ನವದೆಹಲಿ: ಭಾರತದಲ್ಲಿ ಜನವರಿ 2022 ರಿಂದ ಮಾರುತಿ ಸುಜುಕಿ ಕಾರುಗಳು (Maruti Suzuki)ದುಬಾರಿಯಾಗಲಿವೆ. ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಮಾರುತಿ ಸುಜುಕಿ ಈ ಬಗ್ಗೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

2021ರಲ್ಲಿ ವಾಹನ ಮಾರಾಟ ಮತ್ತು ಉತ್ಪಾದನೆಯ ಮೇಲೆ COVID-19 ಎರಡನೇ ತರಂಗದ ಪ್ರಭಾವದಿಂದಾಗಿ ಅದನ್ನು ಸರಿದೂಗಿಸಲು ತಮ್ಮ ವಾಹನಗಳನ್ನು ದುಬಾರಿಯಾಗಿಸಲು (Car rate hike) ವಾಹನ ತಯಾರಕರನ್ನು ಒತ್ತಾಯಿಸಿತು. ತದನಂತರ ಜಾಗತಿಕ ಚಿಪ್ ಕೊರತೆಯು ಸೆಮಿಕಂಡಕ್ಟರ್‌ಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಯಿತು. 


ಇದನ್ನೂ ಓದಿ: 7th Pay Commission: ತುಟ್ಟಿ ಭತ್ಯೆ ಲೆಕ್ಕಾಚಾರದಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ


ಇದರಿಂದಾಗಿ ವಾಹನಗಳು ದುಬಾರಿಯಾದವು.  ಆದರೆ ಅಷ್ಟೆ ಅಲ್ಲ, ಉಕ್ಕು, ಅಲ್ಯೂಮಿನಿಯಂ ಮುಂತಾದ ವಸ್ತುಗಳ ಬೆಲೆ ಏರಿಕೆಯಿಂದಾಗಿ ವಾಹನ ಉತ್ಪಾದನೆ ಮತ್ತಷ್ಟು ದುಬಾರಿಯಾಗಿದೆ. ಈ ಎಲ್ಲಾ ಏರಿಕೆಗಳನ್ನು ಬೆಲೆ ಏರಿಕೆಯ ರೂಪದಲ್ಲಿ ಜನರಿಗೆ ವರ್ಗಾಯಿಸಲಾಗಿದೆ. 


2021 ರಲ್ಲಿ ದೇಶದಲ್ಲಿ ವಾಹನ ತಯಾರಕರು ಹಲವಾರು ಬಾರಿ ಬೆಲೆ ಏರಿಕೆಗಳನ್ನು ಘೋಷಿಸಿರುವುದನ್ನು ನಾವು ನೋಡಿದ್ದೇವೆ ಮತ್ತು ಈ ಪ್ರವೃತ್ತಿಯು 2022 ರ ಮೊದಲಾರ್ಧದವರೆಗೂ ಮುಂದುವರಿಯುವ ಸಾಧ್ಯತೆಯಿದೆ. ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ (Maruti cars) ಜನವರಿ 2022 ರಿಂದ ವಾಹನಗಳನ್ನು ದುಬಾರಿ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. 


ಇದನ್ನೂ ಓದಿ: 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಾ? ಗುಲಾಂ ನಬಿ ಆಜಾದ್ ಹೇಳಿದ್ದೇನು?


ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ, ಮಾರುತಿ ಸುಜುಕಿ (Maruti Suzuki)ಜನವರಿ 2022 ರಲ್ಲಿ ಬೆಲೆ ಏರಿಕೆಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಹೆಚ್ಚಿದ ಇನ್‌ಪುಟ್ ವೆಚ್ಚಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಂಪನಿಯು ಬೆಲೆ ಏರಿಕೆಯ ಪ್ರಮಾಣವನ್ನು ಉಲ್ಲೇಖಿಸಿಲ್ಲ. ಆದರೆ ಇದು ವಿಭಿನ್ನ ಮಾದರಿಗಳಿಗೆ ಬದಲಾಗುತ್ತದೆ ಎಂದು ತಿಳಿಸಿದೆ. 


ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಕಾರು ತಯಾರಕರು ವರ್ಷದ ಆರಂಭದಲ್ಲಿ ವಾಹನಗಳ ಬೆಲೆಯನ್ನು ಹೆಚ್ಚಿಸುವ ರೂಢಿಯನ್ನು ಅನುಸರಿಸುತ್ತಿದ್ದಾರೆ ಎಂಬುದು ಗಮನಾರ್ಹವಾಗಿದೆ.