ನವದೆಹಲಿ: ಹಬ್ಬದ ಸೀಸನ್‌ಗೂ ಮುನ್ನವೇ MG ತನ್ನ ಕೆಲವು ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯು ತನ್ನ ಜನಪ್ರಿಯ SUV ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಬೆಲೆಗಳನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಎಂಜಿ ಆಸ್ಟರ್ SUV ಬೆಲೆಯನ್ನು ಹೆಚ್ಚಿಸಿತ್ತು. ಇದೀಗ MG ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಬೆಲೆಗಳನ್ನು ಗರಿಷ್ಠ 28,000 ರೂ.ಗೆ ಹೆಚ್ಚಿಲಾಗಿದೆ.


COMMERCIAL BREAK
SCROLL TO CONTINUE READING

ಈ ಮೊದಲು ಆಸ್ಟರ್ ಬೆಲೆಯನ್ನು 10,000 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಸದ್ಯದ ಮಾರುಕಟ್ಟೆಯಲ್ಲಿ MG ಆಸ್ಟರ್ ಬೆಲೆ 10.32 ಲಕ್ಷದಿಂದ (base variant)18.23 ಲಕ್ಷ (Top spec variant) ರೂ.ವರೆಗೆ ಇದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರೈಸ್ ಆಗಿವೆ. ಇದೀಗ ಕಂಪನಿಯು ಮಾದರಿಗಳನ್ನು ಅವಲಂಬಿಸಿ ಹೆಕ್ಟರ್ SUV ಬೆಲೆಯನ್ನು 25,000 ರಿಂದ 28,000 ರೂ.ವರೆಗೆ ಹೆಚ್ಚಿಸಿದೆ. ಅದೇ ರೀತಿ ತಮ್ಮ ಡ್ಯುಯಲ್ ಟೋನ್ ಅಲಾಯ್ ಚಕ್ರಗಳನ್ನು ಹೊಂದಿರುವ ಮಾದರಿಗೆ ಗ್ರಾಹಕರು ಹೆಚ್ಚುವರಿಯಾಗಿ 10 ಸಾವಿರ ರೂ. ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ: Best Selling Bike: 70 ಸಾವಿರದ ಈ ಬೈಕ್ ಖರೀದಿಲು ಮುಗಿಬಿದ್ದ ಜನರು, ಬಿಸಿದೋಸೆಯಂತೆ ಬಿಕರಿ!


ಎಂಜಿ ಹೆಕ್ಟರ್‌ನ ಫೇಸ್‌ಲಿಫ್ಟ್ ಆವೃತ್ತಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬುದು ಗಮನಿಸಬೇಕಾದ ಸಂಗತಿ. MG ಮೋಟಾರ್ ಇಂಡಿಯಾ ಈಗಾಗಲೇ ಹೊಸ ಹೆಕ್ಟರ್‌ನ ಹಲವಾರು ಟೀಸರ್‌ಗಳನ್ನು ಬಿಡುಗಡೆ ಮಾಡಿದೆ. ಇದನ್ನು ಹಬ್ಬದ ಋತುವಿನಲ್ಲಿ (ಬಹುಶಃ ಅಕ್ಟೋಬರ್ 2022ರಲ್ಲಿ) ರಿಲೀಸ್ ಮಾಡಬಹುದು. ಈ SUV ದೊಡ್ಡ 14-ಇಂಚಿನ ಪೋರ್ಟ್ರೇಟ್ HD ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಮುಂದಿನ-ಜನ್ i-ಸ್ಮಾರ್ಟ್ ತಂತ್ರಜ್ಞಾನ ಹೊಂದಿರುತ್ತದೆ. ಇದು ವೈರ್‌ಲೆಸ್ Apple CarPlay ಮತ್ತು Android Auto ಸಂಪರ್ಕವನ್ನು ಬೆಂಬಲಿಸುತ್ತದೆ. ಇದು ಡ್ಯುಯಲ್-ಟೋನ್ ಇಂಟೀರಿಯರ್ ಥೀಮ್ ಮತ್ತು 7-ಇಂಚಿನ ಸಂಪೂರ್ಣ ಡಿಜಿಟಲ್ ಕಾನ್ಫಿಗರ್ ಮಾಡಬಹುದಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿರುತ್ತದೆ. ಆದರೆ, ಈ ಫೇಸ್‌ಲಿಫ್ಟ್ ಅನ್ನು ಪ್ರಾರಂಭಿಸುವ ಮೊದಲೇ ಕಂಪನಿಯು ಅಸ್ತಿತ್ವದಲ್ಲಿರುವ ಹೆಕ್ಟರ್‌ನ ಬೆಲೆಯನ್ನು ಹೆಚ್ಚಿಸಿದೆ.


MG Hector ಮತ್ತು Hector Plus SUV ಗಳು 2 ಎಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ. ಇವುಗಳಲ್ಲಿ 1.5-ಲೀಟರ್ ಪೆಟ್ರೋಲ್ ಘಟಕವು 141 Bhp ಮತ್ತು 250 Nmಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್, CVT ಅಥವಾ 7-ಸ್ಪೀಡ್ DCTಯೊಂದಿಗೆ ಲಭ್ಯವಿದೆ. ಅದೇ ರೀತಿ 2ನೇ ಎಂಜಿನ್ ಆಯ್ಕೆಯು 2.0-ಲೀಟರ್ ಡೀಸೆಲ್ ಆಗಿದ್ದು, ಇದು 168 Bhp ಮತ್ತು 350 Nmಅನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.


ಇದನ್ನೂ ಓದಿಅಗ್ಗದ ಬೆಲೆಯ ಬೈಕ್ ಬಿಡುಗಡೆ ಮಾಡಿದ ಹೀರೋ.! ಅತ್ಯಾಕರ್ಷಕವಾಗಿದೆ ಇದರ ಕಲರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.