ನವದೆಹಲಿ : LIC New Rule :  ಕರೋನಾ ಎಂಬ ರಾಕ್ಷಸ ಇಡೀ ದೇಶವನ್ನೇ ಆವರಿಸಿ ಬಿಟ್ಟಿದೆ. ಪ್ರತಿ ದಿನ ಪ್ರತಿ ನಿಮಿಷ ಭಯದೊಂದಿಗೆ ಬದುಕು. ಚಿಕಿತ್ಸೆಗಾಗಿ ಲಕ್ಷ ಲಕ್ಷ ಹಣ ಪಾವತಿಯಾಗಬೇಕು. ಹೀಗಿರುವಾಗ, ವಿಮೆ ಕ್ಲೈಂ ವಿಚಾರದಲ್ಲೂ ಅಡೆತಡೆಗಳು, ಸಮಸ್ಯೆಗಳು. ಲಾಕ್ ಡೌನ್ ಮಧ್ಯೆ, ವಿಮೆ ಕ್ಲೈಂ ಗಾಗಿ ಡೆತ್ ಸರ್ಟಿಫಿಕೇಟ್ ಮಾಡಿಸಬೇಕಾದರೆ ಗ್ರಾಹಕರು ಅಲೆದಾಡಬೇಕು. ನೋವಿನ ಮೇಲೆ ಮತ್ತೆ ನೋವು. ಇದೆಲ್ಲವನ್ನೂ ಮನಗಂಡ ದೇಶದ ಅತಿ ದೊಡ್ಡ ವಿಮಾ ಕಂಪನಿ, Life Insurance Corporation of India (LIC) ಕ್ಲೈಂ ಸೆಟಲ್ ಮೆಂಟ್ ನೀತಿಯನ್ನೇ ಬದಲಾಯಿಸಿದೆ. ಹೊಸ ನೀತಿಯ ಅನ್ವಯ ವಿಮೆ ಸೆಟಲ್ ಮೆಂಟ್ ಪ್ರಕ್ರಿಯೆ ಶೀಘ್ರ ಮತ್ತು ಸರಳವಾಗಿ ನಡೆಯಲಿದೆ. 


COMMERCIAL BREAK
SCROLL TO CONTINUE READING

ಡೆತ್ ಸರ್ಟಿಫಿಕೇಟ್ ಬಲಿಗೆ ಈ ದಾಖಲೆಗಳನ್ನು ಸಲ್ಲಿಸಬಹುದು: 
ವಿಮಾದಾರನು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇದರೆ ವೆರಿಫಿಕೇಶನ್ ಗಾಗಿ  alternate proofs ಅನ್ನು ಎಲ್ ಐಸಿ ಅನುಮೋದಿಸಿದೆ. ಅಂದರೆ, ಮುನ್ಸಿಪಲ್ ಡೆತ್ ಸರ್ಟಿಫಿಕೇಟ್ ಬದಲಿಗೆ ಎಲ್ಐಸಿ (LIC) ಬೇರೆ ದಾಖಲೆಗಳನ್ನು ಸ್ವೀಕರಿಸುತ್ತದೆ. ಸಾವಿನ ಪ್ರಮಾಣಪತ್ರ (Death Certificate) , ಸರ್ಕಾರ,  ಇಎಸ್‌ಐ (ESI) ,  ಸಶಸ್ತ್ರ ಪಡೆ, ಕಾರ್ಪೊರೇಟ್ ಆಸ್ಪತ್ರೆಗಳು ಮತ್ತು ಎಲ್‌ಐಸಿ ಕ್ಲಾಸ್ -1 ಅಧಿಕಾರಿ ಅಥವಾ ಡೆವೆಲಪರ್ ಆಫಿಸರ್ ಪ್ರಮಾಣೀಕರಿಸುವ ಡೆತ್ ಸರ್ಟಿಫಿಕೇಟ್ , ಆಸ್ಪತ್ರೆಯ ಡಿಸ್ ಚಾರ್ಜ್ ಸಮ್ಮರಿ, ಡೆತ್ ಸಮ್ಮರಿಯನ್ನು  ಸ್ವೀಕರಿಸಲಾಗುತ್ತದೆ. ಆದರೆ ಇದರಲ್ಲಿ ಸಾವಿನ ಸಮಯ ಮತ್ತು ದಿನಾಂಕವನ್ನು ಸ್ಷಪಷ್ಟವಾಗಿ ನಮೂದಿಸಿರಬೇಕು. 


ಇದನ್ನೂ ಓದಿ : SBI ಗ್ರಾಹಕರಿಗೊಂದು ಪ್ರಮುಖ ಸುದ್ದಿ; ಆನ್ ಲೈನ್ ನಲ್ಲಿಯೇ ಬದಲಾಯಿಸಿಕೊಳ್ಳಬಹುದು branch


ಯಾವುದೇ ಎಲ್ಐಸಿ ಶಾಖೆಯಲ್ಲಿ  ದಾಖಲೆಗಳನ್ನು ಸಲ್ಲಿಸಬಹುದು : 
ವಿಮೆ (Insurance) ಹಣವನ್ನು ಪಡೆಯಬೇಕಾದರೆ, ಡೆತ್ ಪ್ರೂಫ್, ಶವಸಂಸ್ಕಾರ ಪ್ರಮಾಣಪತ್ರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ನೀಡಿದ ಪ್ರಮಾಣೀಕೃತ ಪತ್ರವನ್ನು ಎಲ್ ಐಸಿ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಈ ಎಲ್ಲಾ ದಾಖಲೆಗಳನ್ನು (Documents) ಸಮೀಪದ ಯಾವುದೇ ಶಾಖೆಯಲ್ಲಿ ಸಲ್ಲಿಸಬಹುದಾಗಿದೆ. ಕರೋನಾ (Coronavirus) ಕಾಲದಲ್ಲಿ ಗ್ರಾಹಕರ ಅಲೆದಾಟವನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. 


ಈ ಸೌಲಭ್ಯಗಳಿಗಾಗಿ ಎಲ್ಐಸಿ ವೆಬ್ ಸೈಟ್ ಗೆ ಭೇಟಿ ನೀಡಿ : 
ನೀವು ವಿಮಾ ಪಾಲಿಸಿಯನ್ನು ಖರೀದಿಸುವುದಿದ್ದರೆ, ವಿಮೆಯನ್ನು ನವೀಕರಣ ಮಾಡಲು, ಪ್ರೀಮಿಯಂ ಪಾವತಿಸಬೇಕಾದರೆ, ಸಾಲಕ್ಕೆ ಅರ್ಜಿ ಸಲ್ಲಿಸಬೇಕಾದರೆ, ಸಾಲದ ಪೂರ್ವ ಪಾವತಿ, ವಿಳಾಸ ಬದಲಾವಣೆ, ಪ್ಯಾನ್ ಬಗ್ಗೆ ಮಾಹಿತಿ ಇತ್ಯಾದಿಗಳಿಗಾಗಿ  www.licindia.in ವೆಬ್ ಸೈಟಿಗೆ ಭೇಟಿ ನೀಡಬಹುದು. 


ಇದನ್ನೂ ಓದಿ :  Aadhaar Card : 'ಆಧಾರ್ ಕಾರ್ಡ್‌'ನಲ್ಲಿ ವಿಳಾಸವನ್ನು ಸುಲಭವಾಗಿ ನವೀಕರಿಸಬಹುದು; ಹೇಗೆ ಇಲ್ಲಿದೆ


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.