7th Pay Commission : ಸರ್ಕಾರಿ ನೌಕರರ ಮೆಡಿಕಲ್ ಕ್ಲೈಂ ರಿಎಂಬೆಸ್ ಮೆಂಟ್ ಮಿತಿ ಹೆಚ್ಚಳ
7th Pay Commission Latest News : ಜುಲೈ 1 ರಿಂದ 52 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರ ತುಟ್ಟಿಭತ್ಯೆ ಹೆಚ್ಚಳವಾಗಲಿದೆ. ಜೊತೆಗೆ ತಮ್ಮ ಬಾಕಿ ಇರುವ ಡಿಎ ಕೂಡಾ ಸಿಗಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ, ಸಭೆ ನಡೆಯಲಿದೆ. ಇದೀಗ ಇದಕ್ಕೂ ಮೊದಲೇ ಮತ್ತೊಂದು ಸುದ್ದಿ ಹೊರ ಬಂದಿದೆ.
7th Pay Commission Latest News : ಜುಲೈ 1 ರಿಂದ 52 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರ ತುಟ್ಟಿಭತ್ಯೆ (DA) ಹೆಚ್ಚಳವಾಗಲಿದೆ. ಜೊತೆಗೆ ತಮ್ಮ ಬಾಕಿ ಇರುವ ಡಿಎ ಕೂಡಾ ಸಿಗಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ, ಸಭೆ ನಡೆಯಲಿದೆ. ಇದೀಗ ಇದಕ್ಕೂ ಮೊದಲೇ ಮತ್ತೊಂದು ಸುದ್ದಿ ಹೊರ ಬಂದಿದೆ. ನವೋದಯ ವಿದ್ಯಾಲಯದಲ್ಲಿ (Navodaya Vidhyalaya) ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯ ಜೊತೆಗೆ ಮೆಡಿಕಲ್ ಕ್ಲೈಂನ ಮಿತಿ ಕೂಡಾ ಹೆಚ್ಚಳವಾಗಲಿದೆ.
ಮೆಡಿಕಲ್ ರಿಎಂಬೆಸ್ ಮೆಂಟ್ ಮಿತಿ ಹೆಚ್ಚಳ:
ನವೋದಯ ವಿದ್ಯಾಲಯ (Navodaya Vidyalaya) ಶಾಲೆಗಳ ಪ್ರಾಂಶುಪಾಲರ ಮೆಡಿಕಲ್ ಕ್ಲೈಂ ಮಿತಿಯನ್ನು (Mediclaim limit) ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರಲ್ಲಿ, ಕಮಿಷನರ್, ಎನ್ವಿಎಸ್ (NVS) ಅನುಮೋದನೆಯೊಂದಿಗೆ, ತಮ್ಮ ಮತ್ತು ಅವರ ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಖರ್ಚು ಮಾಡುವ ಹಣದ ಮರುಪಾವತಿ ಮಿತಿಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ : Petrol price today : ರಾಜ್ಯದ 21 ಜಿಲ್ಲೆಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.99ರೂ
5,000 ರೂ ಬದಲು 25,000 ರೂ. :
ಶಿಕ್ಷಣ ಸಚಿವಾಲಯ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಎನ್‌ವಿಎಸ್ ಪ್ರಾಂಶುಪಾಲರ (NVS Principal) ವೈದ್ಯಕೀಯ ಹಕ್ಕಿನ ಮಿತಿಯನ್ನು ವಾರ್ಷಿಕವಾಗಿ 5000 ರೂ.ಗಳಿಂದ 25 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಸರ್ಕಾರಿ ಅಥವಾ ಸಿಜಿಹೆಚ್ಎಸ್ (CGHS) ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ, ಪ್ರಾಂಶುಪಾಲರಿಗೆ ವೈದ್ಯಕೀಯ ಮರುಪಾವತಿಯ ಮಿತಿಯನ್ನು ಈಗಿರುವ 5,000 ರೂ.ನಿಂದ 25 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಂದರೆ ಈ ಮೊತ್ತವನ್ನು ಐದು ಪಟ್ಟುಗಳಷ್ಟು ಹೆಚ್ಚಿಸಲಾಗಿದೆ.
AMA ಚಿಕಿತ್ಸೆಗೆ ಮೆಡಿಕಲ್ ರಿಎಂಬೆಸ್ ಮೆಂಟ್ ಹೆಚ್ಚಳ :
ಇದಲ್ಲದೆ, AMA (Against Medical Advice) ಚಿಕಿತ್ಸೆಗೆ ವೈದ್ಯಕೀಯ ಮರುಪಾವತಿಯ ಮಿತಿಯನ್ನು ಕೂಡಾ ಪರಿಷ್ಕರಿಸಿದೆ. ಎನ್‌ವಿಎಸ್‌ನ ಪ್ರಾಂಶುಪಾಲರು ಈಗ 5000 ರೂಗಳ ಬದಲು 15,000 ರೂ ಪಡೆಯಲಿದ್ದಾರೆ. Against Medical Advice ಅಂದರೆ ಯಾವುದೇ ರೋಗಿ ವೈದ್ಯರ ಅನುಮತಿಯಿಲ್ಲದೆ ಸ್ವತಃ ಡಿಸ್ಚಾರ್ಜ್ ಆಗಲು ಬಯಸುವುದು. ಇದನ್ನು ಹೊರತುಪಡಿಸಿ, ಉಳಿದ ನಿಯಮಗಳು ಮತ್ತು ಷರತ್ತುಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇದನ್ನೂ ಓದಿ : Gold Hallmarking ನಿಯಮಗಳಲ್ಲಿ ಬದಲಾವಣೆ ! ಇಂದು ಸಂಜೆ ಸರ್ಕಾರದ ಈ ತೀರ್ಮಾನ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.