇಶಾದ್ಯಂತ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿನ ಹಣಕ್ಕಾಗಿ ಕಾತುರರಾಗಿ ಕಾಯುತ್ತಿದ್ದಾರೆ. ಆದರೆ, ಪಿಎಂ ಕಿಸಾನ್ ಯೋಜನೆಯ 14 ನೇ ಕಂತು ಬಿಡುಗಡೆ ಮಾಡುವ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳು ಕೋಟ್ಯಾಂತರ ರೈತರ ಮೇಲೆ ನೇರ ಪರಿಣಾಮವನ್ನು ಬೀರಲಿದೆ. ಹಾಗಿದ್ದರೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಆಗಿರುವ ಮಹತ್ವದ ಬದಲಾವಣೆಗಳೇನು ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಸಂಪೂರ್ಣವಾಗಿ ಬದಲಾಗಿದೆ ಪಿಎಂ ಕಿಸಾನ್ ಸ್ಟೇಟಸ್ ಪರಿಶೀಲಿಸುವ ವಿಧಾನ: 
ಹೌದು, ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಾಗಿದ್ದರೆ ಇನ್ನು ಮುಂದೆ ಪಿಎಂ ಕಿಸಾನ್ ಸ್ಟೇಟಸ್ ಪರಿಶೀಲಿಸುವ ವಿಧಾನ ಸಂಪೂರ್ಣವಾಗಿ ಬದಲಾಗಲಿದೆ. ಇನ್ಮುಂದೆ ಪಿಎಂ ಕಿಸಾನ್ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಲು ನಿಮಗೆ ನೋಂದಣಿ ಸಂಖ್ಯೆಯ ಅಗತ್ಯವಿದೆ. 


ಇದನ್ನೂ ಓದಿ- Vegetable Price: ತರಕಾರ ಬೆಲೆ ನೋಡಿ ಗ್ರಾಹಕರು ಸುಸ್ತೋ ಸುಸ್ತು


ಇದಲ್ಲದೆ, ವಂಚನೆಯನ್ನು ತಡೆಗಟ್ಟುವ ಮತ್ತು ಇ-ಕೆವೈಸಿ ಪೂರ್ಣಗೊಳಿಸುವ  ಉದ್ದೇಶದಿಂದ, ಕೇಂದ್ರ ಕೃಷಿ ಸಚಿವಾಲಯವು ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಿದೆ. ಈ ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಶನ್ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು  ಈ ಅಪ್ಲಿಕೇಶನ್ ಮೂಲಕ, ಮುಖದ ದೃಢೀಕರಣದ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. 


ಇದನ್ನೂ ಓದಿ- Gold Price Today: ಆಷಾಢ ಬಂದ್ರೂ ಇಳಿಕೆ ಆಗಲೇ ಇಲ್ಲ ಹಳದಿ ಲೋಹ..!!


ಹೌದು, ಕೇಂದ್ರ ಕೃಷಿ ಸಚಿವಾಲಯವು ಬಿಡುಗಡೆ ಮಾಡಿರುವ ಈ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದ, ಮುಖದ ದೃಢೀಕರಣದ ಸಹಾಯದಿಂದ ರೈತರು ತಮ್ಮ ಇ-ಕೆವೈಸಿಯನ್ನು ಸುಲಭವಾಗಿ ಮಾಡಬಹುದು. ಇದಕ್ಕಾಗಿ ನಿಮಗೆ ಒಂದು ಬಾರಿ ಪಾಸ್‌ವರ್ಡ್ (OTP) ಮತ್ತು ಫಿಂಗರ್‌ಪ್ರಿಂಟ್ ಅಗತ್ಯವಿರುವುದಿಲ್ಲ. 


ಗಮನಾರ್ಹವಾಗಿ, ಸರ್ಕಾರವು ಈಗಾಗಲೇ ದೇಶದ 8.43 ಕೋಟಿ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣವನ್ನು ವರ್ಗಾಯಿಸಿ. ಶೀಘ್ರದಲ್ಲೇ ಕೇಂದ್ರ ಸರ್ಕಾರ, 14ನೇ ಕಂತಿನ ಹಣವನ್ನು ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಿದೆ. ಆದರೆ 14ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಲಿದೆ ಎಂಬ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕೆಲವು ಮಾಧ್ಯಮ ವರದಿಗಳ ಅನ್ವಯ, ಮೋದಿ ಸರ್ಕಾರವು ಜುಲೈ 15 ರೊಳಗೆ ಈ ಕಂತಿನ ಹಣವನ್ನು ವರ್ಗಾಯಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರವಾಗಲೀ ಅಥವಾ ಕೃಷಿ ಸಚಿವಾಲಯವಾಗಲೀ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.