Maruti Baleno: ಕಾರು ತಯಾರಿಕಾ ಕಂಪನಿಗಳಲ್ಲಿ ಮಾರುತಿ ಅತ್ಯಂತ ಜನಪ್ರಿಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಾರುತಿ ಸುಜುಕಿಯ ಬಲೆನೊ ಕಾರು ಹೆಚ್ಚು ಪ್ರಸಿದ್ದಿ ಪಡೆದಿದ್ದು ಡಿಸೆಂಬರ್ 2022 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ವಾಸ್ತವವಾಗಿ, ಕಳೆದ ವರ್ಷವೇ, ಮಾರುತಿ ತನ್ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿತು, ಇದರಲ್ಲಿ 360 ಡಿಗ್ರಿ ಕ್ಯಾಮೆರಾ ಮತ್ತು HUD ನಂತಹ ಮೊದಲ ವೈಶಿಷ್ಟ್ಯಗಳನ್ನು ಪರಿಚಯಿಸಲಾಯಿತು. ಅಂದಿನಿಂದ ಬಲೆನೊ ಮಾರಾಟದಲ್ಲಿ ಉತ್ಕರ್ಷ ಕಂಡುಬಂದಿದೆ. ಇದರ ಬೆಲೆ 6.49 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.  ಆದರೆ, ನೀವು ಕಡಿಮೆ ಬಜೆಟ್ನಲ್ಲಿ ಕೂಡ ಈ ಕಾರನ್ನು ಖರೀದಿಸಬಹುದು. 


COMMERCIAL BREAK
SCROLL TO CONTINUE READING

ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ಸೆಕೆಂಡ್ ಹ್ಯಾಂಡ್ ಮಾರುತಿ ಸುಜುಕಿ ಬಲೆನೊ ಕಾರುಗಳು ಲಭ್ಯವಿದ್ದು, ಇದರಲ್ಲಿ ದುಬಾರಿ ಕಾರುಗಳನ್ನು ಕೇವಲ 5 ಲಕ್ಷ ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ. ಹೇಗೆ ಎಂದು ತಿಳಿಯೋಣ...


* 5 ಲಕ್ಷ ರೂ.ಗಳಲ್ಲಿ ಲಭ್ಯವಾಗಲಿದೆ ಮಾರುತಿ ಬಲೆನೊ 1.2 DELTA:
ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ, ಮಾರುತಿ ಬಲೆನೊ 1.2 DELTA ಕಾರನ್ನು 5 ಲಕ್ಷ ರೂ.ಗಳ ಮಾರಾಟ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಈ 2019 ಮಾಡೆಲ್ ನ ಪೆಟ್ರೋಲ್ ಎಂಜಿನ್ ಕಾರು ಒಟ್ಟು 30661 ಕಿಮೀ ಓಡಿದೆ. ಆದರೆ ಮೂರನೇ ಮಾಲೀಕತ್ವ ಹೊಂದಿದೆ. ಹೋಶಿಯಾರ್‌ಪುರದಲ್ಲಿ ಕಾರು ಮಾರಾಟಕ್ಕೆ ಲಭ್ಯವಿದೆ. 


ಇದನ್ನೂ ಓದಿ- Phone pay, Google pay ಅಲ್ಲ ಈ app ಬಳಸಿದರೆ ಪ್ರತಿ ತಿಂಗಳು ಸಿಗುವುದು 1000 ರೂಪಾಯಿ ಕ್ಯಾಶ್ ಬ್ಯಾಕ್


*  5.5 ಲಕ್ಷ ರೂ.ಗಳಲ್ಲಿ ಖರೀದಿಸಿ ಮಾರುತಿ ಬಲೆನೊ 1.2 ಡೆಲ್ಟಾ: 
ಇದೇ ವೆಬ್‌ಸೈಟ್‌ನಲ್ಲಿ,  ಮಾರುತಿ ಬಲೆನೊ 1.2 ಡೆಲ್ಟಾ ಕಾರನ್ನು 5.5 ಲಕ್ಷ ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಇದೂ ಕೂಡ 2019ರ ಮಾಡೆಲ್ ಕಾರ್ ಆಗಿದ್ದು, ಈ ಕಾರ್ ಇದುವರೆಗೂ ಒಟ್ಟು 94199 ಕಿಮೀ ಓಡಿದೆ. ಈ ಪೆಟ್ರೋಲ್ ಎಂಜಿನ್ ಕಾರ್ ಮೊದಲನೇ ಮಾಲೀಕರ ಒಡೆತನದಲ್ಲಿದೆ. ಬೊಕಾರೊದಲ್ಲಿ ಕಾರು ಮಾರಾಟಕ್ಕೆ ಲಭ್ಯವಿದೆ.


* ಮಾರುತಿ ಬಲೆನೊ 5.44 ಲಕ್ಷ ರೂ.ಗಳಿಗೆ ಲಭ್ಯ:
ಮತ್ತೊಂದು ಮಾರುತಿ ಬಲೆನೊ ಕಾರು ಕೂಡ 5.44 ಲಕ್ಷ ರೂ.ಗಳಿಗೆ ಲಭ್ಯವಿದೆ. ಈ  ಪೆಟ್ರೋಲ್ ಎಂಜಿನ್ ಕಾರು ಕೂಡ  2019 ರ ಮಾಡೆಲ್ ನದಾಗಿದ್ದು ಇದುವರೆಗೂ ಒಟ್ಟು ಒಟ್ಟು 87239 ಕಿಮೀ ಕ್ರಮಿಸಿದೆ. ಈ ಕಾರು ಜೆಮ್‌ಶೆಡ್‌ಪುರದಲ್ಲಿ ಮಾರಾಟಕ್ಕೆ ಲಭ್ಯವಿದೆ. 


ಇದನ್ನೂ ಓದಿ- SBI Account Types : ಎಸ್​ಬಿಐನಲ್ಲಿದೆ 6 ವಿಧದ ಉಳಿತಾಯ ಖಾತೆಗಳು : ಅವುಗಳು ಬಗ್ಗೆ ಇಲ್ಲಿದೆ ಮಾಹಿತಿ!


* ಮತ್ತೊಂದು ಮಾರುತಿ ಬಲೆನೊ 1.2 ಡೆಲ್ಟಾ 5.7 ಲಕ್ಷ ರೂ. ಗಳಿಗೆ ಲಭ್ಯ:
ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ಮತ್ತೊಂದು ಮಾರುತಿ ಬಲೆನೊ 1.2 ಡೆಲ್ಟಾದ ಪೆಟ್ರೋಲ್ ಎಂಜಿನ್ ಕಾರನ್ನು 5.7 ಲಕ್ಷ ರೂ. ಗಳಿಗೆ ಪಟ್ಟಿ ಮಾಡಲಾಗಿದೆ. 2021ರ ಈ ಮಾದರಿಯು ಇದುವರೆಗೂ ಒಟ್ಟು 58069 ಕಿಮೀ ಕ್ರಮಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.