1 October 2022: ಅಕ್ಟೋಬರ್ 1 ರಿಂದ ಬದಲಾಗಲಿದೆ ಹಲವು ನಿಯಮಗಳು: ನಿಮ್ಮ ಜೇಬಿಗೆ ನೇರ ಪರಿಣಾಮ ಗ್ಯಾರಂಟಿ
ಸಣ್ಣ ಉಳಿತಾಯ ಯೋಜನೆಯ ಬಡ್ಡಿದರಗಳನ್ನು ಕೇಂದ್ರ ಸರ್ಕಾರವು ಪ್ರತಿ 3 ತಿಂಗಳ ನಂತರ ಪರಿಶೀಲಿಸುತ್ತದೆ. ಆದ್ದರಿಂದ ಸರ್ಕಾರವು ಪಿಪಿಎಫ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿಯ ಮೊತ್ತವನ್ನು ಶೀಘ್ರದಲ್ಲೇ ಹೆಚ್ಚಿಸಬಹುದು.
5 ದಿನಗಳ ನಂತರ ಹೊಸ ತಿಂಗಳು ಪ್ರಾರಂಭವಾಗಲಿದೆ. ಅಕ್ಟೋಬರ್ 1 ರಿಂದ, ಸರ್ಕಾರವು ಅನೇಕ ಬದಲಾವಣೆಗಳನ್ನು ಮಾಡಲಿದೆ, ಅದು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಸಣ್ಣ ಉಳಿತಾಯ ಯೋಜನೆಯಿಂದ ಗ್ಯಾಸ್ ಸಿಲಿಂಡರ್ ಬೆಲೆಗಳವರೆಗೆ ಅನೇಕ ಬದಲಾವಣೆಗಳನ್ನು ಒಳಗೊಂಡಿದೆ. 1 ನೇ ದಿನಾಂಕದಿಂದ ಯಾವ ನಿಯಮಗಳು ಬದಲಾಗಲಿವೆ ಎಂದು ತಿಳಿಯೋಣ.
ಇದನ್ನೂ ಓದಿ: Viral Video: ಮೊಸಳೆ ಮೇಲೆ ಒಂದೇ ನೆಗೆತದಲ್ಲಿ ದಾಳಿ ಮಾಡಿತು ಜಾಗ್ವಾರ್: ಜಟಾಪಟಿಯ ಈ ವಿಡಿಯೋ ನೋಡಿದ್ರೆ ಭಯವಾಗುತ್ತೆ
ಸಣ್ಣ ಉಳಿತಾಯ ಯೋಜನೆಯ ಬಡ್ಡಿದರಗಳನ್ನು ಕೇಂದ್ರ ಸರ್ಕಾರವು ಪ್ರತಿ 3 ತಿಂಗಳ ನಂತರ ಪರಿಶೀಲಿಸುತ್ತದೆ. ಆದ್ದರಿಂದ ಸರ್ಕಾರವು ಪಿಪಿಎಫ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿಯ ಮೊತ್ತವನ್ನು ಶೀಘ್ರದಲ್ಲೇ ಹೆಚ್ಚಿಸಬಹುದು. ಹೊಸ ಬಡ್ಡಿದರಗಳನ್ನು ಕೇಂದ್ರ ಸರ್ಕಾರವು ಸೆಪ್ಟೆಂಬರ್ 30 ರಂದು ಘೋಷಿಸಬಹುದು, ಇದು ಅಕ್ಟೋಬರ್ 1 ರಿಂದ ಅನ್ವಯಿಸಲಿದೆ.
RBI ಅಕ್ಟೋಬರ್ 1 ರಿಂದ ಕಾರ್ಡ್-ಆನ್-ಫೈಲ್ ಟೋಕನೈಸೇಶನ್ (CoF ಕಾರ್ಡ್ ಟೋಕನೈಸೇಶನ್) ನಿಯಮಗಳನ್ನು ಪರಿಚಯಿಸುತ್ತಿದೆ. ಟೋಕನೈಸೇಶನ್ ವ್ಯವಸ್ಥೆಯಲ್ಲಿ ಬದಲಾವಣೆಯಾದ ನಂತರ ಕಾರ್ಡುದಾರರಿಗೆ ಹೆಚ್ಚಿನ ಸೌಲಭ್ಯಗಳು ಮತ್ತು ಭದ್ರತೆ ಸಿಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳುತ್ತದೆ. ಆನ್‌ಲೈನ್ ಬ್ಯಾಂಕಿಂಗ್ ವಂಚನೆಯನ್ನು ತಡೆಯುವುದು ಟೋಕನೈಸೇಶನ್ ವ್ಯವಸ್ಥೆಯನ್ನು ಜಾರಿಗೊಳಿಸುವ ಉದ್ದೇಶವಾಗಿದೆ.
ಗ್ಯಾಸ್ ಸಿಲಿಂಡರ್ ದರ ಕಡಿಮೆ!
ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್‌ಗಳ ದರವನ್ನು ಪರಿಶೀಲಿಸಲಾಗುತ್ತದೆ. ಈ ಬಾರಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ನೈಸರ್ಗಿಕ ಅನಿಲ ಬೆಲೆಗಳ ಮೃದುತ್ವದಿಂದಾಗಿ, ಇದು ಕುಸಿತವನ್ನು ಕಾಣಬಹುದು.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ, ಸೆಪ್ಟೆಂಬರ್ 30ರಿಂದ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಡಿಮ್ಯಾಟ್ ಖಾತೆದಾರರು ಸೆಪ್ಟೆಂಬರ್ 30, 2022 ರೊಳಗೆ ಎರಡು ಅಂಶಗಳ ದೃಢೀಕರಣವನ್ನು ಪೂರ್ಣಗೊಳಿಸಬೇಕು, ಅದರ ನಂತರವೇ ನೀವು ನಿಮ್ಮ ಖಾತೆಗೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ. ನೀವು ಇದನ್ನು ಮಾಡದಿದ್ದರೆ ನಿಮ್ಮ ಖಾತೆಯನ್ನು ತೆರೆಯಲಾಗುವುದಿಲ್ಲ.
ಇದನ್ನೂ ಓದಿ: ಸಚಿನ್ ಪೈಲೆಟ್ ಗೆ ರಾಜಸ್ತಾನದ ಸಿಎಂ ಪಟ್ಟ?
ಅಟಲ್ ಪಿಂಚಣಿ ಯೋಜನೆಯ ನಿಯಮಗಳಲ್ಲಿ ಬದಲಾವಣೆ:
ಇದಲ್ಲದೇ 1ನೇ ತಾರೀಖಿನಿಂದ ತೆರಿಗೆ ಪಾವತಿಸುವ ಗ್ರಾಹಕರು ಅಟಲ್ ಪಿಂಚಣಿ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ನಿಯಮಗಳ ಕುರಿತು ಮಾತನಾಡುವುದಾದರೆ, ಈ ಸಮಯದಲ್ಲಿ 18 ವರ್ಷದಿಂದ 40 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.