Adani-Hindenburg Case: ಅದಾನಿ ಸಮೂಹಕ್ಕೆ ಮಾರಿಷಸ್ ನಿಂದ ಒಂದು ನೆಮ್ಮದಿಯ ಸುದ್ದಿ ಪ್ರಕಟವಾಗಿದೆ. ಮಾರಿಷಸ್‌ನಲ್ಲಿ ಯಾವುದೇ ಶೆಲ್ ಕಂಪನಿ ಅಸ್ತಿತ್ವದಲ್ಲಿಲ್ಲ ಮತ್ತು ಅದಾನಿ ಗುಂಪಿನ ವಿರುದ್ಧ ಹಿಂಡೆನ್‌ಬರ್ಗ್ ಮಾಡಿರುವ ಆರೋಪಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಮಾರಿಷಸ್ ಹಣಕಾಸು ಸೇವೆಗಳ ಸಚಿವ ಮಹೇನ್ ಕುಮಾರ್ ಸಿರುಟ್ಟನ್ ಅಲ್ಲಿನ ಸಂಸತ್ತಿಗೆ ತಿಳಿಸಿದ್ದಾರೆ. OECD ಯ ತೆರಿಗೆ ನಿಯಮಗಳನ್ನು ಮಾರಿಷಸ್ ಸಂಪೂರ್ಣವಾಗಿ ಅನುಸರಿಸುತ್ತದೆ ಎಂದು ಅವರು ಹೇಳಿದ್ದಾರೆ.


ಶೆಲ್ ಕಂಪನಿಗಳು ಇವೆ ಎಂಬ ಆರೋಪ ಸುಳ್ಳು ಮತ್ತು ನಿರಾಧಾರ ಎಂದು ನಾನು ಸದನಕ್ಕೆ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಮಾರಿಷಸ್  ಕಾನೂನು ಪ್ರಕಾರ ಶೆಲ್ ಕಂಪನಿಗಳು ಕೆಲಸ ಮಾಡಲು ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ. ಹಣಕಾಸು ಸೇವಾ ಆಯೋಗದಿಂದ ಪರವಾನಗಿ ಪಡೆದ ಎಲ್ಲಾ ಜಾಗತಿಕ ವ್ಯಾಪಾರ ಕಂಪನಿಗಳು ಎಲ್ಲಾ ಮಾನದಂಡಗಳನ್ನು ಪೂರೈಸಬೇಕು ಮತ್ತು ಇದಕ್ಕಾಗಿ ಆಯೋಗದಿಂದ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಮತ್ತು ಇದುವರೆಗೆ ಅಂತಹ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ ಎಂದು ಅವರು ಸಂಸತ್ತಿಗೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Share Market Update: ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಹೊಸ ಹುಮ್ಮಸ್ಸು, 18300 ಗಡಿ ದಾಟಿದ ನಿಫ್ಟಿ

ಹಣಕಾಸು ಸೇವೆಗಳ ಸಚಿವರ ಪ್ರಕಾರ, ಹಣಕಾಸು ಸೇವಾ ಆಯೋಗವು ಹಿಂಡೆನ್‌ಬರ್ಗ್ ವರದಿಯನ್ನು ಗಮನಕ್ಕೆ ತೆಗೆದುಕೊಂಡಿದೆ, ಆದರೆ ನಿಯಂತ್ರಕರು ಗೌಪ್ಯತೆಯ ನಿಯಮಕ್ಕೆ ಬದ್ಧರಾಗಿದ್ದಾರೆ, ಆದ್ದರಿಂದ ಅವರು ಯಾವುದೇ ವಿವರಗಳನ್ನು ನೀಡುವುದು ಸೂಕ್ತವಲ್ಲ. ಹಣಕಾಸು ಸೇವಾ ಆಯೋಗವು ತನಿಖೆಯ ವಿಷಯವನ್ನು ಒಪ್ಪಿಕೊಳ್ಳುವುದಿಲ್ಲ ಅಥವಾ ತಿರಸ್ಕರಿಸುವುದಿಲ್ಲ. ಜಾಗತಿಕ ವ್ಯಾಪಾರ ಕಂಪನಿಗಳ ಮಾಹಿತಿಯನ್ನು ಬಹಿರಂಗಪಡಿಸುವುದು ಹಣಕಾಸು ಸೇವೆಗಳ ಕಾಯಿದೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಮತ್ತು ನಮ್ಮ ನಮ್ಮ ಖ್ಯಾತಿಗೆ ಅದು ಹಾನಿತರುತ್ತದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Adani-Hindenburg ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಗೆ ವರದಿ ಸಲ್ಲಿಕೆ, ಮೇ 12 ಕ್ಕೆ ವಿಚಾರಣೆ


ಹಿಂಡೆನ್‌ಬರ್ಗ್ ವರದಿ ಬಂದ ನಂತರ ಅದಾನಿ ಗ್ರೂಪ್‌ನ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಸಮೂಹದ ಮಾರುಕಟ್ಟೆ ಮೌಲ್ಯವು 19 ಲಕ್ಷ ಕೋಟಿಯಿಂದ ಸುಮಾರು 7 ಲಕ್ಷ ಕೋಟಿಗೆ ಕುಸಿದಿದೆ. ಷೇರಿನ ಬೆಲೆಗಳು ಶೇಕಡಾ 80 ಕ್ಕಿಂತ ಹೆಚ್ಚು ಕುಸಿದಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.