ಹೈದರಾಬಾದ್:‌ ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದ ಉದ್ಯಮಿ ರಾಮೋಜಿ ರಾವ್ (87) ಶನಿವಾರ ಜೂನ್‌ 08 ರಂದು ಚಿರ ನಿದ್ರೆಗೆ ಜಾರಿದ್ದಾರೆ. ರಾಮೋಜಿ ರಾವ್ ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಎಂಬ ಹಳ್ಳಿಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದರು.


COMMERCIAL BREAK
SCROLL TO CONTINUE READING

ರಾಮೋಜಿ ರಾವ್ ಚಿಟ್ ಫಂಡ್‌ಗಳೊಂದಿಗೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದರು. ನಂತರ1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ʻಈನಾಡುʼ ದಿನಪತ್ರಿಕೆ ಮೂಲಕ ತೆಲುಗು ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದರು. 10 ಆಗಸ್ಟ್, 1974 ರಂದು ವಿಶಾಖಪಟ್ಟಣಂನಲ್ಲಿ ಈನಾಡು ದಿನಪತ್ರಿಕೆ ಆರಂಭಿಸಿದ್ದರು. ತೆಲುಗು ಪತ್ರಿಕೋದ್ಯಮದಲ್ಲಿ ಈನಾಡು ದಿನಪತ್ರಿಕೆ ಹೊಸ ಯುಗಕ್ಕೆ ನಾಂದಿ ಹಾಡಿತು. ಈನಾಡು ಶುರುವಾಗಿ ನಾಲ್ಕೇ ವರ್ಷಗಳಲ್ಲಿ ಓದುಗರ ಅಚ್ಚುಮೆಚ್ಚಿನ ದಿನಪತ್ರಿಕೆಯಾಯಿತು. ಇದರ ಜೊತೆ ಸಿತಾರಾ ಸಿನಿಪತ್ರಿಕೆಯನ್ನೂ ರಾಮೋಜಿ ರಾವ್‌ ಆರಂಭಿಸಿದರು. ಇದು ಅವರ ಯಶಸ್ಸಿಗೆ ಪ್ರಮುಖ ಮೈಲಿಗಲ್ಲು ಆಗಿದೆ. 


ಇದನ್ನೂ ಓದಿ: Ramoji Rao: ಚಿರ ನಿದ್ರೆಗೆ ಜಾರಿದ ಮಾಧ್ಯಮ ರಂಗದ ಭೀಷ್ಮ ರಾಮೋಜಿ ರಾವ್.. ರಾಮೋಜಿ ಗ್ರೂಪ್ ಸಂಸ್ಥಾಪಕ ಇನ್ನು ನೆನಪು ಮಾತ್ರ


ಸ್ಥಳೀಯ ಜಾಹೀರಾತು ಮತ್ತು ಸ್ಥಳೀಯ ಆವೃತ್ತಿಗಳನ್ನು ಪ್ರಾರಂಭಿಸಿದರು. ಎಷ್ಟೋ ಹಿಂದಿ ಪತ್ರಿಕೆಗಳು ಅವರಿಂದ ಈ ಪಾಠ ಕಲಿತವು. ಕೃಷಿ ಮತ್ತು ರೈತರಿಗೆ ಅರಿವು ಮೂಡಿಸುವ ಅನ್ನದಾತ ಪತ್ರಿಕೆಯೊಂದಿಗೆ ಶುರುವಾದ ಅವರ ಮಾಧ್ಯಮ ಲೋಕದ ಪಯಣ ರಾಮೋಜಿ ಗ್ರೂಪ್‌ ಎಂಬ ಸಂಸ್ಥೆ ಹುಟ್ಟುಹಾಕುವ ಮಟ್ಟಕ್ಕೆ ಬೆಳೆಯಿತು. ಜಾಣ್ಮೆ ಮತ್ತು ಉತ್ತಮ ವ್ಯವಹಾರ ತರ್ಕದಿಂದಾಗಿ ಮಾಧ್ಯಮ ಸಾಮ್ರಾಜ್ಯವನ್ನು ನಿರ್ಮಿಸಿದರು.ದಕ್ಷಿಣ ಚಿತ್ರರಂಗದ ಸಿನಿಮಾಗಳನ್ನು ನಿರ್ಮಿಸಲು ಆರಂಭಿಸಿ ನಿರ್ಮಾಪಕರಾದರು. ಮಾಧ್ಯಮ ಉದ್ಯಮಕ್ಕೆ ಅವರ ಕೊಡುಗೆ ಗಣನೀಯವಾಗಿದೆ. ಇದೇ ಕಾರಣಕ್ಕೆ ಅವರನ್ನು "ಮಾಧ್ಯಮ ಲೋಕದ ಭೀಷ್ಮ" ಎಂದೇ ಕರೆಯಲಾಗುತ್ತದೆ. 


ಬಳಿಕ ರಾಮೋಜಿ ಫಿಲ್ಮ್‌ಸಿಟಿ ನಿರ್ಮಿಸಿದರು. ಗುರಿ ಸಾಧನೆಗೆ ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಯೋಧ ರಾಮೋಜಿ ರಾವ್​ ಅವರಾಗಿದ್ದಾರೆ. ರೈತನ ಮಗನಾಗಿ ಹುಟ್ಟಿ ಬೆಳೆದ ರಾಮೋಜಿ ರಾವ್ ಅವರು ಯಶಸ್ವಿ ಉದ್ಯಮಿಯಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದವರು. ಈಟಿವಿ ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ದಿಗ್ಗಜರಾಗಿ ಪ್ರಖ್ಯಾತರಾದರು.


ರಾಮೋಜಿ ಗ್ರೂಪ್ ಸಂಸ್ಥೆ ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ಮಾರ್ಗದರ್ಶಿ ಫೈನಾನ್ಷಿಯಲ್ ಸರ್ವಿಸಸ್, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ಕಲಾಂಜಲಿ ಶಾಪಿಂಗ್ ಮಾಲ್ ಮತ್ತು ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಹೀಗೆ ಇತರ ಹಲವು ವ್ಯವಹಾರಗಳನ್ನು ಹೊಂದಿದೆ. 


ಜನರ ಬದಲಾಗುವ ಅಭ್ಯಾಸಗಳಿಗೆ ಬೇಗನೆ ಹೊಂದಿಕೊಳ್ಳುತ್ತಿದ್ದ ರಾಮೋಜಿ ರಾವ್‌ ಈಟಿವಿ ಎಂಬ ವಾಹಿನಿಯನ್ನು ಶುರು ಮಾಡಿದರು. ಇದು ಸಹ ಅತಿ ವೇಗವಾಗಿ ಜನರನ್ನು ತಲುಪಿತು. "ನ್ಯೂಸ್ ಟೈಮ್" ಆರಂಭಿಸಿ, ಜನರಿಗೆ ಮನರಂಜನೆಯ ಜೊತೆಗೆ ಸುದ್ದಿ ನೀಡಲು ಶುರುಮಾಡಿದರು. ಈಟಿವಿ ವಾಹಿನಿಯಲ್ಲಿ ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋ, ಅಡುಗೆ ಕಾರ್ಯಕ್ರಮ, ಚಿಣ್ಣರಿಗಾಗಿ ವಿಶೇಷ ಶೋಗಳ ಜೊತೆಗೆ ಕಾಲ ಕಾಲಕ್ಕೆ ನ್ಯೂಸ್‌ ಕೂಡ ಪ್ರಸಾರವಾಗುತ್ತಿತ್ತು. 


ಇದನ್ನೂ ಓದಿ: ಆಗಸ್ಟ್ 18 ರಿಂದ ಬೆಂಗಳೂರು-ಲಂಡನ್ ನಡುವೆ ತಡೆರಹಿತ ವಿಮಾನ ಸೇವೆಗೆ ಚಾಲನೆ  


ಆ ಬಳಿಕ ʻಈಟಿವಿ ಭಾರತʼ ಎಂಬ ಡಿಜಿಟಲ್‌ ವಾಹಿನಿಯನ್ನ ಆರಂಭಿಸುವ ಮೂಲಕ ಮಾಧ್ಯಮವನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಗೆ ಮುನ್ನುಡಿ ಬರೆದರು. ʻಈಟಿವಿ ಭಾರತʼ 13 ಭಾಷೆಗಳಲ್ಲಿ ಜನರಿಗೆ ಸುದ್ದಿ ತಲುಪಿಸುತ್ತಿದೆ. ತಲೆಮಾರುಗಳು ಬದಲಾದಂತೆ ಆ ಹೊತ್ತಿನ ಆ ಜಮಾನಕ್ಕೆ ಹೊಂದುವಂತೆ ರಾಮೋಜಿ ರಾವ್‌ ತಮ್ಮ ಉದ್ಯಮವನ್ನು ಅಪ್‌ಡೇಟ್‌ ಮಾಡುತ್ತಿದ್ದರು. ಇದು ಅವರ ಯಶಸ್ಸಿಗೆ ಮೂಲ ಕಾರಣವಾಯಿತು. 


ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಅಕ್ಷರ ಯೋಧ ರಾಮೋಜಿ ರಾವ್​ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡವರು. ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿ,  ಈಟಿವಿ ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನ ದಿಗ್ಗಜರಾದವರು. ಮಾಧ್ಯಮ ಕ್ಷೇತ್ರದಲ್ಲಿ ಇವರು ನೀಡಿದ ಅಪಾರ ಕೊಡುಗೆ ಗುರುತಿಸಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.